Hindu Sentiments; ISIS ಮ್ಯಾಗಜಿನ್‌ನಲ್ಲಿ ಇದೆಂಥಾ ಪೋಟೋ... ಮುರ್ಡೇಶ್ವರ ಶಿವನಿಗೆ ಅಪಮಾನ

* ಸೋಶಿಯಲ್ ಮೀಡಿಯಾದಲ್ಲಿ ಹಿಂದು ದೇವರಿಗೆ ಅಪಮಾನ
* ಮುರುಡೇಶ್ವರದ ಶಿವನ ವಿಗ್ರಹಕ್ಕೆ ಅಪಚಾರ
* ಉಗ್ರಗಾಮಿ ಸಂಘಟನೆಯ ಕೆಲಸವೆ?
* ಕಿಡಿಗೇಡಿಗಳು ಸೋಶಿಯಲ್ ಮೀಡಿಯಾ ಬಳಸಿಕೊಂಡರೆ?

Terrorist ISIS magazine shares uttara kannada murudeshwar shiva idol in hurting hindu sentiments mah

ಕಾರವಾರ(ನ. 23)   ಸೋಶಿಯಲ್ ಮೀಡಿಯಾದಲ್ಲಿ (Social Media) ಒಮ್ಮೊಮ್ಮೆ ಹರಿದಾಡುವ ಸುದ್ದಿಗಳು ದೊಡ್ಡ ಆತಂಕ ತಂದುಬಿಡಬಹುದು. ಅಂತದ್ದೇ ಒಂದು ನ್ಯೂಸ್ ಇಲ್ಲಿದೆ.  ಹಿಂದು(Hindu) ಭಾವನೆಗಳಿಗೆ ಅಪಚಾರವಾಗಿರುವ ಬಗ್ಗೆ ಹಲವರು ದನಿ ಎತ್ತಿದ್ದಾರೆ. ಇದರ ಹಿಂದೆ ನಿಜಕ್ಕೂ ಉಗ್ರಗಾಮಿ ಸಂಘಟನೆ ಕೈವಾಡ ಇದೇಯಾ ಗೊತ್ತಿಲ್ಲ. ಆದರೆ ಇಂಥದ್ದೊಂದು ಪೋಟೋ  ಹರಿದಾಡುತ್ತಿರುವುದು ಪ್ರಶ್ನೆ ಕೇಳುವಂತೆ ಮಾಡಿದೆ.

"

ಉತ್ತರ ಕನ್ನಡ ಜಿಲ್ಲೆ(Uttara Kannada)  ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ (Murdeshwar)ಶಿವನ ಪ್ರತಿಮೆಯ ಮೇಲೆ ಐಸಿಸ್ ನ ವಕ್ರದೃಷ್ಟಿ ಬಿದ್ದಿದೆಯೇ ಎನ್ನುವ ಪ್ರಶ್ನೆ ಕಾಡಲು ಆರಂಭಿಸಿದೆ. ಅಲ್ಲಿನ ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್ ಧ್ವಜ ಹೋಲುವ ಧ್ವಜವನ್ನು ಅಳವಡಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಐಸಿಸ್ ಮುಖವಾಣಿ ದ ವೈಸ್ ಆಫ್ ಹಿಂದ್ ಎಂಬ ತಲೆಬರಹದಡಿ ಈ ಫೊಟೊ ಪ್ರಕಟವಾಗಿದೆ. ಕೆಳಗಡೆ ಇಟ್ಸ್ ಟೈಮ್ ಟು ಕಮ್ ಬ್ರೇಕ್ ಫಾಲ್ಸ್ ಗಾಡ್ಸ್ ಅಂತ ಬರೆಯಲಾಗಿದೆ. ಅಂಶುಲ್ ಸಕ್ಸೇನಾ ಎನ್ನುವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಿವ ಹಿಂದುಗಳ ಆರಾಧ್ಯ ದೇವರಾಗಿದ್ದು ಈ ಮೂಲಕ ಐಸಿಸ್ ನ ಕೆಂಗಣ್ಣು ಹಿಂದುಗಳ ಮೇಲೆ ಬಿದ್ದಿದೆಯೇ ಎಂಬ ಕಳವಳ ಉಂಟಾಗಿದೆ. 

ಧಾರ್ಮಿಕ ಭಾವನೆಗೆ ಧಕ್ಕೆ : ಸಾರ್ವಜನಿಕರಿಗೆ ಕಾಣದಂತೆ ಮಾಂಸ ಶೇಖರಿಸಿಡಲು ವ್ಯಾಪಾರಿಗಳಿಗೆ ಆದೇಶ?

ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ ಹಾಕಿರುವ ಅಂಶುಲ್ ಸಕ್ಸೇನಾ ಎಂಬ ಯುವಕ, ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its time to Break False Gods’ ಎಂಬ ಬರಹವನ್ನು ಹಾಕಲಾಗಿದೆ. ಜೊತೆಗೆ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ರೀತಿಯ ಧ್ವಜ ಹಾರಾಡುವಂತೆ ಚಿತ್ರಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಈ ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದ್ದಾರೆ. 

ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಸಂಬಂಧಿಸಿದ ಇಲಾಖೆ ಕ್ರಮವಹಿಸಬೇಕು ಮತ್ತು ಇಂತಹ ದುಷ್ಕೃತ್ಯಕ್ಕೆ ಸರಕಾರ ಅವಕಾಶ ನೀಡಬಾರದು ಎಂದು ನಾಗರಿಕರು ಕೇಳಿಕೊಂಡಿದ್ದಾರೆ.

ಹಿಂದು ದೇವರಿಗೆ ಅವಹೇಳನ ಇದು ಹೊಸದೇನಲ್ಲ. ವಿದೇಶದ ನಟಿಮಣಿಯರು ಹಿಂದು ದೇವರ ಟ್ಯಾಟೋ ಹಾಕಿಸಿಕೊಂಡು ವಿವಾದ ಎಬ್ಬಿಸಿದ್ದರು.  ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದ ನಟಿ ಟೀಕೆಗೆ ಗಿರಿಯಾಗಿ ಕ್ಷಮೆ ಕೇಳುವ ಪರಿಸ್ಥಿತಿ ಬಂದಿತ್ತು.

ಮುರುಡೇಶ್ವರ ವಿಶೇಷತೆ; ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬಿ ಸಮುದ್ರದ (Arabian Sea) ತೀರದಲ್ಲಿರುವ ಈ ಊರು ಎತ್ತರದ ಶಿವನ (Lord Shiva)ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. 

 ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ಎರಡನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ.

ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರ ಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕ ತೆಗಳ ಪ್ರಸಿದ್ಧ ತಾಣವಾಗಿತ್ತು.

ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲು ಗಳು, ಮರದಿಂದ ತಯಾರಿಸಿದ ಕುರುಹುಗಳು ಇತಿಹಾಸ ಮತ್ತು ಪುರಾಣದ ಕತೆಯನ್ನು ಹೇಳುತ್ತವೆ. 

 

Latest Videos
Follow Us:
Download App:
  • android
  • ios