Asianet Suvarna News Asianet Suvarna News

ಗೃಹ ಸಚಿವ, ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಇಬ್ಬರ ಬಂಧನ

ಮಡಿಕೇರಿಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು ಈ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ಜೋರಾಗಿಯೇ ನಡೆಯುತ್ತಿದೆ.

thirthahalli Police Arrests Tow Youths Over derogatory Post In FB Against Siddaramaiah And Arga Jnanendra rbj
Author
Bengaluru, First Published Aug 20, 2022, 1:27 PM IST

ಶಿವಮೊಗ್ಗ, (ಆ.20): ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್  ಹಾಕಿದ್ದ ಇಬ್ಬರನ್ನು ತೀರ್ಥಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವಕಾಂಗ್ರೆಸ್ ನ ಕೆಳಕೆರೆ ಪೂರ್ಣೇಶ್ ಮತ್ತು ಶ್ರೀರಾಮ ಸೇನೆಯ ಜಿಗಲಗೋಡು ವಿಶ್ವಾಸ್ ಬಂಧಿತ ಆರೋಪಿಗಳು.

ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದ ಮೇರೆಗೆ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದ ಮೇರೆಗೆ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದರಾಮಯ್ಯನವರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದ ಪ್ರಕರಣ ಉಲ್ಲೇಖಿಸಿ ಆರಗ ಜ್ಞಾನೇಂದ್ರ ವಿರುದ್ಧ ಕೆಳಕೆರೆ ಪೂರ್ಣೇಶ್ ಎಂಬುವರು ಪೋಸ್ಟ್ ಬರೆದುಕೊಂಡಿದ್ದು, ಗೃಹ ಸಚಿವರೆ ನಿಮಗೂ ಕಪ್ಪು ಬಾವುಟ ಪ್ರದರ್ಶನ ಮತ್ತು ಮೊಟ್ಟೆ ಎಸೆಯುತ್ತೇವೆ ಬಿಡೊಲ್ಲ. ನಾಚಿಕೆ ಆಗಬೇಕು ನಿಮಗೂ ನಿಮ್ಮ ಇಲಾಖೆಗೂ,ನಿಮ್ಮ ಇಲಾಖೆ ಬಗ್ಗೆ ಯಾವ ಭಯವಿಲ್ಲ. ಸುಮ್ಮನಿದ್ದೀನಿ ಎಂದರೆ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ಮಾತ್ರ ಎಂಬ ಪೋಸ್ಟ್ ಹರಿಬಿಟ್ಟಿದ್ದರು. 

ತೀವ್ರ ಸ್ವರೂಪ ಪಡೆದುಕೊಂಡ ಮೊಟ್ಟೆ ಗಲಾಟೆ, ಮತ್ತೊಂದು ರಣಕಹಳೆ ಮೊಳಗಿಸಲು ಸಿದ್ದರಾಮಯ್ಯ ಟೀಮ್ ಸಜ್ಜು

ಇನ್ನು ಶ್ರೀರಾಮ ಸೇನೆಯ ಜಿಗಲಗೋಡು ವಿಶ್ವಾಸ್ ಎನ್ನುವರು ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಹಾಕಿದ್ದು, ಸಿದ್ದರಾಮಯ್ಯರಿಗೆ ಚಪ್ಪಲಿ ಹಾರ ಹಾಕುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಇದು ತೀರ್ಥಹಳ್ಳಿ ಪೊಲೀಸರ ಗಮನಕ್ಕೆ ಬಂದಿದ್ದು, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

12 ಜನ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ 
ಧಾರವಾಡ (ಆ.20) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆಹೊಡೆದಿರುವುದನ್ನು ಖಂಡಿಸಿ ಧಾರವಾಡದಲ್ಲಿ ಶುಕ್ರವಾರ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯ ವೇಳೆ ಕೆಲವರು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್‌ ಅವರ ಭಾವಚಿತ್ರವನ್ನು ಕಾಲಿನಲ್ಲಿ ತುಳಿದು, ಅದರ ಮೇಲೆ ಮೊಟ್ಟೆಒಡೆದು, ಬಳಿಕ ಉರಿಯುತ್ತಿರುವ ಬೆಂಕಿಯಲ್ಲಿ ಹಾಕಿ ಸುಟ್ಟು ಹಾಕಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 12 ಜನ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.

ಪ್ರತಿಭಟನೆ ವೇಳೆ ಸಾವರ್ಕರ್‌ಗೆ ಅವಮಾನ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಶಿವಾನಂದ ಸತ್ತಿಗೇರಿ ದೂರು ದಾಖಲಿಸಿದ್ದಾರೆ.   12 ಜನ ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಎಪ್ ಐ ಆರ್ ದಾಖಲು. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿ‌ನ್ನೆ ಸಂಜೆ ನಡೆದ ಪ್ರಕರಣ, ಪ್ರತಿಭಟನೆ ವೇಳೆ ಸಾರ್ವಕರ್ ಪೋಟೋ ಸುಟ್ಡು ಮೊಟ್ಟೆ ಹೊಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರು,  ಸ್ವಾತಂತ್ರ ಹೋರಾಟಗಾರರಿಗೆ ಅವಮಾನ ಮಾಡಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್.

ಅಲ್ತಾಪ್ ಹಳ್ಳೂರ, ಅನಿಲ ಪಾಟೀಲ, ನಾಗರಾಜ್ ಗೌರಿ, ಆನಂದ ಸಿಂಗನಾಥ್,ಆಸಿಪ್ ಸನದಿ, ಸೌರಬ್ , ಅರವಿಂದ ಏಗನಗೌಡರ್, ಮೈನುದ್ದಿನ ನಧಾಪ್, ಮನೋಜ್ ಕರ್ಜಗಿ ರಾಬರ್ಟ, 12 ಜನ ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios