Asianet Suvarna News Asianet Suvarna News

ಕಾರು ಕದ್ದು ₹15 ಲಕ್ಷಕ್ಕೆ ರಾಜ್ಯ ಬಿಜೆಪಿ ಮುಖಂಡಗೆ ಮಾರಿದ ಕಳ್ಳರು!

ಮಂಗಳೂರಿನ ಮಹಿಳೆಯೊಬ್ಬರಿಗೆ ಸೇರಿದ ಕಾರನ್ನು ಕದ್ದು ತಂದ ಕಳ್ಳರು ಬೆಂಗಳೂರಿನಲ್ಲಿ ಬಿಜೆಪಿ ಮುಖಂಡನಿಗೆ ₹15 ಲಕ್ಷಕ್ಕೆ ಮಾರಿದ ಘಟನೆ ನಡೆದಿದ್ದು,  ನಾಲ್ವರ ವಿರುದ್ಧ ಕೇಸ್‌ ದಾಖಲಾಗಿದೆ.

Thieves who stolen a car from mangaluru and sold  in bengaluru to BJP leader gow
Author
First Published Jul 2, 2024, 6:58 PM IST

ಪೀಣ್ಯ ದಾಸರಹಳ್ಳಿ (ಜು.2): ಕದ್ದ ಕಾರನ್ನು ರಾಜಕಾರಣಿ ಒಬ್ಬರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಪಡೆದು ಖದೀಮರು ವಂಚನೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಉದ್ಯಮಿ ರಾಜೇಶ್ ಅವರಿಗೆ ₹15.60 ಲಕ್ಷಕ್ಕೆ ಇನ್ನೋವಾ ಕಾರನ್ನು ಮಾರಾಟ ಮಾಡಿ ವಂಚಿಸಲಾಗಿದೆ. ಬಾಲರಾಜ್, ಪ್ರಭಾಕರ್, ಶಫಿ ಮತ್ತು ಪುಟ್ಟ ಎಂಬುವರು ಕಾರು ಮಾರಾಟ ಮಾಡಿ ವಂಚನೆ ಮಾಡಿದ್ದಾರೆ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಜೇಶ್ ದೂರು ನೀಡಿದ್ದಾರೆ.

ಸ್ನೇಹಿತನ್ನೇ ರೇಪ್ ಮಾಡಿ ಮನೆ ದೋಚಿದ ಹೆಚ್‌ಐಪಿ ಪೀಡಿತ!

ಆರೋಪಿಗಳು ಮಂಗಳೂರಿನ ಮಾಲತಿ ಎಂಬುವರ ಇನೋವಾ ಕಾರನ್ನು ಕಳ್ಳತನ ಮಾಡಿ, ರಾಜೇಶ್ ಅವರಿಗೆ ₹15.60 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಮೊದಲು ₹5.60 ಲಕ್ಷ ನಗದು ಹಣವನ್ನು ಮುಂಗಡವಾಗಿ ಪಡೆದು ಉಳಿದ ₹10 ಲಕ್ಷಕ್ಕೆ ಚೆಕ್ ಪಡೆದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಳೆಯ ನೆರೆ, ಮುಖ್ಯದ್ವಾರವನ್ನೇ ಬಂದ್‌ ಮಾಡಿದ ಗ್ರಾಮಸ್ಥರು!

ಆರೋಪಿಗಳಿಗೆ ಕಾರಿನ ನೈಜ ದಾಖಲೆಗಳನ್ನು ಕೇಳಿದಾಗ ಆರೋಪಿ ಬಾಲರಾಜ್ ಆರ್.ಸಿ ಕಾರ್ಡ್‌ ಸೇರಿದಂತೆ ನಕಲಿ ದಾಖಲೆ ನೀಡಿದ್ದಾನೆ. ಆರ್‌.ಟಿ.ಒನಲ್ಲಿ ದಾಖಲೆ ವರ್ಗಾವಣೆಗೆ ಹೋಗಿದ್ದಾಗ ನಕಲಿ ದಾಖಲೆ ಎಂಬುದು ದೃಢಪಟ್ಟಿದೆ. ಬಳಿಕ ರಾಜೇಶ್‌ ಆರೋಪಿಗಳ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಕದ್ದ ಮಂಗಳೂರಿನಲ್ಲಿ ಕಾರು ಕದ್ದಿರುವುದು ದೃಢಪಟ್ಟಿದೆ.

Latest Videos
Follow Us:
Download App:
  • android
  • ios