Asianet Suvarna News Asianet Suvarna News

Uttara Kannada Crime: ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಆರೋಪಿ ಬಂಧನ

ಭಟ್ಕಳ ತಾಲೂಕಿನ ಜಾಲಿರೋಡ್ ಅರ್ಶದ್ ಕ್ಯಾಶ್ಯೂ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೋರ್ವನಿಗೆ ಪಿಎಫ್ (ಎಂಫ್ಲಾಯೀಸ್  ಪ್ರಾವಿಡೆಂಟ್ ಫಂಡ್) ಹಣವನ್ನು ದೊರಕಿಸಿ ಕೊಡಲು ನಕಲಿ ದಾಖಲೆ ಪತ್ರವನ್ನು ಸೃಷ್ಠಿಸಿದ್ದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

The accused who was creating fake documents was arrested in uttarakannada rav
Author
First Published Sep 19, 2022, 10:08 AM IST

ಭಟ್ಕಳ (ಸೆ.19) : ತಾಲೂಕಿನ ಜಾಲಿರೋಡ್ ಅರ್ಶದ್ ಕ್ಯಾಶ್ಯೂ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೋರ್ವನಿಗೆ ಪಿಎಫ್ (ಎಂಫ್ಲಾಯೀಸ್  ಪ್ರಾವಿಡೆಂಟ್ ಫಂಡ್) ಹಣವನ್ನು ದೊರಕಿಸಿ ಕೊಡಲು ನಕಲಿ ದಾಖಲೆ ಪತ್ರವನ್ನು ಸೃಷ್ಠಿಸಿದ್ದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

Bengaluru; ನಕಲಿ ದಾಖಲೆ ಸೃಷ್ಟಿಸಿ ಸೈಟ್ ಕಬ್ಜಾ ಮಾಡ್ತಿದ್ದ ಆರೋಪಿ ಬಂಧನ

  ಮುಂಡಳ್ಳಿ(Mundalli)ಯ ರಾಜೇಶ ದೇವಡಿಗ(Rajesh Devadiga) (30) ಬಂಧಿತ ಆರೋಪಿಯಾಗಿದ್ದು, ಈತನಿಂದ ವಿವಿಧ ಪ್ರೌಢಶಾಲೆ, ಕಂಪನಿಗಳ ಸೀಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರೋಪಿಯು ಸಾಗರ(Sagara)ದ ವ್ಯಕ್ತಿಯೋರ್ವರಿಂದ ಸೀಲ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ. ಮಂಜುನಾಯ್ಕ್(Manju naik) ಎಂಬಾತನಿಗೆ ಪಿಎಫ್ ಹಣ(PF Money) ತೆಗೆಯಿಸಿಕೊಡುವುದಾಗಿ ನಂಬಿಸಿದ್ದ  ಆರೋಪಿ ರಾಜೇಶ,  ಇದಕ್ಕಾಗಿ ನಕಲಿ ದಾಖಲೆ(Fake Documnets)ಗಳನ್ನು ಸೃಷ್ಠಿಸಿದ್ದ. ಆದರೆ, ಹುಬ್ಬಳ್ಳಿ(Hubballi)ಯ ಪಿಎಫ್ ಕಚೇರಿಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿನ ಸಹಿ ಹೊಂದಾಣಿಕೆಯಾಗದ್ದರಿಂದ ಸಂಬಂಧಪಟ್ಟವರಿಗೆ ಕಂಪೆನಿಯ ಮಾಲಕರಿಗೆ ಕಳುಹಿಸಿದ್ದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. 

ಈ ಸಂಬಂಧ ಅರ್ಶದ್ ಕ್ಯಾಶ್ಯೂ ಇಂಡಸ್ಟ್ರಿ(Arshad Cashew Industries) ಮಾಲಕ ರುಕ್ಕುದ್ದೀನ್ ಮಹ್ಮದ್ ಇಬ್ರಾಹಿಂ(Rukkuddin Mahmud Ibrahim)ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಯಾವಾಗ ಪೊಲೀಸರು ಮಂಜುನಾಯ್ಕ್ ಎಂಬವರನ್ನು ವಶಕ್ಕೆ ಪಡೆದುಕೊಂಡರೋ, ಆಗ ಆರೋಪಿಯ ಮಾಹಿತಿ ತಿಳಿದುಬಂದಿದೆ. ಇನ್ನು ಆರೋಪಿ ಬೆಂಗಳೂರು(Bengaluru), ಮೈಸೂರು(Mysuru), ಚಿಕ್ಕಬಳ್ಳಾಪೂರ(Chikkaballapur), ಚಿಕ್ಕಮಂಗಳೂರು(Chikkamangaluru) ಮುಂತಾದ ಕಡೆಯ ಶಿಕ್ಷಣ ಸಂಸ್ಥೆ ಮತ್ತು ಇಂಡಸ್ಟ್ರಿಗೆ ಸಂಬಂಧಪಟ್ಟ ಸುಳ್ಳು ದಾಖಲಾತಿಗಳನ್ನು ಕೂಡಾ ಸೃಷ್ಠಿಸಿದ್ದಾನೆ. ಆರೋಪಿ ರಾಜೇಶನ ಹಣಕಾಸು ವ್ಯವಹಾರದ ಬಗ್ಗೆ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. 

ಬೆಳಗಾವಿ: ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗೆ ಪರಭಾರೆ: ಮೂವರ ಅಮಾನತು

ಈ ಪ್ರಕರಣವನ್ನು ಉತ್ತರಕನ್ನಡ(Uttara kannada)ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಪೆನ್ನೇಕರ್(Suman D Pennekar) ಹಾಗೂ 
ಹೆಚ್ಚುವರಿ ಪೊಲೀಸ್ ಅಧೀಕ್ಷಕರು‌ ಎಸ್. ಬದ್ರೀನಾಥ್(S.Badrinath) ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ(Dysp Belliyappa) ಮುಂದಾಳತ್ವದಲ್ಲಿ ಪ್ರಕರಣದ ಪತ್ತೆಯ ಕುರಿತಂತೆ ಸಿ.ಪಿ.ಐ ದಿವಾಕರ(CPI Divakar) PM PSI. ಸುಮ ಬಿ., ಯಲ್ಲಪ್ಪ ಹೆಚ್. ಮಾದರ, ಹೆಚ್. ಬಿ. ಕುಡಗುಂಟಿ ಹಾಗೂ ಸಿಬ್ಬಂದಿ ಮದರಸಾಬ ಚಿಕ್ಕೇರಿ,  ದಿನೇಶ ನಾಯಕ, ಸಿದ್ದಪ್ಪ ಕಾಂಬಳೆ, ಲೋಕಪ್ಪ ಕತ್ತಿ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios