ಧಾರ್ಮಿಕ ಭಾವನೆಗೆ ಧಕ್ಕೆ : ಸಾರ್ವಜನಿಕರಿಗೆ ಕಾಣದಂತೆ ಮಾಂಸ ಶೇಖರಿಸಿಡಲು ವ್ಯಾಪಾರಿಗಳಿಗೆ ಆದೇಶ?
*ಮಾಂಸಾಹಾರಗಳನ್ನು ಸಾರ್ವಜನಿಕರಿಗೆ ಗೋಚರಿಸದಂತೆ ಮುಚ್ಚಿಡಿ!
*ಹಸಿ ಮಾಂಸ ಮತ್ತುಮೊಟ್ಟೆ ಮಾರಾಟ ಅಂಗಡಿಗಳಿಗೂ ಅನ್ವಯ
*ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ "ಮೌಖಿಕ ಸೂಚನೆ"
*ಸೂಚನೆಯು "ಅಸ್ಪಷ್ಟವಾಗಿದೆ" ಎಂದ ವ್ಯಾಪಾರಸ್ಥರು!
ವಡೋದರಾ(ನ.12): ಸಾಮಾನ್ಯವಾಗಿ ಹೊಟೇಲ್ (Hotel) ಮತ್ತು ರೆಸ್ಟೋರೆಂಟ್‌ಗಳು (Restaurant) ತಮ್ಮಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಮಾರ್ಕೆಟಿಂಗ್ ಮಾಡಲು ಬೊರ್ಡ್‌ಗಳನ್ನು ಅಳವಡಿಸಿರುತ್ತಾರೆ. ಆದರೆ ಗುಜರಾತ್‌ನ ವಡೋದರಾ (Vododara) ಜಿಲ್ಲೆಯಲ್ಲಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಮಾಂಸಾಹಾರಿ ಚಿತ್ರವಿರುವ ಬೋರ್ಡ್‌ಗಳನ್ನು ತೆಗೆದು ಹಾಕುವಂತೆ ಆದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. 15 ದಿನಗಳ ಒಳಗೆ ನಗರದ ಬೀದಿ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರಾಟವಾಗುತ್ತಿರುವ ಎಲ್ಲಾ ಮಾಂಸಾಹಾರಿ ಆಹಾರವನ್ನು (Non-veg food) ಪ್ರದರ್ಶಿಸುವ ಬೋರ್ಡ್‌ಗಳನ್ನು ತೆಗೆದುಹಾಕುವಂತೆ ವಡೋದರಾ ಮುನ್ಸಿಪಲ್ ಕಾರ್ಪೊರೇಶನ್ (VMC) ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ (Hitendra Patel) ಗುರುವಾರ ಕಾರ್ಯನಿರ್ವಾಹಕ ವಿಭಾಗಕ್ಕೆ "ಮೌಖಿಕ ಸೂಚನೆ" ನೀಡಿದ್ದಾರೆ. ಇದು "ಧಾರ್ಮಿಕ ಭಾವನೆಗಳ" ವಿಷಯವಾಗಿದೆ ಎಂದು ಹೇಳಿರುವ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ನಾನ್ ವೇಜ್ ಆಹಾರ ಪ್ರದರ್ಶಿಸುವ ಎಲ್ಲ ಬೋರ್ಡ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಎಲ್ಲಾ ಮಾಂಸಾಹಾರಿ ಸ್ಟಾಲ್‌ಗಳನ್ನು ಮುಖ್ಯ ರಸ್ತೆಯಿಂದ ದೂರವಿರುವಂತೆ ಹಾಕಿಂಗ್ ವಲಯಗಳಿಗೆ ನಿರ್ಬಂಧಿಸಿ ರಾಜ್‌ಕೋಟ್ ನಗರ ಮೇಯರ್ ಆದೇಶದ ಒಂದು ದಿನದ ನಂತರ ಪಟೇಲ್ ಅವರ ಸೂಚನೆ ಬಂದಿದೆ. ಗುರುವಾರ ಪೌರಕಾರ್ಮಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟೇಲ್ ಅವರು, ಮೀನು, ಮಾಂಸ, ಕೋಳಿ, ಮೊಟ್ಟೆ ಸೇರಿದಂತೆ ಮಾಂಸಾಹಾರ ಮಾರಾಟ ಮಾಡುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಹಾಗೂ ಮಾಂಸಾಹಾರ ಹೊಂದಿರುವ ಯಾವುದೇ ರೆಸ್ಟೋರೆಂಟ್‌ಗಳು ಸಾರ್ವಜನಿಕರಿಗೆ ಮಾಂಸಾಹಾರ ಕಾಣದಂತೆ ಮುಚ್ಚಬೇಕು ಎಂದು ಹೇಳಿದ್ದಾರೆ.
ಹಸಿ ಮಾಂಸ ಮತ್ತು ಮೊಟ್ಟೆ ಮಾರಾಟ ಮಾಡುವ ಅಂಗಡಿಗಳಿಗೂ ಅನ್ವಯ!
ಸುದ್ದಿಗಾರರೊಂದಿಗೆ ಮಾತನಾಡಿದ ಹಿತೇಂದ್ರ ಪಟೇಲ್ "ಎಲ್ಲಾ ಆಹಾರ ಮಳಿಗೆಗಳು, ವಿಶೇಷವಾಗಿ ಮೀನು (Fish), ಮಾಂಸ (Flesh) ಮತ್ತು ಮೊಟ್ಟೆಗಳಂತಹ (Egg) ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವವರು, ನೈರ್ಮಲ್ಯದ ಕಾರಣಗಳಿಗಾಗಿ ಆಹಾರವನ್ನು ಚೆನ್ನಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು! ಅವುಗಳನ್ನು ಮುಖ್ಯ ರಸ್ತೆಗಳಿಂದ ತೆಗೆದುಹಾಕಬೇಕು ಎಂದು ನಾನು ಸೂಚನೆ ನೀಡಿದ್ದೇನೆ. ಬೀದಿ ಬದಿ ವ್ಯಾಪಾರದಿಂದ ಸಂಚಾರ ದಟ್ಟಣೆ ಆಗುವ ಸಾಧ್ಯತೆ ಕೂಡ ಇದೆ" ಎಂದು ಹೇಳಿದ್ದಾರೆ.
Vaccine: ಲಸಿಕೆ ಪಡೆಯದಿದ್ರೂ ಮೊಬೈಲ್‌ಗೆ ಮೆಸೇಜ್, ಖಾಸಗಿ ಉದ್ಯೋಗಿ ಮನೆಯಲ್ಲಿ 3000 ಡೋಸ್
ಆಹಾರ ಪದಾರ್ಥಗಳನ್ನು ಪ್ರದರ್ಶಿಸಲು ಮಾರಾಟಗಾರರಿಗೆ ಪಾರದರ್ಶಕ (Transparent Sheet) ಹೊದಿಕೆಯನ್ನು ಬಳಸಲು ಅನುಮತಿಸಲಾಗಿದೆಯೇ ಎಂದು ಕೇಳಿದಾಗ, "ಯಾವುದೇ ಮಾಂಸಾಹಾರಿ ಆಹಾರವು ರಸ್ತೆಯ ಮೂಲಕ ಹಾದುಹೋಗುವ ಸಾರ್ವಜನಿಕರಿಗೆ ಗೋಚರಿಸುವುದಿಲ್ಲ ಎಂದು ಅವರು ಖಚಿತಪಡಿಸಿಕೊಳ್ಳಬೇಕು ... ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದೆ ... ಮಾಂಸಾಹಾರಿ ಆಹಾರವನ್ನು ಪೂರ್ಣ ಪ್ರದರ್ಶನದಲ್ಲಿ ಮಾರಾಟ ಮಾಡುವ ಅಭ್ಯಾಸವು ವರ್ಷಗಳಿಂದಲೂ ಇದೆ, ಆದರೆ ಅದನ್ನು ಸರಿಪಡಿಸುವ ಸಮಯ ಬಂದಿದೆ. ಮಾಂಸಾಹಾರವನ್ನು ನೋಡಬಾರದು." ಈ ಸೂಚನೆಯು ಹಸಿ ಮಾಂಸ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಗಳಿಗೂ ಅನ್ವಯಿಸುತ್ತದೆ ಎಂದು ಪಟೇಲ್ ಹೇಳಿದ್ದಾರೆ.
ಸೂಚನೆಯು "ಅಸ್ಪಷ್ಟವಾಗಿದೆ" ಎಂದ ವ್ಯಾಪಾರಸ್ಥರು!
ಮಾರಾಟಗಾರರು 15 ದಿನಗಳಲ್ಲಿ ಸೂಚನೆಗಳನ್ನು ಅನುಸರಿಸಬೇಕು ಅಥವಾ ಭಾರೀ ದಂಡವನ್ನು ಪಾವತಿಸಬೇಕು. ಇದನ್ನು ಖಚಿತಪಡಿಸಿಕೊಳ್ಳಲು VMCಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಟೇಲ್ ಹೇಳಿದರು. ಆದಾಗ್ಯೂ, ನಗರಪಾಲಿಕೆ ಆಯುಕ್ತೆ ಶಾಲಿನಿ ಅಗರ್ವಾಲ್ ಮತ್ತು ನಗರದ ಆಡಳಿತ ವಾರ್ಡ್‌ಗಳ ಅಧಿಕಾರಿಗಳು ಈ ನಿರ್ಧಾರದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು. ಅಗರ್ವಾಲ್ ಅವರು ಈ ಕುರಿತು ಯಾವುದೇ ಸೂಚನೆಯನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್, ಮೆಚ್ಚುಗೆಯ ಮಹಾಪೂರ!
ಮಾಂಸ ವ್ಯಾಪಾರಿಯೊಬ್ಬರು ಸೂಚನೆಯು "ಅಸ್ಪಷ್ಟವಾಗಿದೆ" ಎಂದು ಹೇಳಿದ್ದಾರೆ. "ಸ್ಥಾಯಿ ಸಮಿತಿ ಅಧ್ಯಕ್ಷರು ಕರೆದಿದ್ದ ಸಭೆಯಲ್ಲಿ ಕೆಲವು ವಿಎಂಸಿ ಅಧಿಕಾರಿಗಳಿಂದ ನಾವು ಈ ನಿರ್ಧಾರದ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ಈ ನಿಯಮದ ಬಗ್ಗೆ ಮತ್ತು ದಂಡದ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲದಿರುವುದರಿಂದ ನಮಗೆ ಇದರ ಸ್ಪಷ್ಟನೆ ಸಿಕ್ಕಿಲ್ಲ. ಈ ಸಮಯದಲ್ಲಿ, ಎಲ್ಲಾ ಮಾಂಸಾಹಾರಿ ಆಹಾರವನ್ನು ಪ್ರದರ್ಶನದಿಂದ ತೆಗೆದುಹಾಕಲು ಮಾರಾಟಗಾರರಿಗೆ ಕೇಳಲು ಮಾತ್ರ ನಮಗೆ ಸೂಚನೆ ನೀಡಲಾಗಿದೆ… ಇದು ಅಸಾಧ್ಯವಾಗಿದೆ ಏಕೆಂದರೆ ಗ್ರಾಹಕರು ಸ್ಟಾಲ್‌ಗಳಿಗೆ ಬಂದಾಗ ಅವರಿಗೆ ಮಾಂಸಾಹಾರಿ ಆಹಾರದ ಬೋರ್ಡ್‌ಗಳು ಕೂಡ ಕಾಣಿಸುವುದ ಅತ್ಯವಶ್ಯವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ (BJP) ನಾಯಕರು ಈ ಮೌಖಿಕ ಆದೇಶದ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ. ಇತ್ತೀಚೆಗೆ ಹೊರಡಿಸಿದ ಬೇರೊಂದು ಆದೇಶದ ಹಿನ್ನೆಲೆ ಈ ಆದೇಶ ಹೊರಡಿಸಿರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಯಾದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ನವೆಂಬರ್ 9 ರಂದು, ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಶನ್ (RMC) ಮೊಟ್ಟೆ ಮತ್ತು ಇತರ ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಕೈಗಾಡಿಗಳು ಮತ್ತು ಕ್ಯಾಬಿನ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು, ಇದರ ಭಾಗವಾಗಿ ನಾಗರಿಕ ಅಧಿಕಾರಿಗಳು ಫುಲ್‌ಚಾಬ್ ಚೌಕ್, ಲಿಂಬ್ಡಾ ಚೌಕ್ ಮತ್ತು ಶಾಸ್ತ್ರಿ ಮೈದಾನದಲ್ಲಿನ ಮಳಿಗೆಗಳನ್ನು ತೆಗೆದುಹಾಕಿದ್ದರು.