ಕಲಬುರಗಿ: ವೃದ್ಧೆಗೆ ಮಚ್ಚಿನಿಂದ ಗಾಯಗೊಳಿಸಿದ ಕಳ್ಳ

*   ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ನಡೆದ ಘಟನೆ
*   ತೀವ್ರ ರಕ್ತಸ್ರಾವದಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆ 
*   ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 
 

Thieve Attempt to Murder Old Age Women at Chincholi in Kalaburagi grg

ಚಿಂಚೋಳಿ(ಸೆ.20):  ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವದಲ್ಲಿ ಹನುಮಾನ ದೇವಾಲಯ ಹತ್ತಿರದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಯೊಬ್ಬ ವೃದ್ಧೆಗೆ ಮಚ್ಚಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ಕೊಳ್ಳುರ ಗ್ರಾಮದ ಗುಂಡಮ್ಮ ಲಾಲಪ್ಪ ಬೂತಪಳ್ಳಿ(75) ಗಾಯಗೊಂಡಿರುವ ವೃದ್ಧೆ. ಕಳ್ಳ ಮನೆ ಬಾಗಿಲ ಮೇಲಿಂದ ಜಿಗಿದು ಮನೆಯೊಳಗೆ ನುಗ್ಗುತ್ತಿರುವಾಗ ಪಾತ್ರೆಗಳ ಸಪ್ಪಳ ಕೇಳಿದ ವೃದ್ಧೆ ಚೀರಿಕೊಂಡಿದ್ದಾಳೆ. ಈ ವೇಳೆ ಕಳ್ಳನ ಕೈಯಲ್ಲಿದ್ದ ಮಚ್ಚಿನಿಂದ ವೃದ್ಧೆಯ ಕುತ್ತಿಗೆ ಹೊಡೆದು ಗಾಯಗೊಳಿಸಿದ್ದಾನೆ. ಪಕ್ಕದಲ್ಲಿಯೇ ಮಲಗಿದ್ದ ಮೊಮ್ಮಕ್ಕಳು ಎಚ್ಚರಗೊಂಡು ಹಾಸಿಗೆಯಲ್ಲಿಯೇ ಇಣಕಿ ನೋಡಿ ಸುಮ್ಮನಾಗಿದ್ದರು.

ಕಳ್ಳಿಯ ಕೈಚಳಕ, ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಕೊಂಡಿದ್ದ 4 ಲಕ್ಷ ರೂ ಗೋವಿಂದ..!

ಎಲ್ಲಿ ನನಗೂ ಮಚ್ಚಿನಿಂದ ಹೊಡೆಯುತ್ತಾನೆ ಎಂದು ಭಯಗೊಂಡಿದ್ದೇವೆ ಎಂದು ಸೊಸೆ ರತ್ನಮ್ಮ ಮೊಮ್ಮಗಳು ಜಯಶ್ರೀ ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ವೃದ್ಧೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಮನೆಯವರೆಲ್ಲರೂ ಚೀರಿಕೊಂಡಾಗ ಗ್ರಾಮಸ್ಥರು ಓಡಿ ಬಂದು ಕೂಡಲೇ ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಶಾಬಾದ್‌ ಡಿವೈಎಸ್ಪಿ ಚಿಕ್ಕಮಠ, ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ಐ ಎ.ಎಸ್‌. ಪಟೇಲ್‌ ಪೋಲಿಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios