Udupi: ಕುಖ್ಯಾತ ಕಳ್ಳನ ಬಂಧನ, 7 ಲಕ್ಷ ಮೌಲ್ಯದ ಸ್ವತ್ತು ವಶ

ರಾತ್ರಿ ಮನೆ ಕನ್ನ ಹಾಕಿ ಕಳವು ಮಾಡುತ್ತಿದ್ದ  ಪ್ರಕರಣದ ಕುಖ್ಯಾತ ಕಳ್ಳನನ್ನು  ಉಡುಪಿಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದು ಆತನಿಂದ,  7 ಲಕ್ಷ ರೂ ಬೆಲೆಬಾಳುವ  ಚಿನ್ನಾಭರಣ ಹಾಗೂ ಸೊತ್ತು ವಶಪಡಿಸಿಕೊಳ್ಳಲಾಗಿದೆ.

thief arrested in Udupi and  worth Rs 7 lakh jewellery  seized gow

ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಡಿ.20): ರಾತ್ರಿ ಮನೆ ಕನ್ನ ಹಾಕಿ ಕಳವು ಮಾಡುತ್ತಿದ್ದ  ಪ್ರಕರಣದ ಕುಖ್ಯಾತ ಕಳ್ಳನನ್ನು  ಉಡುಪಿಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದು ಆತನಿಂದ,  7 ಲಕ್ಷ ರೂ ಬೆಲೆಬಾಳುವ  ಚಿನ್ನಾಭರಣ ಹಾಗೂ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ವೃತ್ತದ ಪೊಲೀಸ್ ಠಾಣೆಗಳಾದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕನ್ನಕಳವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ  ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದ ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀಮತಿ ಮುಕ್ತಾಬಾಯಿ, ಸಿಬ್ಬಂದಿಯವರಾದ ವೆಂಕಟ್ರಮಣ ದೇವಾಡಿಗ ,ಪ್ರವೀಣ ಶೆಟ್ಟಿಗಾರ್‌, ಮಹಮ್ಮದ್‌ ಅಜ್ಮಲ್‌ ರವರ ತಂಡವು ರಾತ್ರಿ ಮನೆ ಕಳ್ಳತನ ಪ್ರಕರಣದ ಹಳೆಯ ಆರೋಪಿಗಳ ವಿವರ ಮತ್ತು ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿದ್ದಾರೆ. ಅಂತವರ ಚಲನವಲನದ ಮೇಲೆ ನಿಗಾವಹಿಸಿರುತ್ತಾರೆ. ಸೋಮವಾರ ಸಂಜೆ ನೀಲಾವರ ಕ್ರಾಸ್‌ ಬಳಿ  ಕಳ್ಳತನ ಪ್ರಕರಣದ ಹಳೆಯ ಆರೋಪಿ ವಿಜಯ ಕುಮಾರ್‌ ಶೆಟ್ಟಿ ಕಂಡುಬಂದಿದ್ದಾನೆ. ಆತನ ಹೊಂಡಾ ಮ್ಯಾಟ್ರಿಕ್ಸ್‌ ಸ್ಕೂಟರ್‌ ರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಆತನ ವಶದಲ್ಲಿತ್ತು.

ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತನು ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯ ಹಲವು ಪ್ರಕರಣದಲ್ಲಿ ಬಾಗಿಯಾಗಿರುವುದಾಗಿ ತನಿಖೆಯ ವೇಳೆ ಪತ್ತೆಯಾಗಿರುತ್ತದೆ.   

ಮಾರ್ಚ್‌ ಮತ್ತು ಎಪ್ರೀಲ್ ತಿಂಗಳ ಮಧ್ಯಾವಧಿಯಲ್ಲಿ  ಕಾಡೂರು ಗ್ರಾಮದ  ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್‌ ರವರ ಹಳೇ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280 ಕೆಜಿ ತೂಕದ ರೂ-140000/- ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕಳವು ಮಾಡಿರುತ್ತಾನೆ. ಜುಲೈ ತಿಂಗಳಲ್ಲಿ  ರಾತ್ರಿ ನಡೂರು ಗ್ರಾಮದ ನಡೂರು ಪಟೇಲ್‌ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಂದು ಇಂಡೇನ್‌ ಕಂಪೆನಿಯ ಗ್ಯಾಸ್‌ ಸಿಲಿಂಡರ್‌ ಕಳವು ಮಾಡಿರುತ್ತಾನೆ. 

ಜುಲಾಯಿ ತಿಂಗಳಲ್ಲಿ ಯಡ್ತಾಡಿ ಗ್ರಾಮದ  ದಾಲಾಡಿ ಯಲ್ಲಿರುವ ವಾಣಿ ಭಂಡಾರಿ ರವರ ಮನೆಯಲ್ಲಿ ರಾತ್ರಿ ಸಮಯ ಲೈಟ್‌ ಇಲ್ಲದೇ ಇದ್ದುದನ್ನು ಗಮನಿಸಿ ಮುಖ್ಯ ದ್ವಾರದ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು 5, 04000/- ರೂ ಮೌಲ್ಯದ ಚಿನ್ನಾಭರಣ ಹಾಗೂ ರೂ-15000/- ನಗದನ್ನು  ಕಳವುಮಾಡಿರುತ್ತಾನೆ. ನವೆಂವರ್ ತಿಂಗಳಿನಲ್ಲಿ ಕೋಟ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಮಾನ್ಯ ಶಾಲೆಯ ಎದುರು ಇರುವ ಸುಜಾತ ಶೆಟ್ಟಿ ರವರ  ಮನೆ ಕಳ್ಳತನ ಮಾಡಿರುತ್ತಾನೆ.

ನವೆಂಬರ್ ತಿಂಗಳಿನಲ್ಲಿ ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿರವರ ಮನೆಯಲ್ಲಿ ಲೈಟ್‌ ಇಲ್ಲದಿರುವುದು ಕಂಡು ಮನೆಯ ಬಾಗಿಲನ್ನು ಮುರಿದು  ಅಂದಾಜು ರೂ- 31000/- ಮೌಲ್ಯದ  ಚಿನ್ನ, ಬೆಳ್ಳಿಯ ಆಭರಣ ಮತ್ತು ಸೀರೆ ಹಾಗೂ ನಗದು ರೂ-5000/-  ಕಳವು ಮಾಡಿರುತ್ತಾನೆ.

Telangana: ತಂದೆಯೆದುರೇ ಕಿಡ್ನ್ಯಾಪ್‌ ಆದ ಯುವತಿ..! ಸಿಸಿ ಕ್ಯಾಮೆರಾದಲ್ಲಿ ಸೆರೆ
 
ಈ ಆರೋಪಿಯ ಬಂಧನದಿಂದ  ಬ್ರಹ್ಮಾವರ ಪೊಲೀಸ್‌ ಠಾಣಾ 4 ಕಳ್ಳತನ ಪ್ರಕರಣಗಳು ಹಾಗೂ ಕೋಟಾ ಪೊಲೀಸ್‌ ಠಾಣಾ 1 ಪ್ರಕರಣ  ನಡೆಸಿರುವುದು ಪತ್ತೆಯಾಗಿರುತ್ತದೆ. ಆರೋಪಿ ವಿಜಯ ಕುಮಾರ್‌ ಶೆಟ್ಟಿ ಈತನ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು  ಬಂದರು ಪೊಲೀಸ್‌ ಠಾಣೆಯಲ್ಲಿ 4 ಪ್ರಕರಣ, ಚಿಕ್ಕಮಂಗಳೂರು ಜಿಲ್ಲೆ ಎನ್‌ ಆರ್‌ ಪುರ ಠಾಣೆಯಲ್ಲಿ 1 ಪ್ರಕರಣ, ಹರಿಹರ ಪೊಲೀಸ್‌ ಠಾಣೆಯಲ್ಲಿ 1 ಪ್ರಕರಣ, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್‌ ಠಾಣೆಯಲ್ಲಿ 1 ಪ್ರಕರಣ, ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ, ಹಾಗೂ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ 1 ಕಳವು ಪ್ರಕರಣಗಳು ದಾಖಲಾಗಿರುತ್ತದೆ.

BENGALURU CRIME: ಸುಂದರ ಕುಟುಂಬಕ್ಕೆ ಬಡತನದ ಶಾಪ: ಮಗಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು  ಜಾಮೀನು ರಹಿತ ವಾರಂಟ್‌ ಜ್ಯಾರಿಯಾಗಿರುತ್ತದೆ. ಕೃತ್ಯಕ್ಕೆ ಬಳಸುತ್ತಿದ್ದ KA-20-EP-6201 ನೇ ಹೋಂಡಾ ಮ್ಯಾಟ್ರಿಕ್ಸ್‌ ಸ್ಕೂಟರ್‌ ಮೌಲ್ಯ ರೂ-30,000/-
ಕಳವು ಮಾಡಿದ ರೂ-4,64,700/-  ಮೌಲ್ಯದ ಚಿನ್ನಾಭರಣಗಳು, 
ಕಳವು ಮಾಡಿದ ರೂ- 2080/-  ಮೌಲ್ಯದ ಬೆಳ್ಳಿ ನಾಣ್ಯಗಳು, 
ಕಳವು ಮಾಡಿದ ರೂ 9,000/- ಮೌಲ್ಯದ ಸೀರೆ-1 
ಕಳವು ಮಾಡಿದ ಕಾಳುಮಣಸಿನ ಮಾರಾಟದಿಂದ ಪಡೆದ ನಗದು ರೂ-84,000/-
ಕಳವು ಮಾಡಿದ ಗ್ಯಾಸ್‌ ಸಿಲಿಂಡರ್‌-1 ಮೌಲ್ಯ ರೂ- 2,800/- ಆಗಿರುತ್ತದೆ.

Latest Videos
Follow Us:
Download App:
  • android
  • ios