ಟಿಪ್ಪು ನಿಜಕನಸುಗಳು ಪುಸ್ತಕ ಬಿಡುಗಡೆ: ಲೇಖಕ ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಕರೆ
ಟಿಪ್ಪು ಪುಸ್ತಕ ಪಬ್ಲಿಷ್ ಮಾಡಿದ ಹಿನ್ನಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರಿಗೆ ಧಮ್ಕಿ ಹಾಕಿದ ದುಷ್ಕರ್ಮಿಗಳು
ಬೆಂಗಳೂರು(ನ.16): ಟಿಪ್ಪು ನಿಜಕನಸುಗಳು ಪುಸ್ತಕ ಬಿಡುಗಡೆ ಹಿನ್ನಲೆಯಲ್ಲಿ ಲೇಖಕ ರೋಹಿತ್ ಚಕ್ರತೀರ್ಥ ಅವರಿಗೆ ಬೆದರಿಕೆ ಕರೆ ಬಂದಿದೆ. ಹೌದು, ಟಿಪ್ಪು ಪುಸ್ತಕ ಪಬ್ಲಿಷ್ ಮಾಡಿದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ರೋಹಿತ್ ಚಕ್ರತೀರ್ಥ ಅವರಿಗೆ ಧಮ್ಕಿ ಹಾಕಿದ್ದಾರೆ.
ಟಿಪ್ಪು ನಿಜಕನಸುಗಳು ಪುಸ್ತಕ ಅಯೋಧ್ಯ ಪ್ರಕಾಶನ ಮುದ್ರಣ ಮಾಡಿದೆ. ಅಯೋಧ್ಯ ಪ್ರಕಾಶನ ರೋಹಿತ್ ಚಕ್ರತೀರ್ಥ ಅವರ ಒಡೆತನದ ಸೇರಿದ್ದಾಗಿದೆ. ಅಯೋಧ್ಯ ಪ್ರಕಾಶನದ ಕಚೇರಿ 9620916996 ನಂಬರ್‌ಗೆ ಕರೆ ಮಾಡಿದ್ದ ಕಿಡಿಗೇಡಿಗಳು ನಿಮ್ಮ ಆಫೀಸ್ ಒಡೆದು ಹಾಕುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.
ರೋಹಿತ್ ಚಕ್ರತೀರ್ಥನ ವಕ್ರಬುದ್ಧಿ ಸರ್ಕಾರ ಸರಿ ಮಾಡಲಿ: ಬಸವಯೋಗಿಪ್ರಭು ಸ್ವಾಮೀಜಿ
ನಿಮ್ಮನ್ನು ನಾಶ ಮಾಡುವುದಾಗಿ ದುಷ್ಕರ್ಮಿಗಳು ಕನ್ನಡ ಭಾಷೆಯಲ್ಲೇ ಮಾತನಾಡಿದ್ದಾರೆ. ಫೋನ್ ಕರೆ ಸ್ವೀಕರಿಸಿದ್ದ ಕಚೇರಿ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ. +911205078322 ನಂಬರ್‌ನಿಂದ ಕರೆ ಬಂದಿದೆ.
ದುಷ್ಕರ್ಮಿ ಸುಮಾರು ಎರಡರಿಂದ ಮೂರು ನಿಮಿಷಗಳ ಕಾಲ ಕರೆ ಮಾಡಿ ಮಾತನಾಡಿದ್ದಾನೆ. ಈ ಸಂಬಂಧ ಅಯೋಧ್ಯ ಪ್ರಕಾಶನ ಮಾಲೀಕ ರೋಹಿತ್ ಚಕ್ರತೀರ್ಥ ಅವರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.