ಕೊಪ್ಪಳದ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ದುರ್ಮರಣ
ಕುಷ್ಟಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕೊಪ್ಪಳ (ಜೂ.13): ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಕಂಟೇನರ್‌ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಭೀಕರ ಅಪಘಾತ ಘಟನೆಗಳು ವರದಿಯಾಗುತ್ತಲೇ ಇವೆ. ಇದರಲ್ಲಿ ಕಾರು ಅಪಘಾತಗಳ ಪೈಕಿ ಮುಂದಿನಿಂದ ಮುಖಾಮುಖಿ ಡಿಕ್ಕಿ ಹೊಡೆದ ಪ್ರಕರಣಕ್ಕಿಂತ ಲಾರಿ ಹಿಂಬದಿಗೆ ಕಾರುಗಳು ಬಂದು ಡಿಕ್ಕಿ ಹೊಡೆಯುವ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತಿವೆ. ಹೀಗೆ ಅಪಘಾತಗೊಂದ ಕಾರಿನಲ್ಲಿನ ಬಹುತೇಕ ಪ್ರಯಾಣಿಕರು ದುರಂತವಾಗಿ ಸಾವಿಗೀಡಾಗುತ್ತಿದ್ದಾರೆ. ಇದೇ ಮಾದರಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿಯೂ ಕೂಡ ಲಾರಿ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ.
Bengaluru: ಅತ್ತೆಯೊಂದಿಗೆ ಜಗಳವಾಡ್ತಿದ್ದ ಅಮ್ಮನನ್ನೇ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ಶವ ತಂದ ಮಗಳು
ಕಂಟೇನರ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರ ಸಾವನ್ನಪ್ಪಿದ್ದಾರೆ. ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಮೃತರು ಮೂದ್ದೇಬಿಹಾಳ ಮೂಲದವರಾಗಿದ್ದಾರೆ. ಪ್ರವೀಣ್ ಕುಮಾರ್ ಭೋಜಪ್ಪ (27), ಸುರೇಶ್ ಈರಸಂಗಪ್ಪ ಹಂಡರಗಲ್ (43) ಹಾಗೂ ಗೌರಮ್ಮ ಹನುಮಗೌಡ ಕನ್ನೂರು (60) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಮೃತ ದೇಹಗಳನ್ನ ಕುಷ್ಟಗಿ ತಾಲೂಕು ಆಸ್ಪತ್ರೆಗರ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕುಷ್ಟಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ನಿಂತ ಲಾರಿಗೆ ಬೈಕ್ ಗುದ್ದಿ ತಾಯಿ- ಮಗ ಸಾವು: ಕೊಪ್ಪಳ ತಾಲೂಕಿನ ಮಂಗಳಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಿನ್ನೆ ರಾತ್ರಿ ವೇಳೆ (ಸೋಮವಾರ ರಾತ್ರಿ) ನಿಂತ ಲಾರಿ ಹಿಂಬದಿಗೆ ಬೈಕ್ ಡಿಕ್ಕಿಯಾಗಿ ತಾಯಿ- ಮಗ ದುರಂತ ಸಾವಿಗೀಡಾಗಿದ್ದರು. ಈ ಘಟನೆಯಿಂದ ಜನರು ಬೆಚ್ಚಿ ಬಿದ್ದಿದ್ದು, ಇದರ ನೆನಪು ಮಾಸುವ ಮುನ್ನವೇ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಇನ್ನು ಮಂಗಳಾಪುರದ ಅಪಘಾತ ಘಟನೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ತಾಯಿ ಮಗ ಇಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದರು. ಮೃತರನ್ನು ಪುಟ್ಟರಾಜ ವಸ್ತ್ರದ ಹಾಗೂ ತಾಯಿ ಗಂಗಮ್ಮ ಎಂದು ಗುರುತಿಸಲಾಗಿದೆ. ಇವರು ಗಜೇಂದ್ರಗಡ ಮೂಲದವರಾಗಿದ್ದು, ಸೋಮವಾರ ರಾತ್ರಿ ಗಜೇಂದ್ರಗಡದಿಂದ ಹೊಸಪೇಟೆಗೆ ಹೊರಟಿದ್ದರು. ಮಾರ್ಗದ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಇನ್ನು ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹಗಳನ್ನು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಗೋವಾ ಟ್ರಿಪ್ ಮುಗಿಸಿ ಬರ್ತಿದ್ದ ಕಾರು ಅಪಘಾತ: ಬೆಂಗಳೂರಿನ 2 ತಿಂಗಳ ಮಗು ಸೇರಿ ಮೂವರ ಸಾವು
ಲಾರಿ ಚಾಲಕ ನಾಪತ್ತೆ ಪೋಷಕರಲ್ಲಿ ಆತಂಕ: ಚಿತ್ರದುರ್ಗ: ಕುಡಿದು ಲಾರಿ ಚಾಲನೆ ಮಾಡುತ್ತಿದ್ದ ಲಾರಿ ಚಾಲಕನನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ಪೊಲೀಸರು ಲಾರಿಯನ್ನು ಜಪ್ತಿ ಮಾಡಿ ಜೂ.4ರ ರಾತ್ರಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದರು. ದಂಡ ಕಟ್ಟಲು ಹಣವಿಲ್ಲದೆ ಚಾಲಕ ರಾತ್ರಿಯಿಡೀ ಲಾರಿಯಲ್ಲಿದ್ದನು. ಜೂ.5ರ ಬೆಳಗ್ಗೆ 2 ಸಲ ಠಾಣೆಯೊಳಗೆ ಬಂದಿದ್ದನು. ಆದರೆ, ಬೆಳಗ್ಗೆ 9ಗಂಟೆಗೆ ತಿಂಡಿ ಸೇವನೆಗೆಂದು ಹೋದ ಚಾಲಕ ನಾಪತ್ತೆಯಾಗಿದ್ದಾನೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಲಾರಿ ಚಾಲಕ ಕೆ.ಬಿ.ಬಸವಂತಕುಮಾರ್(36) ನಾಪತ್ತೆಯಾಗಿದ್ದರಿಂದ ಚಾಲಕನ ಪೋಷಕರಲ್ಲಿ ಆತಂಕ ಎದುರಾಗಿದೆ. ಬಸಂತ್‌ಕುಮಾರ್ ಕಾಣೆಯಾದ ಬಗ್ಗೆ ಅವರ ಪೋಷಕರು ಹೊಳಲ್ಕೆರೆ ಪೊಲೀಸ್ ಠಾಣೆ ಹಾಗೂ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ನಾಪತ್ತೆಯಾದ ಚಾಲಕ ಬಸವಂತಕುಮಾರ್ ಪತ್ತೆಗೆ ಆಗ್ರಹಿಸಿದ್ದರು. ಲಾರಿ ಚಾಲಕ ನಾಪತ್ತೆಗೆ ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಕಿಡಿಕಾರಿದ್ದರು.
ತಿಂಡಿ ಸೇವನೆಗೆಂದು ಹೋದವ ಕಾಣೆಯಾದ: ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ಲಾರಿ ವಶಕ್ಕೆ ಪಡೆದಾಗ ಚಾಲಕ ದಂಡ ಕಟ್ಟಿ ಲಾರಿ ಬಿಡಿಸಿಕೊಂಡು ಹೋಗಬೇಕಿತ್ತು. ಆದರೆ, ಜೂ. 5ರಂದು ಬೆಳಗ್ಗೆ ಲಾರಿ ಮಾಲೀಕ ಬಂದು ದಂಡ ಭರಿಸಿದ್ದಾರೆ. ಜೂ.5ರ ಬೆಳಗ್ಗೆಯೂ ಚಾಲಕ ಬಸವಂತಕುಮಾರ್ ಠಾಣೆಗೆ ಬಂದಿದ್ದರು. ತಿಂಡಿ ಸೇವನೆಗೆಂದು ಹೋದ ಲಾರಿ ಚಾಲಕ ಮತ್ತೆ ಬಂದಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಭರವಸೆ ನಿಡಿದ್ದಾರೆ.