ನಶೆಯಲ್ಲಿ ಮಲಗಿದ್ದವನ ಜೇಬಿಂದ ₹70 ಸಾವಿರ ಎಗರಿಸಿದ ಚೋರರು!

ಮದ್ಯದ ನಶೆಯಲ್ಲಿ ಅಂಗಡಿ ಬಳಿ ಮಲಗಿದ್ದ ವ್ಯಕ್ತಿಯ ಜೇಬಿನಲ್ಲಿದ್ದ 70 ಸಾವಿರ ರು. ಹಣವನ್ನು ದುಷ್ಕರ್ಮಿಗಳು ಎಗರಿಸಿರುವ ಘಟನೆ ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Thieves stole money from the pocket of a drunk man bengaluru rav

ಬೆಂಗಳೂರು (ನ.28) : ಮದ್ಯದ ನಶೆಯಲ್ಲಿ ಅಂಗಡಿ ಬಳಿ ಮಲಗಿದ್ದ ವ್ಯಕ್ತಿಯ ಜೇಬಿನಲ್ಲಿದ್ದ 70 ಸಾವಿರ ರು. ಹಣವನ್ನು ದುಷ್ಕರ್ಮಿಗಳು ಎಗರಿಸಿರುವ ಘಟನೆ ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ಟೀನ್‌ ಟೌನ್‌ ಬಿಡಿಎ ಕ್ವಾಟ್ರರ್ಸ್‌ ನಿವಾಸಿ ಶೇಕ್‌ ಶಾಹೀದ್‌ (30) ಹಣ ಕಳೆದುಕೊಂಡವರು. ಶೇಕ್‌ ಶಾಹೀದ್‌ ಅವರ ಸಂಬಂಧಿಕರನ್ನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯಕೀಯ ಖರ್ಚಿಗಾಗಿ ಫೈನಾನ್‌ಶಿಯರ್‌ ಬಳಿ .70 ಸಾವಿರ ಸಾಲ ಪಡೆದಿದ್ದರು.

ನ.24ರಂದು ರಾತ್ರಿ 9ರ ಸುಮಾರಿಗೆ ಆಸ್ಪತ್ರೆಗೆ ತೆರಳಿ ಸಂಬಂಧಿಕರನ್ನು ಮಾತನಾಡಿಸಿಕೊಂಡು ನಂತರ ಶಿವಾಜಿ ನಗರದ ಚಚ್‌ರ್‍ ಬಳಿಯ ಇರುವ ಪ್ರಿನ್ಸ್‌ ವೈನ್‌ ಶಾಪ್‌ಗೆ ಹೋಗಿ ಮದ್ಯ ಖರೀದಿಸಿದ್ದಾರೆ. ನಂತರ ಶಿವಾಜಿನಗರ ಬೀಫ್‌ ಮಾರ್ಕೆಟ್‌ ಬಳಿ ತೆರಳಿ ಮದ್ಯವನ್ನು ಸೇವಿಸಿದ್ದಾರೆ. ಮದ್ಯದ ನಶೆ ಹೆಚ್ಚಾದ ಹಿನ್ನೆಲೆಯಲ್ಲಿ ಶೇಕ್‌ ಅಲ್ಲೇ ಮಲಗಿದ್ದಾರೆ. ಬಳಿಕ ಎಚ್ಚರವಾದಾಗ ಜೇಬಿನಲ್ಲಿದ್ದ .70 ಸಾವಿರ ಕಳ್ಳತನವಾಗಿರುವುದು ಅರಿವಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ತಂದ ಆಪತ್ತು: ಮಗುವನ್ನು ಕೊಂದು ದೇಶ ಸುತ್ತಲು ಹೋದ ತಂದೆ

ನಗರದ ಕಾರು ಚಾಲಕನ ಕೊಂದು ತ.ನಾಡಲ್ಲಿ ಎಸೆದ ದುಷ್ಕರ್ಮಿಗಳು!

ಆನೇಕಲ್‌: ಕಾರು ಚಾಲಕನನ್ನು ಅಪಹರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಶವವನ್ನು ತಮಿಳುನಾಡಿನ ಹೊಸೂರು ತಾಲೂಕು ಥಳಿ ಸಮೀಪದ ಎಲೆಸಂದ್ರ ಬಳಿ ಎಸೆದಿರುವ ದಾರುಣ ಘಟನೆ ನೆರೆಯ ಡೆಂಕಣಿಕೋಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ತೋಗೂರು ನಿವಾಸಿ ಶಾಂತಕುಮಾರ್‌ ಅಶ್ವತ್‌್ಥ(30) ಕೊಲೆಯಾದ ಕಾರು ಚಾಲಕ. ದಾರಿ ಹೋಕರು ಶವವನ್ನು ಕಂಡು ಕೂಡಲೇ ಥಳಿ ಠಾಣೆಗೆ ಕರೆ ಮಾಡಿದಾಗ ಡೆಂಕಣಿಕೋಟೆ ಪೊಲೀಸರು ಸ್ಥಳಕ್ಕೆ ಹಾಜರಾದರು. ಶವವನ್ನು ಹೊರಳಿಸಿ ನೋಡಿದಾಗ ತಲೆ, ದವಡೆ ಹಾಗೂ ಕುತ್ತಿಗೆ ಭಾಗಗಳಿಗೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ಮಾಡಿರುವುದು ಕಂಡು ಬಂದಿದೆ. ಮೃತ ವ್ಯಕ್ತಿಯ ಜೇಬನ್ನು ತಪಾಸಣೆ ಮಾಡಿದಾಗ ದೊರೆತ ಚೀಟಿಯಲ್ಲಿನ ಮಾಹಿತಿ ತಿಳಿದು ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.

 

ಬೆಳಗಾವಿ: ಕೊಲೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸಿದ ಇಬ್ಬರು ಆರೋಪಿಗಳ ಸೆರೆ

ಕಾರು ಚಾಲಕ ಶಾಂತಕುಮಾರ್‌ ಕಳೆದ 10 ದಿನಗಳ ಹಿಂದೆ ಬಾರ್‌ ಒಂದರಲ್ಲಿ ರೌಡಿ ಶೀಟರ್‌ ನೇಪಾಳಿ ಮಂಜು ಜೊತೆ ಘರ್ಷಣೆ ನಡೆದು ನೇಪಾಳಿ ಮಂಜು ಹಲ್ಲೆ ಮಾಡಿದ್ದರು. ಈ ಬಗ್ಗೆ ಶಾಂತಕುಮಾರ್‌ ಎಲೆಕ್ಟ್ರಾನಿಕ್‌ ಸಿಟಿ ಠಾಣೆಗೆ ದೂರು ನೀಡಿದ್ದು ದೂರು ವಾಪಸ್‌ ಪಡೆಯುವಂತೆ ನೇಪಾಳಿ ಮಂಜು ಧಮಕಿ ಹಾಕಿದ್ದ. ಭಯಪಟ್ಟಶಾಂತಕುಮಾರ್‌ ನಂತರ ದೂರನ್ನು ವಾಪಸ್‌ ಪಡೆದಿದ್ದರು. 3 ದಿನಗಳಿಂದ ಚಾಲಕ ಶಾಂತಕುಮಾರ್‌ ಕಾಣೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೂರು ನೀಡಿದ್ದರು. ಶಾಂತಕುಮಾರ್‌ ಶವ ರಸ್ತೆ ಬದಿಯಲ್ಲಿ ಅನಾಥವಾಗಿ ಪತ್ತೆಯಾಗಿದ್ದು, ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತು. ಘಟನೆ ಸಂಬಂಧ ಥಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚು ಹಣ ಗಳಿಸಲು ಡ್ರಗ್ಸ್ ದಂಧೆ: ಇಬ್ಬ ಬಂಧನ

ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ. ಕೇರಳದ ಇಜಾಸ್‌(30) ಮತ್ತು ಅರ್ಫತ್‌(32) ಬಂಧಿತರು. ಆರೋಪಿಗಳಿಂದ .10 ಲಕ್ಷ ಮೌಲ್ಯದ 60 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್‌, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್‌, ಹಾಗೂ ಎರಡು ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಗೂರಿನಲ್ಲಿ ನೆಲೆಸಿದ್ದ ಆರೋಪಿಗಳು, ಕಡಿಮೆ ಸಮಯದಲ್ಲಿ ಸುಲಭವಾಗಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಡ್ರಗ್‌್ಸ ಮಾರಾಟ ದಂಧೆಯಲ್ಲಿ ತೊಡಗಿದ್ದರು. ನಗರದಲ್ಲಿರುವ ಆಫ್ರಿಕನ್‌ ಕಿಚನ್‌ಗಳ ಬಳಿ ಬರುವ ನೈಜೀರಿಯಾ ಪ್ರಜೆಗಳನ್ನು ಪರಿಚಯಿಸಿಕೊಂಡು ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸುತ್ತಿದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಸೇರಿದಂತೆ ಪರಿಚಿತ ಗ್ರಾಹಕರಿಗೆ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂ ಎಂಡಿಎಂಎ ಮಾದಕವಸ್ತುವಿಗೆ 10ರಿಂದ 12 ಸಾವಿರ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios