Asianet Suvarna News Asianet Suvarna News

ಮಸ್ಕಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ: ಬಿಗಿ ಪೊಲೀಸ್‌ ಬಂದೋಬಸ್ತ್

  • ಎರಡು ಗುಂಪುಗಳ ಮಧ್ಯೆ ಘರ್ಷಣೆ: ಬಿಗಿ ಪೊಲೀಸ್‌ ಬಂದೋಬಸ್ತ್
  • - ಖಲೀಲ್‌ ವೃತ್ತದಲ್ಲಿ ಗುರುವಾರ ರಾತ್ರಿ ಯುವಕರ ನಡುವೆ ಉಂಟಾದ ವಾಗ್ವಾದ ವಿಕೋಪ
  • ಘಟನೆ ನಿಯಂತ್ರಿಸಲು ಪೊಲೀಸರ ಹರಸಾಹಸ
Clash between two groups heavy police presence in maski raichuru rav
Author
First Published Sep 11, 2022, 1:38 PM IST | Last Updated Sep 11, 2022, 1:38 PM IST

ಮಸ್ಕಿ (ಸೆ.11) : ಎರಡು ಗುಂಪುಗಳ ಯುವಕರ ನಡುವೆ ನಡೆದ ಗುಂಪು ಘರ್ಷಣೆಯಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾದ ಘಟನೆ ಗುರುವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್‌್ತ ಕಲ್ಪಿಸಲಾಗಿದೆ. ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಪಟ್ಟಣದಲ್ಲಿ ಮುಕ್ಕಾಂ ಹೂಡಿದ್ದಾರೆ. ಪಟ್ಟಣದ ಖಲೀಲ್‌ ವೃತ್ತದಲ್ಲಿ ಗುರುವಾರ ರಾತ್ರಿ 8ಗಂಟೆ ಸಮಯದಲ್ಲಿ ಕೆಲ ಯುವಕರ ನಡುವೆ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿದೆ.

ಹುಲಿಹೈದರ ಘರ್ಷಣೆ: ಪ್ರೇಮ ವಿವಾಹವೇ ಗಲಾಟೆಗೆ ಕಾರಣವಾಯ್ತಾ!

ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಹಿರಿಯ ಮುಖಂಡ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ್‌ ಮತ್ತು ಪೊಲೀಸರು ಘಟನೆ ನಿಯಂತ್ರಿಸಲು ಯತ್ನಿಸಿದರು. ಆದರೆ, ಎರಡು ಗುಂಪುಗಳ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದ್ದರಿಂದ ಘಟನೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್‌ ಠಾಣೆ ಮುಂದೆ ನೂರಾರು ಜನ ಸೇರಿದ್ದರು.

ಮುಂಜಾಗೃತ ಕ್ರಮವಾಗಿ ರಾತ್ರಿಯೇ ಲಿಂಗಸ್ಗೂರು, ರಾಯಚೂರು, ದೇವದುರ್ಗ ಸೇರಿ ಜೆಲ್ಲೆಯ ವಿವಿಧ ಕಡೆಯಿಂದ ಹೆಚ್ಚಿನ ಪೊಲೀಸರು, ಹಾಗೂ ನಾಲ್ಕು ಡಿಆರ್‌ ಹಾಗೂ ಕೆಎಸ್‌ಆರ್‌ಪಿ ಪೊಲೀಸ್‌ ತುಕುಡಿಗಳನ್ನು ಕರೆಸಿಕೊಳ್ಳಲಾಗಿದೆ. ಪಟ್ಟಣದಲ್ಲಿ ಶಾಂತ ವಾತಾವರಣ ಇದ್ದು ಮುಂಜಾಗೃತ ಕ್ರಮವಾಗಿ ಪ್ರಮುಖ ವೃತ್ತ ಹಾಗೂ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲಿಂಗಸುಗೂರು ಡಿವೈಎಸ್‌ಪಿ ಮಂಜುನಾಥ ಸೇರಿ ಇಬ್ಬರು ಸಿಪಿಐ, 10 ಜನ ಪಿಎಸ್‌ಐ ಹಾಗೂ 17 ಜನ ಎಎಸ್‌ಐ ಸೇರಿದಂತೆ ನೂರು ಜನ ಪೊಲೀಸರುನ್ನು ನಿಯೋಜನೆ ಮಾಡಲಾಗಿದೆ.

ಶಾಂತಿ ಸುವ್ಯವಸ್ಥೆ ಕಾಪಾಡಲು ಎಎಸ್‌ಪಿ ಮನವಿ

ಮಸ್ಕಿ: ಶಾಂತಿಗೆ ಹೆಸರಾದ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಮಾಜದ ಮುಖಂಡರು ಮುಂದಾಗಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ ಮನವಿ ಮಾಡಿದರು. ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಪಟ್ಟಣದ ವಿವಿಧ ಸಮಾಜದ ಮುಖಂಡರ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿ, ಕೆಲವು ಕಿಡಿಗೇಡಿಗಳಿಂದ ನಡೆದ ಘಟನೆ ವಿಕೋಪಕ್ಕೆ ಹೋಗಿದೆ. ಆಯಾ ಸಮಾಜದ ಮುಖಂಡರು ಕಿಡಿಗಳಿಗೆ ರಕ್ಷಣೆ ನೀಡದೆ ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು, ಗಾಳಿ ಸುದ್ದಿಗಳಿಗೆ ಕಿವಿಕೊಡಬಾರದು ಎಂದು ಮನವಿ ಮಾಡಿದರು. ಟಿಪ್ಪು Vs ಸಾವರ್ಕರ್ ಫೋಟೋ ವಾರ್: ಶಿವಮೊಗ್ಗ ಘರ್ಷಣೆ ಹಿಂದಿದೆಯಾ SDPI

Latest Videos
Follow Us:
Download App:
  • android
  • ios