ಹುಬ್ಬಳ್ಳಿ(ಮಾ.03): ಹುಬ್ಬಳ್ಳಿ ಅರಣ್ಯ ವಲಯದಲ್ಲಿ ಅವ್ಯವಹಾರ ನಡೆದಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನಿವೃತ್ತ ಆರ್‌ಎಫ್‌ಒ ಮತ್ತು ಇಬ್ಬರು ಗುತ್ತಿಗೆದಾರರನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು, ಮೂವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

2014-15 ಹಾಗೂ 2015-16ರಲ್ಲಿ ಹುಬ್ಬಳ್ಳಿ ಅರಣ್ಯ ವಲಯದಲ್ಲಿ ಹಸಿರೀಕರಣ ಯೋಜನೆಯಡಿಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಮಂಜುನಾಥ ಬದ್ದಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 1.20 ಕೋಟಿ ದುರುಪಯೋಗವಾಗಿರುವ ಬಗ್ಗೆ ಸಾಕ್ಷ್ಯಗಳನ್ನು ಕ್ರೋಡೀಕರಿಸಿ, ಮೂವರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಧಾರವಾಡ: ತುಪರಿಹಳ್ಳದ ಪ್ರವಾಹ, ಶಾಶ್ವತ ಪರಿಹಾರಕ್ಕೆ DPR

ಬಂಧಿತರನ್ನು ನಿವೃತ್ತ ಆರ್‌ಎಫ್‌ಒ ಸಿ.ಎಚ್‌. ಮಾವಿನತೋಪು, ಗುತ್ತಿಗೆದಾರರಾದ ದತ್ತಾತ್ರೇಯ ಪಾಟೀಲ ಹಾಗೂ ವಿನಾಯಕ ಪಾಟೀಲ ಎಂದು ಗುರುತಿಸಲಾಗಿದ್ದು, ಕಾರ್ಯಾಚರಣೆಯು ಎಸಿಬಿ ಉತ್ತರ ವಲಯದ ಪೊಲೀಸ್‌ ಅಧೀಕ್ಷಕ ಬಿ.ಎಸ್‌. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಎಲ್‌.ವೇಣುಗೋಪಾಲ ಹಾಗೂ ತನಿಖಾ ಸಹಾಯಕ ಶಿವಾನಂದ ಕೆಲವಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು.