ಎರ್ನಾಕುಲಂ(ಆ. 05)  ಕೇರಳ ಎರ್ನಾಕುಲಂ ಜಿಲ್ಲೆಯ  ಪುಥೆಕ್ರೂಜ್ ಪೊಲೀಸರು  ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.   75  ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಆಕೆ ಮೇಲೆ ಹಲ್ಲೆ ಮಾಡಿದ್ದ ಕಿರಾತಕರು ಪೊಲೀಸರ ವಶದಲ್ಲಿ ಇದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

66  ವ್ರರ್ಷದ  ಮಹಿಳೆ ಓಮನಾ ಎಂಬಾಕೆಯನ್ನು  ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.  ಈಕೆಯ ಮನೆಯಲ್ಲಿ ಅತ್ಯಾಚಾರ ಕೃತ್ಯ ನಡೆದಿದ್ದು ಸಾತ್ ನೀಡಿದ್ದಳು ಎಂಬ ಆರೋಪ ಇದೆ. ಓಮನಾ ಮಗ 46 ವರ್ಷದ ಮನೋಜ್, 50 ವರ್ಷದ ಮೋಹಮದ್ ಶಫಿ ಎಂಬ  ವಿಕೃತರನ್ನು ಅರೆಸ್ಟ್ ಮಾಡಲಾಗಿದೆ. 

ನೆನಪಿನ ಶಕ್ತಿ ಕಳೆದುಕೊಂಡ ಮಹಿಳೆ ಮೇಲೆ ಭಾನುವಾರ ಸಂಜೆ  ಕೃತ್ಯ ನಡೆದಿದೆ. ಮಹಿಳೆ ಪಕ್ಕದ ಮನೆಯಲ್ಲಿ ಇದ್ದಾಗ ಅತ್ಯಾಚಾರ ಎಸಗಲಾಗಿದೆ.  ತಂಬಾಕು ನೀಡುತ್ತೇನೆ ಎಂದು  ನಂಬಿಸಿ ಪಕ್ಕದ ಮನೆಯ ಮಹಿಳೆ ವೃದ್ಧೆಯನ್ನು ಕರೆಸಿಕೊಂಡಿದ್ದಳು.

ಬಾಯ್ ಫ್ರೆಂಡ್ ಜತೆ ನೈಟ್ ಔಟ್ ಹೋದ ಬಾಲಕಿಯರ ದುರಂತ ಕತೆ

ಕೃತ್ಯದ ನಂತರ ಮಹಿಳೆ ರಕ್ತ ಸುರಿಸುಕೊಂಡು ತಮ್ಮ ಮನೆಗೆ ಬಂದಿದ್ದಾರೆ.  ಮೇಲಿಂದ ಬಿದ್ದು ಪೆಟ್ಟಾಯಿತು ಎಂದು ಮಹಿಳೆ ಅಕ್ಕ ಪಕ್ಕದವರ ಬಳಿ ಹೇಳಿಕೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ  ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೊಲಂಛೆರಿಯ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಮಹಿಳೆಗೆ ಶಸ್ತ್ರಚಿಕಿತ್ಸೆ ಅಗತ್ಯ ಎಂದ ಮನಗಂಡ ವೈದ್ಯರು ಆರೈಕೆಗೆ ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಗುಪ್ತಾಂಗದ ಮೇಲೆ ಹಲ್ಲೆ ಆಗಿರುವುದು ಗೊತ್ತಾಗಿದೆ.  ಮೂತ್ರ ದ್ವಾರ ಮತ್ತು ಕರುಳಿಗೆ ಗಾಯವಾಗಿರುವುದು ಗೊತ್ತಾಗಿದೆ.

ಹರಿತವಾದ ಆಯುಧದಿಂದ ಮಹಿಳೆಯ ಗುಪ್ತಾಂಗದ ಮೇಲೆ ದಾಳಿ ಮಾಡಿರುವುದು ಗೊತ್ತಾಗಿದೆ. ಪಕ್ಕದ ಮನೆಯಲ್ಲಿ ನನ್ನ ಮೇಲೆ ದೌರ್ಜನ್ಯ ಆಗಿದೆ ಎಂದು ತಾಯಿ ಮಗನ ಬಳಿ ಹೇಳಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಸೂಕ್ತ ತನಿಖೆ ನಡೆಸಿ ಪಾಪಿಗಳಿಗೆ ಕಠೋರ ಶಿಕ್ಷೆ ವಿಧಿಸಿ ಎಂದು ತಿಳಿಸಿದ್ದಾರೆ.