Asianet Suvarna News Asianet Suvarna News

Death Penalty: ಸೌದಿಯಲ್ಲೇಕೆ ಉಗ್ರರು ಸೈಲೆಂಟ್‌..? ಅಲ್ಲಿ ನೀಡೋ ಶಿಕ್ಷೆಗೂ ಭಾರತದ ಶಿಕ್ಷೆಗೂ ವ್ಯತ್ಯಾಸ ಹೀಗಿದೆ..!

ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ 10 ದಿನದಲ್ಲಿ 12 ಜನರಿಗೆ ಶಿರಚ್ಛೇದ ಮಾಡುವ ಮೂಲಕ ಮರಣದಂಡನೆ ವಿಧಿಸಲಾಗಿದೆ. ಅದೂ ಮಾದಕ ಅಪರಾಧಕ್ಕೆ. ಇದೇ ರೀತಿ, ಉಗ್ರರಿಗೂ ಇದೇ ರೀತಿ ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತದೆ. 

terror attacks in saudi arabia are very less difference between india and saudi punishment ash
Author
First Published Nov 24, 2022, 1:48 PM IST

ಇತ್ತೀಚೆಗೆ ಮಂಗಳೂರಿನಲ್ಲಿ (Mangaluru) ಚಲಿಸುತ್ತಿರುವ ಆಟೋದಲ್ಲಿ ಕುಕ್ಕರ್‌ ಸ್ಫೋಟ ಪ್ರಕರಣ (Cooker Blast Case) ದೇಶದಲ್ಲಿ ಚರ್ಚೆಯಾಗುತ್ತಿದೆ. ಇದೇ ರೀತಿ, ದೇಶದಲ್ಲಿ ಹಲವು ಉಗ್ರರ ದಾಳಿ (Terror Case) ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಸೌದಿ ಅರೇಬಿಯಾದಲ್ಲಿ (Saudi Arabia) ಇಂತಹ ಉಗ್ರರ ದಾಳಿ ಪ್ರಕರಣಗಳ ವರದಿಯನ್ನು ನೀವು ಕೇಳುವುದು ಅಪರೂಪವೇ ಸರಿ. ಇದೇಕೆ ಹೀಗೆ ಅಂತೀರಾ..? ಅದಕ್ಕೆ ಕಾರಣ, ಅಲ್ಲಿಯ ಕಾನೂನು. ಯಾವುದೇ ದೇಶದಲ್ಲಿ ಕಾಯ್ದೆ - ಕಾನೂನು ಹೆಚ್ಚು ಪ್ರಬಲವಾದಷ್ಟು ಅಲ್ಲಿನ ಕ್ರೈಂ ರೇಟ್‌ (Crime Rate) ಕೂಡ ಕಡಿಮೆ ಇರುತ್ತದೆ. ಅದೇ ರೀತಿ, ಸೌದಿ ಅರೇಬಿಯಾ ಇಸ್ಲಾಮಿಕ್‌‍ ಷರಿಯಾ ಕಾನೂನು (Sharia Law) ಆದರಿಸಿದಂತಹ ರಾಷ್ಟ್ರ. 

ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ 10 ದಿನದಲ್ಲಿ 12 ಜನರಿಗೆ ಶಿರಚ್ಛೇದ ಮಾಡುವ ಮೂಲಕ ಮರಣದಂಡನೆ ವಿಧಿಸಲಾಗಿದೆ. ಅಂದ್ರೆ ಕತ್ತಿಯಲ್ಲಿ ಅವರ ತಲೆಯನ್ನೇ ಕಡಿಯಲಾಗಿದೆ. ಅದೂ ಮಾದಕ ಅಪರಾಧಕ್ಕೆ. ಇದೇ ರೀತಿ, ಉಗ್ರರಿಗೂ ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತದೆ. 

ಇದನ್ನು ಓದಿ: Drug Offences: 10 ದಿನಗಳಲ್ಲಿ 12 ಅಪರಾಧಿಗಳ ತಲೆ ಕಡಿದ ಸೌದಿ ಅರೇಬಿಯಾ..!

ಮರಣದಂಡನೆ ಆರೋಪಿಗೆ ನೀಡುವ ಅತ್ಯುನ್ನತ ಶಿಕ್ಷೆ. ಭಾರತದಲ್ಲಂತೂ ಅಪರೂಪದ ಪ್ರಕಣಗಳಲ್ಲಿ ಮಾತ್ರ ಈ ರೀತಿ ಶಿಕ್ಷೆ ನೀಡಲಾಗುತ್ತದೆ. ಅದೂ, ಈ ಶಿಕ್ಷೆಯಾಗೋಕೆ ಹಲವು ವರ್ಷಗಳೇ ಬೇಕು. ಹಾಗಾದ್ರೆ, ಸೌದಿ ಕಾನೂನು ಹಾಗಿಲ್ಲ. ಹಾಗಾದ್ರೆ, ನಮ್ಮ ಕಾನೂನಿಗೂ ಅಲ್ಲಿನ ಕಾನೂನಿಗೂ ಎಷ್ಟು ವ್ಯತ್ಯಾಸ ಗೊತ್ತಾ..? ಮುಂದೆ ಓದಿ..

ಸೌದಿ ಅರೇಬಿಯಾ ಮರಣದಂಡನೆಯ ವಿಧಗಳು
ಸೌದಿ ಅರೇಬಿಯಾದಲ್ಲಿ ಷರಿಯಾ ಕಾನೂನಿನ ಅಡಿಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸುತ್ತದೆ. ಈ ಶಿಕ್ಷೆಯಲ್ಲೂ 3 ವಿಧಗಳಿವೆ. ಈ ಪೈಕಿ,

  • ಖಡ್ಗದಂತಹ ಹರಿತ ಆಯುಧದಿಂದ ಶಿರಚ್ಛೇದ
  • ನೇಣುಗಂಬಕ್ಕೆ ಏರಿಸೋದು
  • ಗುಂಡು ಹಾರಿಸುವ ಮೂಲಕ ಶಿಕ್ಷೆ ನೀಡಲಾಗುತ್ತದೆ.

ಇದನ್ನೂ ಓದಿ: Modi ಅವಧಿಯಲ್ಲಿ ಉಗ್ರ ದಾಳಿ ಇಳಿಕೆ: RTI ಮಾಹಿತಿ

ಅಂದಹಾಗೆ, ಸೌದಿಯ ಈ ಗಲ್ಲು ಶಿಕ್ಷೆಯ ಪ್ರಕ್ರಿಯೆ ಹೇಗಿರುತ್ತದೆ ಗೊತ್ತಾ..?

  • ಮರಣದಂಡನೆಗೆ ಗುರಿಯಾದ ಅಪರಾಧಿಯ ಆರೋಗ್ಯ ಪರೀಕ್ಷೆಯನ್ನು ಮೊದಲು ವೈದ್ಯರು ಮಾಡುತ್ತಾರೆ
  • ನಂತರ ಆತನನ್ನು ಗಲ್ಲಿಗೇರಿಸಬೇಕಾದ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ
  • ಗಲ್ಲಿಗೇರಬೇಕಾದ ಅಪರಾಧಿ ಆ ಸ್ಥಳದಲ್ಲಿ ಮೊಣಕಾಲೂರಿ ಕುಳಿತುಕೊಳ್ಳುತ್ತಾನೆ/ಳೆ.
  • ಜೈಲಿನ ಆಡಳಿತ ಅಧಿಕಾರಿ ಆ ಅಪರಾಧಿ ಮಾಡಿದ ತಪ್ಪನ್ನು ಸಾರ್ವಜನಿಕವಾಗಿ ಹೇಳುತ್ತಾನೆ
  • ಸುಲ್ತಾನ್‌ ಎಂದು ಕರೆಯುವ ಮರಣದಂಡನೆಕಾರ ಹರಿತ ಆಯುಧದಿಂದ ಶಿರಚ್ಛೇದ ಮಾಡುತ್ತಾನೆ

ಸಿಕ್ಕಿ ಬೀಳುವ ಉಗ್ರರಿಗೆ ಗಲ್ಲು ಕಾಯಂ..!
ಇಸ್ರೇಲಿ ರಕ್ಷಣಾ ತಂತ್ರಜ್ಞಾನ ಅಳವಡಿಸಿಕೊಡಿರುವ ಸೌದಿ ಅರೇಬಿಯಾ, ತನ್ನ ದೇಶದ ಯಾವುದೇ ಜಾಗದಲ್ಲಿ ಒಂದು ಸಣ್ಣ ಸ್ಫೋಟ ಅಥವಾ ಸಂಚನ್ನೂ ಸಹಿಸಿಕೊಳ್ಳದಂತಹ ರಾಷ್ಟ್ರವಾಗಿದೆ. ಈ ಹಿನ್ನೆಲೆ ಭಯೋತ್ಪಾದನಾ ಸಂಚಿನ ಪ್ರಕರಣಗಳು ಇಲ್ಲಿ ಅಪರೂಪಕ್ಕೆ ದಾಖಲಾಗುತ್ತವೆ. ಇಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ. ಕಳೆದ 2 ವರ್ಷಗಳಲ್ಲಿ 50ಕ್ಕೂ ಹೆಚ್ಚು ಉಗ್ರರಿಗೆ ಈ ಶಿಕ್ಷೆ ನೀಡಲಾಗಿದೆ. ಈ ಹಿನ್ನೆಲೆ ಇರಾಕ್‌, ಪಾಕಿಸ್ತಾನ, ಅಫ್ಗಾನಿಸ್ತಾನ ಸೊಮಾಲಿಯಾದಂತಹ ಉಗ್ರರಿಗೆ ಕುಖ್ಯಾತವಾದ ದೇಶದ ನಾಗರಿಕರು ಸಹ ಸೌದಿ ಅರೇಬಿಯಾದಲ್ಲಿ ಅಲ್ಲಿನ ಕಾನೂನಿಗೆ ತಲೆಬಾಗುತ್ತಾರೆ. 

ಇದನ್ನೂ ಓದಿ: Pulwama Operation ಪುಲ್ವಾಮಾದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ,JeM ಉಗ್ರ ಸಂಘಟನೆಯ ನಾಲ್ವರ ಸೆರೆ!

ಸೌದಿಯಲ್ಲಿ ಗಲ್ಲು ಶಿಕ್ಷೆಗೆ ಒಳಪಟ್ಟವರಿಗೆ ಭಾರತದಲ್ಲಿ ಯಾವ ಶಿಕ್ಷೆ..?
ಸೌದಿ ಅರೇಬಿಯಾದಲ್ಲಿ ಮಾದಕ ವ್ಯಸನ ಹಾಗೂ ಕಳ್ಳಸಾಗಣೆ ಗಂಭೀರ ಅಪರಾಧವಾಗಿದೆ. 2 ಗ್ರಾಂ ಹೆರಾಯಿನ್ ಹೊಂದಿ ಸಿಕ್ಕಿಬಿದ್ದರೂ ಗಲ್ಲು ಶಿಕ್ಷೆ ಕಾಯಂ ಆಗಿ ನೀಡಲಾಗುತ್ತದೆ. ಆದರೆ, ಭಾರತ ನಿಷೇಧಿತ ಮಾದಕವಸ್ತುಗಳ ಸೇವನೆ, ಮಾರಾಟ ವಿಚಾರದಲ್ಲಿ ಕಾನೂನು ವಿಭಿನ್ನವಾಗಿದೆ. ಇಲ್ಲಿ ಸ್ವಲ್ಪ ಪ್ರಮಾಣದ ಹೆರಾಯಿನ್ ಅಥವಾ ಅಫೀಮು ಕಂಡುಬಂದರೆ, ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ವರೆಗೆ ದಂಡ ವಿಧಿಸಬಹುದು. ಅದು ನಿಷೇಧಿತ ಡ್ರಗ್ಸ್‌ ಆಗಿದ್ದರೆ, ಅಪರಾಧಿಗೆ 10 - 20 ವರ್ಷ ಜೈಲು ಶಿಕ್ಷೆಯಾಗಬಹುದು. ಆದರೆ, ಡ್ರಗ್ಸ್ ಅಪರಾಧಿಗೆ ಈವರೆಗೆ ಮರಣದಂಡನೆ ವಿಧಿಸಿಲ್ಲ. ಏಕೆಂದರೆ, ಗಲ್ಲು ಶಿಕ್ಷೆಯ ಅವಕಾಶವೂ ಇಲ್ಲ. 

Follow Us:
Download App:
  • android
  • ios