Asianet Suvarna News Asianet Suvarna News

ಕಾರ್‌ನ ಹಿಂಬದಿಯ ಸೀಟ್‌ನಲ್ಲಿ ಜೋಡಿಯ ಸೆಕ್ಸ್‌.., ಕಾರ್‌ ಜೊತೆಗೆ ಬಟ್ಟೆಯನ್ನೂ ಕದ್ದ ಕಳ್ಳರು!

ನಿರ್ಜನ ಪಾರ್ಕಿಂಗ್‌ ಪ್ರದೇಶದಲ್ಲಿ ನಿಂತಿದ್ದ ತಮ್ಮ ಕಾರಿನ ಹಿಂಬದಿಯ ಸೀಟ್‌ನಲ್ಲಿ ದಂಪತಿಗಳು ಸೆಕ್ಸ್‌ ಮಾಡುತ್ತಿದ್ದರು ಈ ವೇಳೆ ಕಳ್ಳರ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಒಬ್ಬ ವ್ಯಕ್ತಿ ಬಲವಂತವಾಗಿ ಕಾರಿನ ಬಾಗಿಲು ತೆಗೆದರೆ, ಇನ್ನೊಬ್ಬ ಅವರದಲ್ಲಿದ್ದ ಎಲ್ಲಾ ವಸ್ತುವನ್ನು ಕಸಿದುಕೊಳ್ಳಲು ಆರಂಭಿಸಿದ. ಇದನ್ನು ವಿರೋಧಿಸಿದಾಗ ಅವರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದರ ಸಂಪೂರ್ಣ ವಿವರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
 

The couple was romancing in the car thieves ran away after snatching the car took away the clothes too san
Author
First Published Sep 3, 2022, 1:25 PM IST

ರಿಯೋ ಡಿ ಜನೈರೋ (ಸೆ. 3): ದಂಪತಿಗಳು ನಡು ರಾತ್ರಿಯಲ್ಲಿ ನಿರ್ಜನ ಪ್ರದೇಶದ ಪಾರ್ಕಿಂಗ್‌ನಲ್ಲಿ ನಿಂತಿದ್ದ ತಮ್ಮ ಕಾರ್‌ ಹಿಂಬದಿಯ ಸೀಟ್‌ನಲ್ಲಿ ಸೆಕ್ಸ್‌ ಮಾಡುತ್ತಿದ್ದರು. ಈ ವೇಳೆ ಅಚಾತುರ್ಯವೊಂದು ನಡೆದು ಹೋಗಿದೆ. ತಮ್ಮ ಸುಂದರ ನೆನಪುಗಳನ್ನು ದಾಖಲಿಸಿಕೊಳ್ಳಬೇಕು ಎಂದುಕೊಂಡಿದ್ದ ಜೋಡಿಗೆ, ಜೀವನದ ಅತ್ಯಂತ ಕಹಿ ಸಂಗತಿ ಅಲ್ಲಿ ಎದುರಾಗಿದೆ. ಆಗಿದ್ದೇನೆಂದರೆ, ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರ್‌ಅನ್ನು ಗಮನಿಸಿದ ಕಳ್ಳರು, ಇದನ್ನು ಕದಿಯಲು ಹೋಗಿದ್ದಾರೆ. ಈ ಬೇಳೆ ಕಾರ್‌ನ ಹಿಂಬದಿ ಸೀಟ್‌ನಲ್ಲಿ ದಂಪತಿಗಳಿಬ್ಬರೂ ಸೆಕ್ಸ್ ಮಾಡುತ್ತಿರುವುದನ್ನು ಕಂಡಿದ್ದಾರೆ. ಈ ಹಂತದಲ್ಲಿ ಇವರು ಜೋಡಿಯ ಕಾರ್‌ ಮಾತ್ರವಲ್ಲ, ಜೋಡಿಯ ಪರ್ಸ್‌ ಹಾಗೂ ಮೊಬೈಲ್‌ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಕೊನೇ ಪಕ್ಷ ಅವರ ಬಟ್ಟೆಗಳನ್ನೂ ಬಿಡದೇ ಎಲ್ಲವನ್ನೂ ಎಗರಿಸಿ, ಬೆತ್ತಲೆಯಾಗಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಆಗಸ್ಟ್‌ 17 ರಂದು ಬ್ರೆಜಿಲ್‌ನಲ್ಲಿ ನಡೆದ ಘಟನೆ ಇದಾಗಿದೆ. ಇದರ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಬಿಳಿ ಬಣ್ಣದ ಕಾರ್‌ನಲ್ಲಿ ಜೋಡಿ ರೋಮ್ಯಾನ್ಸ್‌ ಮಾಡುತ್ತಿತ್ತು. ಈ ವೇಳೆ ಮೂರು ಮಂದಿ ಕಳ್ಳರ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಹುಡುಗ-ಹುಡುಗಿಯ ಹಣವನ್ನು ಮಾತ್ರವಲ್ಲದೆ, ಅವರ ಬಟ್ಟೆ ಬರೆಗಳನ್ನೂ  ತೆಗದುಕೊಂಡು ಹೋಗಿದೆ. ಸ್ವಲ್ಪ ದೂರ ಹೋದ ಬಳಿಕ, ಕಾರ್‌ನ ವಿಂಡೋದಿಂದ ಬಟ್ಟೆಗಳನ್ನು ಎಸೆದಿದ್ದಾರೆ.

ಇದರ ಕುರಿತಾಗಿ ಡೇಲಿ ಮೇಲ್‌ ಪತ್ರಿಕೆ ವರದಿ ಮಾಡಿದೆ. ಅಂದಾಜು ರಾತ್ರಿ 9.30ರ ಸುಮಾರಿಗೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್‌ನ ಬಳಿ ಈ ಘಟನೆ ನಡೆದಿದೆ. ಕಾರ್‌, ನಿರ್ಜನ ಪ್ರದೇಶದ ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿತ್ತು. ಇಬ್ಬರು ವ್ಯಕ್ತಿಗಳು ಕಾರ್‌ನಲ್ಲಿ ಇದ್ದಾರೆ ಎನ್ನುವ ಯಾವ ಸೂಚನೆಗಳು ಅದರಲ್ಲಿ ಕಂಡಿರಲಿಲ್ಲ. ಈ ವೇಳೆ ಕಾರ್ ಕದಿಯಲು ಬಂದ ಜನರು ಅವರ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಬಲವಂತವಾಗಿ ಕಾರ್‌ನ ಡೋರ್‌ ತೆಗೆದಿದ್ದಾರೆ. ಇನ್ನೊಬ್ಬ ದಂಪತಿಗಳ ಬಳಿ ಇರುವ ಎಲ್ಲಾ ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ಮೊಬೈಲ್‌ ಪರ್ಸ್‌ ಕೊನೆಗೆ ಅವರು ಬಿಚ್ಚಿಟ್ಟಿದ್ದ ಬಟ್ಟೆಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಇವರಿಗೆ ಬೆದರಿಕೆಯನ್ನೂ ಹಾಕಲಾಗಿದೆ.

ಇದು ಪಾಕಿಸ್ತಾನದ ದಿಲ್ ಚಾಹ್ತಾ ಹೈ.. 70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ!

ಕಾರ್‌ಅನ್ನು (Car) ಕದ್ದುಕೊಂಡು ಹೋಗುವ ಮುನ್ನ ದಂಪತಿಗಳಿಬ್ಬರನ್ನು ಬೆತ್ತಲೆಯಾಗಿಯೇ ರಸ್ತೆಗೆ ನೂಕಿದ್ದಾರೆ. ದಂಪತಿಯ (Couple) ಕಾರನ್ನು ಕಿತ್ತುಕೊಂಡು ಓಡಿಹೋಗುವಾಗ, ಅವರು ತಮ್ಮ ಬಟ್ಟೆಗಳನ್ನು ಕಿಟಕಿಯಿಂದ ಹೊರಗೆ ಎಸೆದರು. ಅದರ ನಂತರ ದಂಪತಿಗಳು ತಕ್ಷಣ ತಮ್ಮ ಬಟ್ಟೆಗಳನ್ನು ಎತ್ತಿಕೊಂಡು ಧರಿಸಿದರು. ಆದರೆ, ಕಾರಿನಲ್ಲೇ ಇನ್ನೂ ಕೆಲವು ಬಟ್ಟೆಗಳು ಉಳಿದಿದ್ದವು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್‌ ಆದ ನಂತರ, ಪೊಲೀಸರು ಅಪರಿಚಿತ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಿಯ ಪ್ರಕಾರ, ಬ್ರೆಜಿಲ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ (Sex in Public) ನಡೆಸುವುದು ಕಾನೂನುಬಾಹಿರವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳು ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಬಹುದು.

61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್‌ ಸ್ಟೋರಿ!

ಈ ಘಟನೆಯು ಬ್ರೆಜಿಲ್‌ನಲ್ಲಿ (Brazil) ಆಗಸ್ಟ್ 17 ರಂದು ಎಲ್ಲೋ ನಡೆದಿದೆ, ವಿಡಿಯೋದ (CCTV Video) ಟೈಮ್‌ಸ್ಟ್ಯಾಂಪ್ ಪ್ರಕಾರ, ಚಿತ್ರಗಳು ನಿನ್ನೆ, 1 ನೇ ಸೆಪ್ಟೆಂಬರ್‌ನ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು. ಅಪರಾಧಿಗಳನ್ನು ಬಂಧಿಸಲಾಗಿದೆಯೇ ಅಥವಾ ಸಂತ್ರಸ್ತರು, ಅವರ ಗುರುತುಗಳು ತಿಳಿದಿಲ್ಲ, ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆಯೇ ಎಂಬುದು ಕೂಡ ತಿಳಿದಿಲ್ಲ. ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಪ್ರಕಾರ, ಬ್ರೆಜಿಲ್‌ ಜಗತ್ತಿನಲ್ಲಿಯೇ ಗರಿಷ್ಠ ಕ್ರೈಮ್‌ರೇಟ್‌ ಹೊಂದಿರುವ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹಾಗಾಗಿ ಈ ದಂಪತಿಗಳು ತಾವು ಅದೃಷ್ಟವಂತರು ಎಂದು ಭಾವಿಸಿಕೊಳ್ಳಬಹುದು.

Follow Us:
Download App:
  • android
  • ios