ರಾಯ್ಪುರ(ಜು. 31)   ಬಾಯ್ ಫ್ರೆಂಡ್ ಗಳ ಜತೆ ನೈಟ್ ಔಟ್ ಗೆ ತೆರಳಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರವಾಗಿದೆ.   ಛತ್ತೀಸ್​ಗಢದ ಬಲೊಡಾ ಬಜಾರ್​ ಜಿಲ್ಲೆಯ ಪಲಾರಿ ಗ್ರಾಮದಲ್ಲಿ ನೈಟ್​ ಔಟ್​ಗೆ ತೆರಳಿದ್ದ 14 ಮತ್ತು 16 ವರ್ಷದ ಬಾಲಕಿಯರನ್ನು ಬ್ಲ್ಯಾಕ್​ಮೇಲ್​ ಮಾಡಿ ಎರಡು ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಮೇ 31ರ ರಾತ್ರಿ 11.30ರಲ್ಲಿ ಇಬ್ಬರು ಬಾಲಕಿಯರು ಮನೆಯವರಿಗೆ ಗೊತ್ತಾಗದ ಹಾಗೆ ತಮ್ಮಿಬ್ಬರು ಬಾಯ್​ಫ್ರೆಂಡ್​ಗಳ ಜತೆ ನೈಟ್​ ಔಟ್​ಗೆ ಬೈಕ್​ನಲ್ಲಿ ತೆರಳಿದ್ದರು. ಇದು ಬಾಲಕಿಯರ ಸಹೋದರ ಸಂಬಂಧಿಯೊಬ್ಬನಿಗೆ ಗೊತ್ತಾಗಿದೆ.  ತನ್ನ ಸ್ನೇಹಿತರ ಗುಂಪಿನೊಂದಿಗೆ ಗ್ರಾಮದ ನಿರ್ಜನ ಪ್ರದೇಶಕ್ಕೆ ತೆರಳಿ ಬಾಲಕಿಯರು ವಾಪಸು ಬರುವುದನ್ನೆ ತಂಡ ಕಾಯುತ್ತಾ ಕುಳಿತಿದೆ.

ಕಿತಾಪತಿ ಮಾಡಿದವನಿಗೆ ಮಂಡ್ಯದ ಯುವತಿಯಿಂದ ಬಿಸಿ ಬಿಸಿ ಕಜ್ಜಾಯ

ತಡರಾತ್ರಿ 2 ಗಂಟೆಯಲ್ಲಿ ಬಾಲಕಿಯರು ತಮ್ಮ ಬಾಯ್​ಫ್ರೆಂಡ್​ಗಳ ಜತೆ ಗ್ರಾಮಕ್ಕೆ ಹಿಂದಿರುಗುತ್ತಿದ್ದಿದನ್ನು ಗಮನಿಸಿ ಅವರನ್ನು ತಡೆದ ಸಹೋದರ ಸಂಬಂಧಿ ಮತ್ತು ಆತನ ಸ್ನೇಹಿತರ ಗುಂಪು ಮೊದಲು ಯುವಕರ ಮೇಲೆ ಹಲ್ಲೆ ಮಾಡಿದೆ.  ಬಳಿಕ ಇಬ್ಬರು ಬಾಲಕಿಯರ ಎಳೆದೊಯ್ದು  2 ಗಂಟೆ  ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ತಾವು ಮಾಡುತ್ತಿದ್ದ  ಹೇಯ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಕೊರೋನಾ ಟೆಸ್ಟ್ ಗೆ ಎಂದು ಗುಪ್ತಾಂಗದ ಸ್ಯಾಂಪಲ್ ಪಡೆದ ಕಿರಾತಕ

ಇದಾದ ಮೇಲೆ ಪ್ರತಿದಿನ ಬಾಲಕಿಯರಿಗೆ ಕರೆ ಬರಲು ಆರಂಭವಾಗಿದೆ.  ನಮ್ಮ ಬಳಿ ಬಂದು ಸಹಕರಿಸದೇ ಇದ್ದರೆ ವಿಡಿಯೋ ಅಪ್ ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಹೆದರುತ್ತಿದ್ದ ಸಹೋದರಿಯರು ಅವರ ಕರೆದಲ್ಲೆಲ್ಲ ಅನಿವಾರ್ಯವಾಗಿ ಹೋಗುತ್ತಿದ್ದರು.

ಆದರೆ, ಜು.29ರಂದು ಅಪರಿಚಿತ ವ್ಯಕ್ತಿಯೊಬ್ಬ ಸಹೋದರಿಯರಿಗೆ ಕರೆ ಮಾಡಿದ್ದಾನೆ. ಅತ್ಯಾಚಾರದ ದೃಶ್ಯಗಳು ನನ್ನ ಬಳಿ ಇವೆ. ನೀವು ಬಂದು ನನ್ನೊಂದಿಗೆ ಸಹಕರಿಸದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಈಗ ಮತ್ತಷ್ಟು ಆತಂಕಕ್ಕೆ ಸಿಲುಕಿದ ಹುಡುಗಿಯರು ಪೊಲೀಸರ ಮೊರೆ ಹೋಗಿದ್ದಾರೆ. .  ಬಾಲಕಿಯರ ಸಹೋದರ ಸಂಬಂಧಿ ಸೇರಿ 8 ಯುವಕರನ್ನು ಪೊಲೀಸರು ಬಂಧಿಸಿ  ವಿಚಾರಣೆಗೆ ಒಳಪಡಿಸಿದ್ದಾರೆ.