Asianet Suvarna News Asianet Suvarna News

Udupi Crime: ವಜ್ರದುಂಗುರ, ಚಿನ್ನ ಕದಿಯುತ್ತಿದ್ದ ನಟೋರಿಯಸ್ ಕಳ್ಳನ ಸೆರೆ

ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನ ಮನೆಯಲ್ಲಿ ಯಾರು ಇಲ್ಲದ ವೇಳೆ, ಮನೆಯ ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿ, 3,48,000 ರೂ.ಯ ಸ್ವತ್ತುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಉಡುಪಿ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ. 

The arrest of a notorious thief who was stealing diamonds and gold sat
Author
First Published Dec 21, 2022, 6:34 PM IST

ಉಡುಪಿ (ಡಿ.21): ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನ ಮನೆಯಲ್ಲಿ ಯಾರು ಇಲ್ಲದ ವೇಳೆ, ಮನೆಯ ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿ, 3,48,000 ರೂ.ಯ ಸ್ವತ್ತುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಉಡುಪಿ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ. 

ಸಾಧಿಕ್ ಉಲ್ಲಾ (35) ಬಂಧಿತ ಆರೋಪಿ. ಈತನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಆಶ್ರಯ ಬಡಾವಣೆಯ ಚಿಕನ್ ಸ್ಟಾಲ್ ಬಳಿಯಲ್ಲಿ ಪ್ರಸ್ತುವ ವಾಸವಿದ್ದು, ಮೂಲತಃ ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದ ಹಾರನಹಳ್ಳಿ ಅಂಚೆಯ ಅಬ್ದುಲ್ ಮಜೀದ್ ಸಾಬ್ ಅವರ ಮಗನಾಗಿದ್ದಾನೆ.

ಪ್ರಕರಣ ಹಿನ್ನಲೆ ಏನು? : ಡಿ.11 ರ ರಾತ್ರಿಯಿಂದ ಡಿ.12 ರ ಬೆಳಗ್ಗೆ 9 ಗಂಟೆಯ ಮಧ್ಯದ ಅವಧಿಯಲ್ಲಿ ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನ ವೈಷ್ಣವಿ ಆಚಾರ್ಯರವರ, ರಮಾತ್ರಿವಿಕ್ರಮ ನಿಲಯಕ್ಕೆ ಹಿಂಬಾಗಿಲಿನಿಂದ ನುಗ್ಗಿದ ಕಳ್ಳ, ರೂಮ್‌ ನಲ್ಲಿದ್ದ ಅಲ್ಮೇರಾ ಬಾಗಿಲನ್ನು ಮುರಿದು, ಗೋದ್ರೇಜ್‌ ಲಾಕರ್‌ ನಲ್ಲಿದ್ದ ಡೈಮಂಡ್‌ ಉಂಗುರ -1, 20 ಗ್ರಾಂ ತೂಕದ ಚಿನ್ನದ ಜುಮುಕಿ-2, 8 ಗ್ರಾಂ ತೂಕದ ಚಿನ್ನದ ಕಾಯಿನ್‌-1, ಬೆಳ್ಳಿಯ ತಟ್ಟೆಗಳು-2, ಚಿನ್ನದ ಲೇಪನ ಇರುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Udupi: ಕುಖ್ಯಾತ ಕಳ್ಳನ ಬಂಧನ, 7 ಲಕ್ಷ ಮೌಲ್ಯದ ಸ್ವತ್ತು ವಶ

ಶಿಕಾರಿಪುರದಲ್ಲಿ ಅಡಗಿಸಿದ್ದ ಚಿನ್ನಾಭರಣ ವಶ: ಡಿ.19 ರಂದು ಉಡುಪಿ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಆಭರಣಗಳನ್ನು ಶಿಕಾರಿಪುರದ ತನ್ನ ಮನೆಯಲ್ಲಿ ಇಟ್ಟಿರುವುದನ್ನು ತಿಳಿಸಿದ್ದಾನೆ. ನಂತರ ಶಿಕಾರಿಪುರಕ್ಕೆ ತೆರಳಿ ಒಟ್ಟು ರೂ. 4,35,325 ರೂಪಾಯಿ ಮೌಲ್ಯದ ಡೈಮಂಡ್ ಉಂಗುರ, ಚಿನ್ನಾಭರಣ, ಬೆಳ್ಳಿಯ ಗಟ್ಟಿ, ಬೆಳ್ಳಿಯ ಆಭರಣ ಮತ್ತು ಚಿನ್ನದ ಲೇಪನ ಇರುವ ಆಭರಣಗಳನ್ನು ವಶಪಡಿಸಿ, ನ್ಯಾಯಾಲಯಕ್ಕೆ  ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ ಮಚ್ಚೀಂದ್ರ ಹಾಕೆ ಆದೇಶದಂತೆ, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು, ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಟಿ.ಎಂ, ವಾಸಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಸತೀಶ್‌ ಬೆಳ್ಳೆ, ಆನಂದ ಎಸ್‌, ರಿಯಾಝ್‌ ಅಹ್ಮದ್‌, ವಿಶ್ವನಾಥ ಶೆಟ್ಟಿ, ಕಿರಣ ಕೆ, ಶಿವಕುಮಾರ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ದಿನೇಶ್ ಮತ್ತು ನಿತಿನ್ ಕುಮಾರ್ ಸಹಕರಿಸಿದ್ದಾರೆ.

Bengaluru: ಲಾಕರ್‌ ತೆರೆಯುವಾಗ ಮೊಳಗಿತು ಸೈರನ್: ಕಾಲ್ಕಿತ್ತ ಖತರ್ನಾಕ್ ಖದೀಮ

ಬ್ರಹ್ಮಾವರದ ಮನೆ ಕಳ್ಳನ ಬಂಧನ: ರಾತ್ರಿ ಮನೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಪ್ರಕರಣದ ಕುಖ್ಯಾತ ಕಳ್ಳನನ್ನು  ಉಡುಪಿಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದು ಆತನಿಂದ, 7 ಲಕ್ಷ ರೂ. ಬೆಲೆಬಾಳುವ  ಚಿನ್ನಾಭರಣ ಹಾಗೂ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ವೃತ್ತದ ಪೊಲೀಸ್ ಠಾಣೆಗಳಾದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕನ್ನಕಳವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ  ವಿಶೇಷ ತಂಡವನ್ನು ರಚಿಸಲಾಗಿತ್ತು. ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀಮತಿ ಮುಕ್ತಾಬಾಯಿ ನೇತೃತ್ವದ ತಂಡವು ರಾತ್ರಿ ಮನೆ ಕಳ್ಳತನ ಪ್ರಕರಣದ ಹಳೆಯ ಆರೋಪಿಗಳ ವಿವರ ಮತ್ತು ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಸೋಮವಾರ ಸಂಜೆ ನೀಲಾವರ ಕ್ರಾಸ್‌ ಬಳಿ ಕಳ್ಳತನ ಪ್ರಕರಣದ ಹಳೆಯ ಆರೋಪಿ ವಿಜಯ ಕುಮಾರ್‌ ಶೆಟ್ಟಿ ಬಂಧಿಸಿದ್ದರು.

Follow Us:
Download App:
  • android
  • ios