ಕಂಠಪೂರ್ತಿ ಕುಡಿದು ಬಂದವ್ನು ಹೆಣವಾದ: ಸಣ್ಣಪುಟ್ಟ ಕಳ್ಳತನವೇ ಕೊಲೆಗೆ ಕಾರಣವಾಗಿಬಿಡ್ತಾ..?
* ಸೆಕ್ಯುರಿಟಿ ಗಾರ್ಡ್ ಕೊಲೆ ಕೇಸ್
* ಸಾಗರ್ ಸೇರಿದಂತೆ ಇಬ್ಬರು ಬಾಲಾಪರಾಧಿಗಳ ಬಂಧನ
* ಕಳ್ಳತನ ಮಾಡಿಕೊಂಡು ಕುಡಿತಕ್ಕೊಸ್ಕರ ಮಾರಾಟ ಮಾಡ್ತಿದ್ದ ಆರೋಪಿ
ಬೆಂಗಳೂರು(ಜೂ.29): ಜೀವನಭೀಮಾನಗರ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಶೀಲ್ ಎಂಬ ಸೆಕ್ಯುರಿಟಿ ಗಾರ್ಡ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸಲಾಗಿದೆ.
ಮೂಲತ: ನೇಪಾದ ಕಡಾಲಿ ಜಿಲ್ಲೆಯವನಾದ ಸುಶೀಲ್ ಕಳೆದ ಐದಾರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ. ಹೀಗಿದ್ದವ್ನಿಗೆ ಪರಿಚಯವಾದವನೇ ನೇಪಾಳ ಮೂಲದ ಇದೇ ಸಾಗರ್. ಏಂಜಲ್ ಸೆಕ್ಯುರಿಟಿ ಏಜನ್ಸಿಯಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡಿಕೊಂಡಿದ್ದ ಸಾಗರ್. ಇತ್ತೀಚಿಗೆ ಜೀವನ್ ಭೀಮಾನಗರದ ಬಿಡಿಎ ಲೇಔಟ್ ನಲ್ಲಿ ಬ್ಯಾಂಕ್ ಒಂದು ಸೀಜ್ ಮಾಡಿದ್ದ ಕಟ್ಟಡದಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡಿಕೊಂಡಿದ್ದ. ಹೀಗಿದ್ದ ಸಾಗರ್ ನನ್ನ ಪದೇ ಪದೇ ಮಾತನಾಡಿಸಲು ಇದೇ ಸುಶೀಲ್ ಬರ್ತಿದ್ದ. ಏನೂ ಕೆಲಸವಿಲ್ಲದೇ ಕೂತಿದ್ದ ಸುಶೀಲ್ ಪದೇ ಪದೇ ಸಾಗರ್ ಇದ್ದ ಬ್ಯಾಂಕ್ ಕಟ್ಟಡಕ್ಕೆ ಬಂದು ಗ್ಯಾಸ್ ಇನ್ನಿತರ ವಸ್ತುಗಳನ್ನ ಕಳ್ಳತನ ಮಾಡಿಕೊಂಡು ಕುಡಿತಕ್ಕೊಸ್ಕರ ಮಾರಾಟ ಮಾಡ್ತಿದ್ದ.
ಅಣ್ಣನಂತಿದ್ದವನನ್ನೇ ಕೊಂದು ಮುಗಿಸಿದ್ದ ರೌಡಿ ಶೀಟರ್!
ಯಾವಾಗ ತಾನಿದ್ದ ಜಾಗಕ್ಕೆ ಸುಶೀಲ್ ಬಂದು ಕಳ್ಳತನ ಮಾಡ್ತಿದ್ದ ಎಂಬ ಮಾಹಿತಿ ತಿಳಿತೋ ಆಗ್ಲೇ ಸಾಗರ್, ಸುಶೀಲನನ್ನ ದೂರವಿಡೋಕೆ ಶುರುಮಾಡಿದ್ದ. ಇದರಿಂದ ಸಿಟ್ಟಾದ ಸುಶೀಲ್ ಜೂನ್ 13 ರಂದು ಕಂಠಪೂರ್ತಿ ಕುಡಿದು ಸಾಗರ್ ಇದ್ದ ಕಟ್ಟಡದ ಬಳಿ ಬಂದಿದ್ದ. ಹೀಗೆ ಬಂದವ್ನು ಸುಖಾಸುಮ್ಮನೆ ಸಾಗರ್ ಜೊತೆ ಗಲಾಟೆಗಿಳಿದು ಬಾಯಿಗೆ ಬಂದಂತೆ ಬೈದಿದ್ದ. ಅಷ್ಟಕ್ಕೆ ಕೆಂಡಾಮಂಡಲನಾದ ಸಾಗರ್ ಇನ್ನೂ ಮೀಸೆ ಚಿಗುರದ ಇಬ್ಬರು ಹುಡುಗರನ್ನ ಕರೆಸಿಕೊಂಡು ಕಟ್ಟಡದ ಸ್ಲ್ಯಾಬ್ ಮೇಲೆ ಇದೇ ಸುಶೀಲನ ಮೇಲೆ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದ. ತೀವ್ರ ರಸ್ತಸ್ರಾವದಿಂದ ಎದ್ದೇಳಲಾಗದೇ ಪೆಟ್ಟು ತಿಂದ ಜಾಗದಲ್ಲೇ ಸುಶೀಲ ನರಳಿ ನರಳಿ ಸತ್ತಿದ್ದ.
ಕೊಲೆ ಪ್ರಕರಣವನ್ನ ದಾಖಲಿಸಿಕೊಂಡ ಜೀವನ್ ಭೀಮಾನಗರ ಪೊಲೀಸ್ರು ಸದ್ಯ ಆರೋಪಿಗಳಾದ ಸಾಗರ್ ಸೇರಿದಂತೆ ಇಬ್ಬರು ಬಾಲಾಪರಾಧಿಗಳನ್ನ ಬಂಧಿಸಿದ್ದಾರೆ. ಒಟ್ಟಿನಲ್ಲಿ ಕುಡುಕ ಸ್ನೇಹಿತನ ಕಾಟ ತಡಿಯೋಕಾಗ್ದೇ ಸಾಗರ್ ಕೊಲೆ ಮಾಡಿ ಇದೀಗ ಮುದ್ದೆ ಮುರೀತಿದ್ದಾನೆ.