Asianet Suvarna News Asianet Suvarna News

New Year 2023: ಹೊಸ ವರ್ಷಾಚರಣೆಗೆ ಉಗ್ರಾತಂಕ: ಹಿಂದೂ ಸಂಘಟನೆಗಳ ಮೇಲೂ ಪೊಲೀಸ್‌ ಕಣ್ಣು

ಹೊಸ ವರ್ಷಕ್ಕೆ ಇನ್ನೇನು ದಿನಗಣನೆ ಆರಂಭವಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸುವ ನಿಟ್ಟಿನಲ್ಲಿ ಭಯೋತ್ಪಾದಕ ಚಟುವಟಿಕೆ, ಮುಸ್ಲಿಂ ಮತ್ತು ಹಿಂದೂ ಸಂಘಟನೆಗಳು ಕಾರ್ಯವೈಖರಿ, ಹೋಟೆಲ್‌ ಮತ್ತು ಪಬ್‌-ಬಾರ್‌ಗಳ ಮೇಲೆ ಬೆಂಗಳೂರಿನ ಪೋಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. 

Terrorism fear for New Year celebrations Police eyes on Hindu organizations too sat
Author
First Published Dec 26, 2022, 6:39 PM IST

ಬೆಂಗಳೂರು (ಡಿ.26): ಹೊಸ ವರ್ಷಕ್ಕೆ ಇನ್ನೇನು ದಿನಗಣನೆ ಆರಂಭವಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸುವ ನಿಟ್ಟಿನಲ್ಲಿ ಭಯೋತ್ಪಾದಕ ಚಟುವಟಿಕೆ, ಮುಸ್ಲಿಂ ಮತ್ತು ಹಿಂದೂ ಸಂಘಟನೆಗಳು ಕಾರ್ಯವೈಖರಿ, ಹೋಟೆಲ್‌ ಮತ್ತು ಪಬ್‌-ಬಾರ್‌ಗಳ ಮೇಲೆ ಬೆಂಗಳೂರಿನ ಪೋಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. 

ಹೊಸ ವರ್ಷಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಪೊಲೀಸ್ ಇಲಾಖೆಯಿಂದ ಫುಲ್ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲಾಗಿದೆ. ಈ‌ ಹಿನ್ನೆಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸ್ವಯಂ ಪ್ರೇರಣೆಯಿಂದ ಪರಿಶೀಲನೆಗೆ ಇಳಿದಿದ್ದಾರೆ. ಈ ವೇಳೆ ಹೋಟೆಲ್‌ಗಳ ಪರಿಶೀಲನೆಗೆ ತೆರಳಿದ ವೇಳೆ ಅಲ್ಲಿ ಮಾಡುತ್ತಿದ್ದ ಕಳ್ಳಾಟ ಬಯಲಿಗೆ ಬಂದಿದೆ. ಕೂಡಲೇ ಖಾಕಿ ತಂಡ ಕೆಲವು ಪ್ರತಿಷ್ಟಿತ ಹೊಟೇಲ್ ಗಳ‌ ಸಿಸಿಟಿವಿಗಳನ್ನು ಸುಸ್ಥಿತಿಯಲ್ಲಿಡುವಂತೆ ಹಾಗೂ ಹೆಚ್ಚಿನ ಭದ್ರತೆ ಮತ್ತು ಸಾರ್ವಜನಿಕರ ರಕ್ಷಣೆ ದೃಷ್ಟಿಯಿಂದ ನಿಗಾವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ. 

New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ

ಪೊಲೀಸರ ತಂಡದಿಂದ ಹೋಟೆಲ್‌ಗಳನ್ನು ತಪಾಸಣೆ ಮಾಡಿದ ವೇಳೆ ಕೆಲವು ಹೋಟೆಲ್‌ಗಳು ಕೇವಲ 2 ವಾರಗಳ ಸಿಸಿಟಿವಿ ರೆಕಾರ್ಡಿಂಗ್ ಮಾತ್ರ ಸಂಗ್ರಹ ಮಾಡುತ್ತಿದ್ದವು. ಆದರೆ, ಕಾನೂನು ನಿಯಮದಂತೆ 30 ದಿನಗಳ ಸಿಸಿಟಿವಿ ರೆಕಾರ್ಡಿಂಗ್ ಲಭ್ಯವಿರಬೇಕು. ಸಿಸಿಟಿವಿ 2 ಮೆಗಾಫಿಕ್ಸಲ್ ಕ್ಯಾಮೆರಾ, 30 ದಿನದ ಮೆಮೊರಿ ಪವರ್ ಇರಬೇಕಿದ್ದರೂ ರೂಲ್ಸ್ ಗಳನ್ನು ಬ್ರೇಕ್ ಮಾಡಲಾಗಿದೆ.  ಈ‌ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹೊಟೇಲ್ ಮಾಲೀಕರ‌ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇಂದಿರಾನಗರದ ಹೊಟೇಲ್ ಗಳು ಹಾಗೂ ಪಬ್ ಗಳಲ್ಲೂ ರೂಲ್ಸ್ ಬ್ರೇಕ್ ಮಾಡಿವೆ. ನಿಗದಿತ ಸಮಯದ ಮೀರಿ ಪಬ್ ಗಳು ತೆರೆದಿರುವ ಹಿನ್ನೆಲೆಯಲ್ಲಿ 3 ಕೇಸ್ ಗಳು ದಾಖಲು ಆಗಿದೆ. ಇನ್ನು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ 4 ಕೇಸ್ ದಾಖಲಾಗಿವೆ.

ಹಿಂದೂ ಸಂಘಟನೆಗಳ ಮೇಲೆ ಕಣ್ಣು: ಅಷ್ಟಕ್ಕೂ ಹಿಂದೂ ಸಂಘಟನೆಗಳ ಮೇಲ್ಯಾಕೆ ಪೊಲೀಸರ ಕಣ್ಣು..? ಹೊಸ ವರ್ಷಕ್ಕೂ ಹಿಂದೂ ಸಂಘಟನೆಗಳ ಮೇಲೆ ಪೊಲೀಸರು ನಿಗಾ ಇಡೋಕು ಏನ್ ಸಿಂಕ್? ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣವೂ ಇದೆ. ರಾಜ್ಯ ಗುಪ್ತಚರ ಇಲಾಖೆಯು ನಗರದ ಹಿಂದೂ ಮುಖಂಡರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ‌ ಹದ್ದಿನ ಕಣ್ಣಿಡುವಂತೆ ಸೂಚನೆ ನೀಡಿದೆ. ಇತ್ತೀಚೆಗೆ ಪೊಲೀಸ್ ಕಮಿಷನರ್ ಆಫೀಸ್ ಗೆ ದೂರು ನೀಡಿದ್ದ ಹಿಂದೂ ಕಾರ್ಯಕರ್ತರು, ನ್ಯೂ ಇಯರ್ ಸೆಲೆಬ್ರೇಷನ್ ಗೆ ಪಬ್, ರಸ್ತೆಗಳಲ್ಲಿ ಡಿ.ಜೆ ಸೌಂಡ್ ಗೆ ಅವಕಾಶ ನೀಡದಂತೆ ಮನವಿ ಮಾಡಿದ್ದರು. ಆದರೆ, ಅವಕಾಶ ನೀಡಿದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ತಯಾರಿಯಾಗಿವೆ ಎಂದು ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿದೆ.

Love Astrology 2023: ಹೊಸ ವರ್ಷದಲ್ಲಿ ಯಾವ ರಾಶಿಯ ಲವ್ ಲೈಫ್ ಹೇಗಿರುತ್ತೆ?

ಹೊಸ ವರ್ಷಾಚರಣೆ ಸ್ಥಳದಲ್ಲಿ ಧರಣಿ: ಇನ್ನು ಹೊಸ ವರ್ಷಾಚರಣೆಯನ್ನು ವಿರೋಧಿಸಿ ಕೆಲವು ಹಿಂದೂ ಸಂಘಟನೆಗಳು ಪಬ್, ರೆಸ್ಟೋರೆಂಟ್, ಪಾರ್ಟಿ ಮಾಡೋ ಕೆಲ ಜಾಗಗಳಲ್ಲಿ ಹೋಗಿ ಧರಣಿ ಸಾಧ್ಯತೆಯಿದೆ. ಹೀಗಾಗಿ ಹಿಂದೂ ಮುಖಂಡರು, ಸಂಘಟನೆಗಳ ಕಾರ್ಯಕರ್ತರ ಮೇಲೆ ನಿಗಾವಹಿಸಲಾಗಿದೆ. ಪಬ್, ರೆಸ್ಟೋರೆಂಟ್, ಪಾರ್ಟಿ ನಡೆಯೋ ಸ್ಥಳಗಳಲ್ಲಿ ಅಲರ್ಟ್ ಇಟ್ಟಿದ್ದಾರೆ. ಜೊತೆಗೆ ಹಿಂದೂ ಮುಖಂಡರ ಜೊತೆ ಮಾತನಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಆಯಾ ವ್ಯಾಪ್ತಿಯ ಡಿಸಿಪಿಗಳು ಸೂಚನೆ ನೀಡಲಿದ್ದಾರೆ. 

ಭಯೋತ್ಪಾದಕ ಚಟುವಟಿಕೆ ಮೇಲೆ ನಿಗಾ: ಹೊಸ ವರ್ಷಾಷಚರಣೆಗೆ ಪೊಲೀಸರ ಭದ್ರತೆ ಕುರಿತು ಮಾತನಾಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ರೆಡ್ಡಿ ಅವರು, ನ್ಯೂ ಇಯರ್ ವೇಳೆ ಭಯೋತ್ಪಾದಕ ಚಟುವಟಿಕೆ ಶಂಕೆ ವ್ಯಕ್ತವಾಗಿದೆ.  ಈ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಮಂಗಳೂರು ಹಾಗೂ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ಆಗಿತ್ತು. ಆದ್ದರಿಂದ ಬೆಂಗಳೂರು ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ ಎಂದರು.

Follow Us:
Download App:
  • android
  • ios