Asianet Suvarna News Asianet Suvarna News

ಸರ್ಕಾರಿ ನೌಕರಿ ಸಿಕ್ಕಿದ್ದಕ್ಕೆ ವಿಕಲಚೇತನ ಗೆಳತಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ ಸ್ನೇಹಿತ

ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಒಟ್ಟಿಗೆ ಬೆಳೆದಿದ್ದ ವಿಕಲಚೇತನ ಯವತಿಗೆ ಸರ್ಕಾರಿ ಕೆಲಸ ಸಿಕ್ಕಿದ ನಂತರ ಆಕೆಯ ಸ್ನೇಹಿತನೇ ಕಿಡ್ನಾಪ್ ಮಾಡಿಕೊಂಡು ಹೋಗಿ ಅತ್ಯಾಚಾರ ಮಾಡಿದ ದುರ್ಘಟನೆ ನಡೆದಿದೆ.

Bengaluru friend raped disabled girlfriend for she get government job sat
Author
First Published Apr 25, 2024, 11:20 AM IST | Last Updated Apr 25, 2024, 11:20 AM IST

ಬೆಂಗಳೂರು (ಏ.25): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಒಟ್ಟಿಗೆ ಬೆಳೆದಿದ್ದ ವಿಕಲಚೇತನ ಯವತಿಯನ್ನು ಆಕೆಯ ಸ್ನೇಹಿತನೇ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಕರೆದೊಯ್ದು ಅತ್ಯಾಚಾರ ಮಾಡಿದ ದುರ್ಘಟನೆ ನಡೆದಿದೆ.

ಈ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅತ್ಯಾಚಾರ ಮಾಡಿದ ಆರೋಪಿಯನ್ನು ಮನು ಎಂದು ಗುರುತಿಸಲಾಗಿದೆ. ಯುವತಿ ಮತ್ತು ಆರೋಪಿ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಆದರೆ, ಯುವತಿ ವಿಶೇಷ ಚೇತನಳಾದ್ದರಿಂದ ಯುವಕ ಮೊದಲು ಆಕೆಯೊಂದಿಗೆ ಹೆಚ್ಚು ಸಲುಗೆಯಿಂದ ಇರಲು ಒಪ್ಪುತ್ತಿರಲಿಲ್ಲ. ಆದರೆ, ಕೆಲವು ದಿನಗಳ ಹಿಂದೆ ವಿಕಲಚೇತನ ಯುವತಿಗೆ ಸರ್ಕಾರಿ ಕೆಲಸ ಸಿಕ್ಕಿತ್ತು. ಸರ್ಕಾರಿ ಕೆಲಸ ಸಿಕ್ಕಿದ್ದರಿಂದ ಯುವತಿ ಕಚೇರಿಗೆ ಹತ್ತಿರದಲ್ಲಿದ್ದ ಒಂದು ಪೇಯಿಂಗ್ ಗೆಸ್ಟ್‌(ಪಿಜಿ)ನಲ್ಲಿ ಉಳಿದುಕೊಂಡಿದ್ದಾಳೆ. ಜೊತೆಗೆ, ಆರಂಭದಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಸ್ನೇಹಿತನಿಗೆ ಸಮಯ ಕೊಡಲಾಗದೇ ಸ್ವಲ್ಪ ಬ್ಯೂಸಿ ಆಗಿದ್ದಾಳೆ. ಹೀಗಾಗಿ, ತನ್ನ ಹಳೆಯ ಸ್ನೇಹಿತನನ್ನು ಕೂಡ ಹೆಚ್ಚು ಸಂಪರ್ಕ ಮಾಡಲಾಗದೇ ಅವೈಡ್ ಮಾಡಿದ್ದಾಳೆ.

ಅತಿಯಾದ ಕಾಮದಾಹಕ್ಕೆ ಬಲಿಯಾದ ಬೆಂಗಳೂರು ಆಂಟಿ; ಅಶ್ಲೀಲ ವಿಡಿಯೋ ಭಂಗಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯ!

ಇದರಿಂದ ಕೋಪಗೊಂಡ ಮನು ನೀನು ತನ್ನನ್ನು ಅವೈಡ್ ಮಾಡುತ್ತಿದ್ದೀಯಾ ಎಂದು ಜಗಳ ಮಾಡಿದ್ದಾನೆ. ಆದರೂ ಯುವತಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿಲ್ಲ. ಇದರಿಂದ ಮತ್ತಷ್ಟು ಕುಪಿತಗೊಂಡ ಆಕೆಯ ಸ್ನೇಹಿತ ಅತ್ಯಾಚಾರ ಮಾಡಿದರೆ ಆಕೆ ತನ್ನವಳಾಗುತ್ತಾಳೆ ಎಂದು ಯೋಜನೆ ರೂಪಿಸಿದ್ದಾನೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಿಡ್ನಾಪ್ ಮಾಡಿಕೊಂಡು ಕರೆದೊಯ್ದು ಅತ್ಯಾಚಾರ ಮಾಡುವುದಕ್ಕೆ ಸಂಪೂರ್ಣ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಅದರಂತೆ ಯುವಕ ಮನು ತನ್ನ ಸ್ನೇಹಿತರಾದ ರಾಘವೇಂದ್ರ, ಕರಿಯಪ್ಪ ಎಂಬುವರ ಸಹಾಯದಿಂದ ವಿಕಲಚೇತನ ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಕಾರಿನಲ್ಲಿ ಕರೆದೊಯ್ದಿದ್ದಾನೆ.

ಮದ್ವೆ ಭರವಸೆ : ಪ್ರಸಿದ್ಧ ಮಠದ ಸ್ವಾಮೀಜಿ ಸಹೋದರ ಉಪನ್ಯಾಸಕಿ ಬಳಿ ಕಾಮದಾಹ ತೀರಿಸ್ಕೊಂಡು ವಂಚನೆ

ಬೆಂಗಳೂರಿನಿಂದ ದೂರದ ಹಿರಿಯೂರು ಕಡೆಗೆ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಅಲ್ಲಿ ಅತ್ಯಾಚಾರ ಮಾಡಿದ್ದಾನೆ. ಆತನ ಕೃತ್ಯಕ್ಕೆ ಇನ್ನೂ ನಾಲ್ಕು ಜನರು ಸಹಾಯ ಮಾಡಿದ್ದಾರೆ. ಇನ್ನು ಘಟನೆ ನಡೆದ ನಂತರ ಬೆಂಗಳೂರಿಗೆ ಬಂದ ಯುವತಿ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯುವತಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಮುಖ್ಯ ಆರೋಪಿ ಮನು ಹಾಗೂ ಆತನ ಸ್ನೇಹಿತರಾದ ರಾಘವೇಂದ್ರ, ಕರಿಯಪ್ಪ ಸೇರಿ ಐವರನ್ನು ಬಂಧಿಸಲಾಗಿದೆ. ಹೈಗ್ರೌಂಡ್ಸ್ ಪೊಲೀಸರಿಂದ ತನಿಖೆ ಮುಂದುವರಿದಿದೆ.

Latest Videos
Follow Us:
Download App:
  • android
  • ios