Ballari: ಮಗಳ ಮದುವೆಗೆ ತಂದಿಟ್ಟಿದ್ದ ಚಿನ್ನಕ್ಕೆ ಕನ್ನ ಹಾಕಿದ ಖದೀಮರು!
ಮನೆಯಲ್ಲಿ ಮದುವೆ ಸಂಭ್ರಮ ಕಳೆಕಟ್ಟಿತ್ತು. ಮಗಳ ಮದುವೆ ತಯಾರಿಗೂ ಮುನ್ನ ಮನೆಯವರೆಲ್ಲ ದೇವರ ಪೂಜಾ ಕಾರ್ಯಕ್ಕಾಗಿ ಬೇರೊಂದು ಊರಿಗೆ ತೆರಳಿದ್ರು. ಆದ್ರೇ ದೇವರ ಕಾರ್ಯ ಮುಗಿಸಿ ಮನೆಗೆ ಬಂದವರಿಗೆ ಆಘಾತವೊಂದು ಕಾದಿತ್ತು.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ (ಜು.20): ಮನೆಯಲ್ಲಿ ಮದುವೆ ಸಂಭ್ರಮ ಕಳೆಕಟ್ಟಿತ್ತು. ಮಗಳ ಮದುವೆ ತಯಾರಿಗೂ ಮುನ್ನ ಮನೆಯವರೆಲ್ಲ ದೇವರ ಪೂಜಾ ಕಾರ್ಯಕ್ಕಾಗಿ ಬೇರೊಂದು ಊರಿಗೆ ತೆರಳಿದ್ರು. ಆದ್ರೇ ದೇವರ ಕಾರ್ಯ ಮುಗಿಸಿ ಮನೆಗೆ ಬಂದವರಿಗೆ ಆಘಾತವೊಂದು ಕಾದಿತ್ತು. ಖದೀಮರು ತಮ್ಮ ಕೈಚಳಕ ತೋರಿಸೋ ಮೂಲಕ ಮನೆಯಲ್ಲಿದ್ದ ವಸ್ತುಗಳನ್ನು ಗುಡಿಸಿ ಗುಂಡಾಂತರ ಮಾಡಿದ್ರು. ಪೌರಕಾರ್ಮಿಕ ವೃತ್ತಿ ಮಾಡಿ ಮಗಳ ಮದುವೆಗೆ ಹೊಂದಿಸಿಟ್ಟ ನಗನಣ್ಯ ನಗದನ್ನು ಕಳೆದುಕೊಂಡು ಕುಟುಂಬವೊಂದು ಕಣ್ಣಿನಲ್ಲಿ ಕೈತೊಳೆಯುತ್ತಿದೆ.
ಮದುವೆಗೆ ತಂದಿಟ್ಟ ನಗನಾಣ್ಯ ಕದ್ದ ಖದೀಮರು: ಬಳ್ಳಾರಿಯ ಶ್ರೀರಾಮಪುರ ಕಾಲೋನಿಯ ನಿವಾಸಿಯಾಗಿರುವ ನಾರಾಯಣಪ್ಪ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದಾರೆ. ಈ ನಾರಾಯಣಪ್ಪ ತನ್ನ 2ನೇ ಮಗಳ ಮದುವೆ ಮಾಡೋ ಸಂಭ್ರಮದಲ್ಲಿದ್ರೇ ವಿಧಿಯಾಟವೇ ಬೇರೆಯಾಗಿತ್ತು. ಮಗಳ ಮದುವೆಗೂ ಮುನ್ನ ನಾರಾಯಣಪ್ಪ ಮನೆಯವರೊಂದಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಸೋಮವಾರ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿದ್ರು.
ಸಂಡೂರು: ಭಾರೀ ಮಳೆಗೆ ಕೆಸರಲ್ಲಿ ಬಿದ್ದು ಎದ್ದು ಬಂದ ಎಮ್ಮೆಗಳಂತಾದ ಸರ್ಕಾರಿ ಬಸ್‌ಗಳು..!
ಪೂಜಾ ಕಾರ್ಯಕ್ರಮ ಮುಗಿಸಿ ಮಂಗಳವಾರ ರಾತ್ರಿ ಮನೆಗೆ ಬಂದು ನೋಡಿದ್ರೇ, ಮನೆಗೆ ಕನ್ನ ಬಿದ್ದಿತ್ತು. ಮನೆಯ ಬೀಗ ಮುರಿದು ಕಳ್ಳರು ಮದುವೆಗಾಗಿ ಮನೆಯಲ್ಲಿ ತೆಗೆದಿರಿಸಿದ್ದ ಚಿನ್ನಾಭರಣ ಸೇರಿದಂತೆ ನಗದು ಹಣವನ್ನೆಲ್ಲಾ ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಮನೆಯ ಬಿರುವಿನಲ್ಲಿದ್ದ 20 ತೊಲೆ ಬಂಗಾರ 400ಗ್ರಾಂ ಬೆಳ್ಳಿ. 70 ಸಾವಿರ ರೂಪಾಯಿ ನಗದನ್ನ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಮನೆಗೆ ಕನ್ನಾ ಹಾಕಿರುವುದರಿಂದ ನಾರಾಯಣಪ್ಪ ಮಗಳ ಮದುವೆ ಹೇಗೆ ಮಾಡೋದು ಎಂದು ದಿಕ್ಕೇ ತೋಚದಂತೆ ಕಂಗಾಲಾಗಿದ್ದಾರೆ.
ತುಂಬಿದ ಓಣಿಯಲ್ಲಿ ಕಳ್ಳತನ ನಡೆದಿದ್ದೇ ಆಶ್ಚರ್ಯ: ನಾರಾಯಣಪ್ಪ ತನ್ನ 2ನೇ ಮಗಳಾದ ತುಳಸಿ ಮದುವೆಗಾಗಿ ಜೀವಮಾನವೀಡಿ ದುಡಿದು ಕೂಡಿಟ್ಟ ಹಣದಲ್ಲಿ ಬಂಗಾರ ಖರೀದಿ ಮಾಡಿದ್ರು. ಹಿರಿಯ ಮಗಳು ಸಹ ದೇವರ ಕಾರ್ಯಕ್ಕೆ ಆಗಮಿಸಿದ ವೇಳೆ ಮೈ ಮೇಲಿದ್ದ ಬಂಗಾರವನ್ನು ಮನೆಯಲ್ಲಿಟ್ಟು ದೇವಸ್ಥಾನಕ್ಕೆ ತೆರಳಿದ್ರು. ಆದ್ರೇ ಮಂಗಳವಾರ ರಾತ್ರಿ ಮನೆಗೆ ಮರಳುತ್ತಿದ್ದಂತೆ ಮನೆ ಕಳ್ಳತನ ಮಾಡಿದ್ದು ಕಂಡು ಇಡೀ ಕುಟುಂಬ ಕಣ್ಣೀರಿಟ್ಟಿದೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಬ್ರೂಸ್ ಪೇಟೆ ಪೊಲೀಸರು ಪರಿಶೀಲನೆ ನಡೆಸಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಷರೊಂದಿಗೆ ಪರಿಶೀಲನೆ ನಡೆಸಿದರು. ಪೊಲೀಸರೊಂದಿಗೆ ಜನರು ಶ್ವಾನದಳದೊಂದಿಗೆ ಕಳ್ಳರನ್ನ ಹಿಡಿಯಲು ರಾತ್ರಿಯೀಡಿ ಹರಸಾಹಸ ನಡೆಸಿದರೂ ಪ್ರಯೋಜನವಾಗಲಿಲ್ಲ.
ಭೋರ್ಗರೆಯುತ್ತಿದೆ ತುಂಗಭದ್ರಾ ಜಲಾಶಯ, ನೋಡ ನೋಡ ನೀರು ಎಷ್ಟು ಚಂದ ಅಲಾ...
ಪೌರ ಕಾರ್ಮಿಕ ಮನೆಯನ್ನು ಬಿಡದ ಖದೀಮರು: ಸಾಮಾನ್ಯವಾಗಿ ಶ್ರೀಮಂತ ಮನೆಯವರು ಈ ರೀತಿ ಊರಿಗೆ ತೆರಳಿದಾಗ ಕಳ್ಳತನ ಮಾಡ್ತಾರೆ. ಆದ್ರೇ, ಈ ದುಷ್ಟ ಕಳ್ಳರು ಪೌರ ಕಾರ್ಮಿಕನ ಮನೆಯನ್ನು ಬಿಡದೇ ಲೂಟಿ ಮಾಡಿದ್ದಾರೆ. ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಜೀವಮಾನವೀಡಿ ದುಡಿದ ದುಡ್ಡನ್ನ ಕಳ್ಳರು ಒಂದೇ ದಿನದಲ್ಲಿ ಕದ್ದು ಪರಿಯಾಗಿದ್ದಾರೆ. ಹೀಗಾಗಿ ಮಗಳ ಮದುವೆಯನ್ನ ಮಾಡೋದೆಂಗೆ ಎಂದು ನಾರಾಯಣಪ್ಪ ಕಂಗಲಾಗಿ ಕಣ್ಣೀರಿಡುತ್ತಿದ್ದರೇ ಪೊಲೀಸರು ಕಳ್ಳರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.