Robbery:ವಿಜಯಪುರ, ಇಂಜಿನ್ ಆಯಿಲ್ ಸೋರ್ತಿದೆ ಅಂತ ನಂಬಿಸಿ ಹಣ ಲಪಟಾಯಿಸಿದರು!
* ಗಮನ ಬೇರೆಡೆ ಸೆಳೆದು .10 ಲಕ್ಷ ದೋಚಿದರು!
* ಫೇಸ್ಬುಕ್‌ನಲ್ಲಿ ನಿಂದಿಸಿದ್ದಕ್ಕೆ ವ್ಯಕ್ತಿ ಕೊಲೆ!
* ಮಹಿಳೆ ಬೆನ್ನಟ್ಟಿಜೀಪ್ ಹತ್ತಿಸಿ ಹತ್ಯೆ!
ವಿಜಯಪುರ (ಫೆ. 04) ವ್ಯಕ್ತಿಯ ಗಮನ ಬೇರೆಡೆ ಸೆಳೆದು .10 ಲಕ್ಷ ಕಳ್ಳತನ (Theft) ಮಾಡಿದ ಘಟನೆ ನಗರದ (Vijayapura) ಬಿಎಲ್‌ಡಿಇ ರಸ್ತೆಯ ಎಕ್ಸಿಸ್ ಬ್ಯಾಂಕ್ ಬಳಿ ಗುರುವಾರ ನಡೆದಿದೆ.
ನಿಂಗರಾಜ ನಾಶಿ ಹಣ ಕಳೆದುಕೊಂಡವರು. ನಿಂಗರಾಜ ಅವರು ಎಕ್ಸಿಸ್ ಬ್ಯಾಂಕ್‌ನಿಂದ .10 ಲಕ್ಷ ತೆಗೆದುಕೊಂಡು ಕಾರ್‌ನಲ್ಲಿ (Car) ಇಟ್ಟುಕೊಂಡು ತೆರಳಲು ಅಣಿಯಾಗಿದ್ದರು. ಆಗ ಕಾರ್‌ನ ಎಂಜಿನ್‌ನಿಂದ ಆಯಿಲ್ ಸೋರುತ್ತಿದೆ ಎಂದು ಗಮನ ಸೆಳೆದರು. ಆಗ ಆಯಿಲ್ ನೋಡಲು ಹಣದ ಬ್ಯಾಗ್ ಕಾರಿನ ಸೀಟಿನಲ್ಲಿಟ್ಟು ನಿಂಗರಾಜ ಕಾರಿನಿಂದ ಕೆಳಗಿಳಿದು ನೋಡಲು ಹೋದಾಗ ಕಾರಿನ ಸೀಟಿನಲ್ಲಿದ್ದ .10 ಲಕ್ಷ ಕಳವು ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಹನಮಂತ ಚಿಂಚಲಿ ಎಂಬ ಗುತ್ತಿಗೆದಾರರ ಬಳಿ ನಿಂಗರಾಜ ವ್ಯವಸ್ಥಾಪಕರಾಗಿ ಕೆಲಸಕ್ಕಿದ್ದರು. ಕಳವಾದ ಹಣ ಗುತ್ತಿಗೆದಾರ ಹನಮಂತ ಚಿಂಚಲಿ ಅವರಿಗೆ ಸೇರಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಈ ಕುರಿತು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Honeytrap: ಶಿರಸಿ, ಕೋಣೆಗೆ ಕರೆಸಿ ರಾಸಲೀಲೆ ನಡೆಸಿದಂತೆ ವಿಡಿಯೋ ಮಾಡಿಕೊಂಡರು!
ನಿಂದಿಸಿದ್ದಕ್ಕೆ ಹತ್ಯೆ: ಫೇಸ್ಬುಕ್‌ನಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದಲ್ಲಿ ನಡೆದಿದೆ. ಕುಮಟಗಿ ಗ್ರಾಮದ ರಮೇಶ ಶ್ರೀಮಂತ ಧಾರಸಿಂಗ್ (30) ಕೊಲೆಗೀಡಾದ ವ್ಯಕ್ತಿ. ರಮೇಶ ಧಾರಾಸಿಂಗ್ ಫೇಸ್ಬುಕ್‌ನಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿದ ಎಂಬ ಕಾರಣಕ್ಕೆ ಕುಪಿತಗೊಂಡ ವಿಜಯಪುರದ ಜೀತೇಂದ್ರ ಕಾಂಬಳೆ, ರಘು ಕಣಮೇಶ್ವರ ಸೇರಿದಂತೆ 7 ಜನರು ಆತನನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಕುಮಟಗಿಯ ಹರಿಜನ ಎಂಬುವರ ಮನೆ ಮುಂದೆ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಹತ್ಯೆ: ಮಹಿಳೆಯನ್ನು ಜೀಪ್‌ನಲ್ಲಿ ಬೆನ್ನಟ್ಟಿಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕೋಟಾ ತಾಲೂಕಿನ ಸಿದ್ದನಾಥ ಮೂಲದ ಕನಮಡಿಯಲ್ಲಿ ವಾಸವಾಗಿದ್ದ ಸಾಗರ ಕೊಂಡಿಬಾ ಸತಾರ (20) ಹಾಗೂ ಕನಮಡಿ ಗ್ರಾಮದ ಮಾರುತಿ ಮಾಳಪ್ಪ ಥೋರತ (21) ಬಂಧಿತ ಆರೋಪಿತರು. ಘೋಣಸಗಿ ಗ್ರಾಮದ ಸೋಮಲಿಂಗ ಮಾಳಪ್ಪ ಮೋಗದರೆ ಅವರಿಂದ ಕಬ್ಬು ಕಡಿಯಲು ಸಾಗರ ಮತ್ತು ಮಾರುತಿ ಅವರಿಂದ .45 ಲಕ್ಷ ಪಡೆದುಕೊಂಡಿದ್ದರು. ಆದರೆ ಕಬ್ಬು ಕಟಾವು ಮಾಡದ್ದಕ್ಕೆ ಸೋಮಲಿಂಗ ಅವರು ಆರೋಪಿಗಳಿಗೆ ಬೈದಿದ್ದರು. ಈ ಸಿಟ್ಟಿನಿಂದಾಗಿ ಆರೋಪಿಗಳು ಜ.31ರಂದು ಸೋಮಲಿಂಗ ಅವರ ಜೋಪಡಿಗೆ ಜೀಪ್ ಹಾಯಿಸಿ ಸೋಮಲಿಂಗನ ಪತ್ನಿಯನ್ನು ಬೆನ್ನಟ್ಟಿಜೀಪ್ ಹಾಯಿಸಿ ಕೊಲೆ ಮಾಡಿದ್ದರು.
ವೃದ್ಧ ದಂಪತಿ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ: ಎಲೆಬೇತೂರು ಗ್ರಾಮದ ವೃದ್ಧ ದಂಪತಿಗಳ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಅದೇ ಗ್ರಾಮದ ಓರ್ವ ಬೆಂಗಳೂರಿನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದು, ತನ್ನೊಡನೆ ಕೆಲಸ ಮಾಡುತ್ತಿದ್ದ ಇತರೆ ಇಬ್ಬರ ಜೊತೆಗೂಡಿ ಹತ್ಯೆ ಮಾಡಿದ್ದ. ಆಅರೋಪಿಗಳ ಪೈಕಿ ಬೇತೂರಿನ ಹಮಾಲನಿಗೆ ಇಸ್ಟೀಟ್ ಜೂಜಾಡುವ ಚಟ ಇದ್ದು, ಇದಕ್ಕಾಗಿ ಇದೇ ದಂಪತಿ ಬಳಿ 3 ಲಕ್ಷ ರು.ಗೆ ಒಡವೆ ಒತ್ತೆ ಇಟ್ಟಿದ್ದ.