ಕಳೆದ ಫೆಬ್ರವರಿ ತಿಂಗಳಲ್ಲಿ  ದಾವಣಗೆರೆಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಅನುಭವವನ್ನು ಸ್ವತಃ ಕಾಲಿನಲ್ಲಿದ್ದವರು ಬರೆದುಕೊಂಡಿದ್ದಾರೆ. ಸೀಟ್‌ ಬೆಲ್ಟ್‌ ನನ್ನ ಜೀವ ಉಳಿಸಿತು ಎಂದಿದ್ದಾರೆ.

-ಪ್ರವೀಣ್‌, ಉದ್ಯಮಿ, ಚಿತ್ರದುರ್ಗ

ಅದು ಭಯಾನಕ ಅಪಘಾತ. ಅಂದು ನಾವು ಬದುಕುಳಿದಿದ್ದೇ ಪವಾಡ! ಸೀಟ್‌ ಬೆಲ್ಟ್‌ ಹಾಕಿರದೇ ಇದ್ದಿದ್ದರೆ ಇವತ್ತು ನಾನು ನಿಮ್ಮ ಮುಂದೆ ಇರುತ್ತಿರಲಿಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ಮೂವರು ಸ್ನೇಹಿತರೊಂದಿಗೆ ದಾವಣಗೆರೆಯಲ್ಲಿ ನಡೆದಿದ್ದ ಸಂಬಂಧಿಕರ ಮದುವೆಗೆಂದು ಕಾರಿನಲ್ಲಿ ತೆರಳಿದ್ದೆವು. ಆರತಕ್ಷತೆಯಾದ್ದರಿಂದ ಅದು ಸಂಜೆ ವೇಳೆಯ ಕಾರ್ಯಕ್ರಮವಾಗಿತ್ತು. ನೂತನ ದಂಪತಿಗೆ ಶುಭಕೋರಿ, ಊಟ ಮಾಡಿ ಕಲ್ಯಾಣ ಮಂಟಪ ಬಿಟ್ಟಾಗ ವೇಳೆ ರಾತ್ರಿ ಹತ್ತೂವರೆಯಾಗಿತ್ತು. ಚಿತ್ರದುರ್ಗದತ್ತ ವಾಪಸ್‌ ಬರುವಾಗ ಹೆದ್ದಾರಿ ಮೇಲೆ ಕಲಪನಹಳ್ಳಿ ದಾಟಿದ ನಂತರ ನಮ್ಮ ಕಾರಿನ ಮುಂದೆ ಒಂದು ಟಾಟಾ ಏಸ್‌ ವಾಹನ ಹೋಗುತ್ತಿತ್ತು. ಇನ್ನೇನು ಅದನ್ನು ಓವರ್‌ಟೇಕ್‌ ಮಾಡಬೇಕು ಅನ್ನುವಷ್ಟರಲ್ಲಿ ಟಾಟಾಏಸ್‌ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ. ವೇಗವಾಗಿದ್ದ ನಮ್ಮ ಕಾರು ಕೂಡ ಚಾಲಕನ ನಿಯಂತ್ರಣ ತಪ್ಪಿ ಟಾಟಾಏಸ್‌ ವಾಹನಕ್ಕೆ ಗುದ್ದಿತು. ಚಾಲಕನ ಪಕ್ಕದಲ್ಲೇ ಇದ್ದ ನಾನು ಸತ್ತೆ ಎಂದೇ ಭಾವಿಸಿದ್ದೆ. ಆದರೆ ಸೀಟ್‌ಬೆಲ್ಟ್‌ ಹಾಕಿದ್ದರಿಂದ ಏರ್‌ಬ್ಯಾಗ್‌ ಓಪನ್‌ ಆಗಿದ್ದರಿಂದ ತಲೆಗಾಗಲಿ, ಎದೆಗಾಗಲಿ ಹೊಡೆತ ಬೀಳುವುದು ತಪ್ಪಿತು. ತಲೆ ಕಾರಿನ ಗಾಜಿಗೆ ಡಿಕ್ಕಿ ಹೊಡೆಯುವುದು ತಪ್ಪಿತು. ಸಣ್ಣಪುಟ್ಟಗಾಯಗಳಾದರೂ ಪ್ರಾಣ ಉಳಿದಿತ್ತು.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು. ನೋಡಿದವರು ಕಾರಲ್ಲಿದ್ದವರು ಬದುಕಿರುವುದೇ ಸಂಶಯ ಎನ್ನುತ್ತಿದ್ದರು. ಅಪಘಾತವಾದ ತಕ್ಷಣ ಟಾಟಾ ಏಸ್‌ ಚಾಲಕ ಕೂಡ ನಮ್ಮತ್ತ ಓಡಿ ಬಂದ. ಚಾಲಕನೊಂದಿಗೆ ಕಾರಲ್ಲಿ ನಾನು ಮುಂದೆಯೇ ಕುಳಿತಿದ್ದೆ. ಕಾರಿನ ಹಿಂಭಾಗದ ಬಾಗಿಲು ತೆಗೆದು ಒಳಗಿದ್ದವರು ಏನಾಗಿದ್ದಾರೋ ಎಂದು ನೋಡುವಷ್ಟರಲ್ಲಿ ಒಬ್ಬೊಬ್ಬರಾಗಿ ಹೊರಬಂದರು. ಸಣ್ಣಪುಟ್ಟತರಚಿದ ಗಾಯಗಳಾದ್ದು ಬಿಟ್ಟರೆ ಎಲ್ಲರೂ ಚೆನ್ನಾಗಿಯೇ ಇದ್ದೆವು.

ಬಾಲಕನ ಮೇಲಿನ ಪೋಕ್ಸೋ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಅಂದಿನಿಂದ ಈಗಲೂ ನಾನು ಕಾರಲ್ಲಿ ಎಲ್ಲೇ ಪ್ರಯಾಣಿಸಿದರೂ ಸೀಟ್‌ಬೆಲ್ಟ್‌ ತಪ್ಪದೇ ಹಾಕುತ್ತೇನೆ. ಜತೆಗಿದ್ದವರಿಗೂ ಹಾಕಿಕೊಳ್ಳಲು ಹೇಳುತ್ತೇನೆ. ಸಣ್ಣ ನಿರ್ಲಕ್ಷ್ಯ ನಮ್ಮ ಜೀವವನ್ನೇ ಬಲಿ ಪಡೆಯಬಹುದು. ಹೆದ್ದಾರಿ ಮೇಲೆ ಅದೂ ದೂರದ ಪ್ರಯಾಣ ಮಾಡುವವರಂತೂ ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಕಟ್ಟಿಕೊಳ್ಳಲೇಬೇಕು.

ಮಸ್ಕಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ: ಬಿಗಿ ಪೊಲೀಸ್‌ ಬಂದೋಬಸ್ತ್

ದ್ವಿಚಕ್ರವಾಹನ ಡಿಕ್ಕಿ, ಗಾಯಾಳು ಪಾದಚಾರಿ ಸಾವು
ಮೈಸೂರು: ದ್ವಿಚಕ್ರವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಕೆ.ಆರ್‌. ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ. ನಗರದ ಶಿವಾಜಿ ರಸ್ತೆಯಲ್ಲಿರುವ ಲಕ್ಷೀ್ಮವೆಂಕಟರಮಣ ದೇವಸ್ಥಾನದ ಬಳಿ ಸೆ.5 ರಂದು ನಡೆದ ಅಪಘಾತದಲ್ಲಿ ಪಾದಚಾರಿ ಗಾಯಗೊಂಡಿದ್ದು, ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರ ಚಹರೆ- 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು - ಬಿಳಿ ಮಿಶ್ರಿತ ತಲೆ ಕೂದಲು, ಗಡ್ಡ ಮೀಸೆ ಬಿಟ್ಟಿದ್ದಾರೆ. ಎಡಗೈಯಲ್ಲಿ ವಿಎಚ್‌, ಬಲಗೈಯಲ್ಲಿ ಕಮಲಬಾಯಿ ಎಂಬ ಹಚ್ಚೆ ಗುರುತಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418528 ಸಂಪರ್ಕಿಸಲು ಎನ್‌.ಆರ್‌. ಸಂಚಾರ ಠಾಣೆಯ ಎಸ್‌ಐ ಅಶ್ವಿನಿ ಅನಂತಪುರ್‌ ಕೋರಿದ್ದಾರೆ.