ಜ್ಯುವೆಲ್ಲರಿ ಶಾಪ್‌ಗೆ ಕಳ್ಳತನ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸುರಂಗ ಕೊರೆದು ಕಳ್ಳತನ, ಬಾಗಿಲು ಮುರಿದು ಕಳ್ಳತನ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಇದೀಗ ಖ್ಯಾತ ಜ್ಯುವೆಲ್ಲರಿ ಶಾಪ್‌ಗೆ ಕನ್ನ ಹಾಕಿದ ಕಳ್ಳರು ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದೊಯ್ದಿದ್ದಾರೆ.  

ಪುಣೆ(ಜ.03) ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ದರೋಡೆ, ಕಳ್ಳತನ ಮಾಡುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿದೆ. ಬಂದೂಕು ತೋರಿಸಿ ದರೋಡೆ ಮಾಡಿದ ಘಟನೆ ಸೇರಿದಂತೆ ದೇಶಾದ್ಯಂತ ಪ್ರತಿ ದಿನ ಒಂದಲ್ಲಾ ಒಂದು ಜ್ಯುವೆಲ್ಲರ ಕಳ್ಳತನ ಪ್ರಕರಣ ನಡೆಯುತ್ತಲೇ ಇದೆ. ಇದೀಗ ಸಾಲಿಗೆ ಅತೀ ದೊಡ್ಡ ಜ್ಯುವೆಲ್ಲಿ ಶಾಪ್ ಕಳ್ಳತನ ಸೇರಿಕೊಂಡಿದೆ. ಖ್ಯಾತ ಜ್ಯುವೆಲ್ಲರಿ ಶೋ ರೂಂಗೆ ರಾತ್ರಿ ವೇಳೆ ಕಳ್ಳ ನುಗ್ಗಿ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಪುಣೆಯಲ್ಲಿ ವರದಿಯಾಗಿದೆ. ಚಾಲಕಿ ಕಳ್ಳತ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದರೆ. 

ಡಿಸೆಂಬರ್ 31ರಂದು ಈ ಕಳ್ಳತನ ನಡೆದಿದೆ. ಪುಣೆಯ ರವಿವಾರ ಪೇಟೆ ವಲಯದಲ್ಲಿ ಈ ಕಳ್ಳತನ ನಡೆದಿದೆ. ಜ್ಯುವೆಲ್ಲರಿ ಶಾಪ್ ಮಾಲೀಕ ಈ ಕುರಿತು ದೂರು ದಾಖಲಿಸಿದ್ದಾರೆ. ಪೂರಕವಾಗಿ ಜ್ಯುವೆಲ್ಲರಿ ಶಾಪ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಿದ್ದಾರೆ. ರಾತ್ರಿ ವೇಳೆ ಓರ್ವ ಕಳ್ಳ ಪುಲ್ಲೋವರ್ ರೀತಿಯ ಬಟ್ಟೆ ಧರಿಸಿಕೊಂಡಿದ್ದ. ಮುಖಮುಚ್ಚಿಕೊಂಡು ಜ್ಯುವೆಲ್ಲರಿ ಶಾಪ್‌ ಬಾಗಿಲು ಮುರಿದು ಕಳ್ಳ ಒಳ ನುಗ್ಗಿದ್ದಾನೆ.

ಈ ಸಾಫ್ಟ್‌ವೇರ್‌ ಕಳ್ಳನಿಗೆ ಒಂಟಿ ಮಹಿಳೆಯರೇ ಟಾರ್ಗೆಟ್: ಚೈನ್, ರಿಂಗ್, ಒಡವೆ ದೋಚೋ ಖತರ್ನಾಕ್‌!

ಸುಲಭವಾಗಿ ಒಳ ಪ್ರವೇಶಿಸಿದ ಕಳ್ಳ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ತೆಗೆದು ತಂದಿದ್ದ ಬ್ಯಾಗ್‌ನಲ್ಲಿ ತುಂಬಿಸಿದ್ದಾನೆ. ಬಳಿಕ 10 ಲಕ್ಷ ರೂಪಾಯಿ ನಗದನ್ನು ಬ್ಯಾಗ್‌ಗೆ ತುಂಬಿಸಿದ್ದಾನೆ. ನಗದು ಸೇರಿದಂತೆ ಒಟ್ಟು 3 ಕೋಟಿ ರೂಪಾಯಿ ಮೌಲ್ಯದ 5 ಕೆಜಿ ಚಿನ್ನಾಭರಣವನ್ನು ಕಳುವು ಮಾಡಿದ್ದಾನೆ. ಲಾಕರ್‌ನಲ್ಲಿದ್ದ ಎಲ್ಲಾ ಚಿನ್ನಾಭರಣ ದೋಚಿದ ಕಳ್ಳ, ಯಾವುದೇ ಆತಂಕವಿಲ್ಲದೆ ಕಳ್ಳತನ ಮಾಡಿದ್ದಾನೆ.

ಮಾಲೀಕ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಇದೀಗ ಜ್ಯುವೆಲ್ಲರಿ ಶಾಪ್‌ನಲ್ಲಿದ್ದ ಸಿಬ್ಬಂದಿಗಳ ನೆರವು ಪಡೆದಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಡಿಸೆಂಬರ್ 31ರಂದು ಹಲೆವೆಡೆ ಚಿನ್ನಾಭರಣ ಕಳುವಾಗಿದೆ. ಮೈಸೂರಿನಲ್ಲಿ ಮನೆ ಬಾಡಿಗೆ ನೀಡಿದ್ದ ಮಾಲೀಕರ ಮನೆಯಲ್ಲೇ ಕಳ್ಳತನ ನಡೆದಿತ್ತು. ಆದರೆ ಪೊಲೀಸರು ಕಳ್ಳತನ ಮಾಡಿದ ಮಹಿಳೆಯನ್ನು ಬಂಧಿಸಿದ್ದಾರೆ. ಮೈಸೂರಿನ ಆಲನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ, 1.45. ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 

ಸರಗಳ್ಳರ ವಿರುದ್ಧ ಹೋರಾಡಿ ಕಳ್ಳನನ್ನು ಬೈಕ್‌ನಿಂದ ಬೀಳಿಸಿದ ಗಟ್ಟಿಗಿತ್ತಿ ಮಹಿಳೆ: ವೀಡಿಯೋ

ಮಂಡ್ಯ ಮೂಲದ ಪ್ರಿಯದರ್ಶಿನಿ (35) ಸಿಕ್ಕಿ ಬಿದ್ದವರು. ಇವರು ಮೈಸೂರಿನ ಯರಗನಹಳ್ಳಿಯ ಜ್ಯೋತಿ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಜ್ಯೋತಿ ಮನೆಯ ಕೀ ಕದ್ದು ಬೀರುವಿನಲ್ಲಿದ್ದ 35 ಗ್ರಾಂ ತೂಕದ ಚಿನ್ನಾಭರಣ ಕದ್ದಿದ್ದರು. ಈ ಸಂಬಂಧ ಮನೆ ಮಾಲೀಕರಾದ ಜ್ಯೋತಿ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಪ್ರಿಯದರ್ಶಿನಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಆರೋಪಿ ಪ್ರಿಯದರ್ಶಿನಿ ವಿರುದ್ಧ ಮಂಡ್ಯ ಹಾಗೂ ಶ್ರೀರಂಗಪಟ್ಟಣ ಠಾಣೆಯಲ್ಲಿ ಇಂತಹದ್ದೇ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to load tweet…