Asianet Suvarna News Asianet Suvarna News

Bengaluru: ಅತ್ತೆಯೊಂದಿಗೆ ಜಗಳವಾಡ್ತಿದ್ದ ಅಮ್ಮನನ್ನೇ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ಶವ ತಂದ ಮಗಳು

ಪ್ರತಿನಿತ್ಯ ಅತ್ತೆಯೊಂದಿಗೆ ಜಗಳ ಮಾಡುತ್ತಿದ್ದ ಹೆತ್ತ ತಾಯಿಯನ್ನೇ ಕೊಲೆಗೈದ ಮಗಳು, ತಾಯಿ ಶವವನ್ನು ಸೂಟ್‌ಕೇಸ್‌ನಲ್ಲಿ ಪೊಲೀಸ್‌ ಠಾಣೆಗೆ ತಂದಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

Bengaluru daughter murdered her mother and brought dead body to police station sat
Author
First Published Jun 13, 2023, 12:10 PM IST

ಬೆಂಗಳೂರು (ಜೂ.13): ಅಸ್ಸಾಂ ಮೂಲದ ವ್ಯಕ್ತಿ, ಪಶ್ಚಿಮ ಬಂಗಾಳ ಮೂಲದ ಮಹಿಳೆ ಮದುವೆಯಾಗಿ ಬೆಂಗಳೂರಿನಲ್ಲಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಆದರೆ, ಹುಡುಗಿಯ ತಂದೆ ತೀರಿಕೊಂಡ ಹಿನ್ನೆಲೆಯಲ್ಲಿ ಅತ್ತೆ ಮನೆಗೆ ತಾಯಿಯನ್ನ ಕರೆದುಕೊಂಡು ಬಂದು ಇರಿಸಿಕೊಂಡಿದ್ದಳು. ಆದರೆ, ಪ್ರತಿನಿತ್ಯ ಅತ್ತೆಯೊಂದಿಗೆ ತಾಯಿ ಜಗಳ ಮಾಡುತ್ತಿದ್ದಳೆಂದು ತಾಯಿಗೆ 20ಕ್ಕೂ ಅಧಿಕ ನಿದ್ರೆ ಮಾತ್ರೆಗಳನ್ನು ಕೊಟ್ಟು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ಪೊಲೀಸ್‌ ಠಾಣೆಗೆ ಆಗಮಿಸಿದ  ಘಟನೆ ಬೆಂಗಳೂರಿನ ಮೈಕೋಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಬೀವಾಪಾಲ್ (70) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮಹಿಳೆಯನ್ನು ಸೋನಾಲಿ (39) ಆಗಿದ್ದಾಳೆ. ಮೂಲತಃ ಕೋಲ್ಕತ್ತಾದ ಸರ್ಕಾರಿ ಇಲಾಖೆಯ ಕ್ಲರ್ಕ್‌ ಹಾಗೂ ಮೃತ ತಾಯಿಗೆ ಒಬ್ಬಳೇ ಮಗಳಾದ ಸೋನಾಲಿ ಫಿಸಿಯೋಥೆರಫಿಸ್ಟ್‌ ಆಗಿದ್ದಳು. ಕುಟುಂಬದವರ ನಿಶ್ಚಯದಂತೆ ಅಸ್ಸಾಂ ಮೂಲದ ಸುಬ್ರತ್‌ ಸೇನ್‌ ಎಂಬ ವ್ಯಕ್ತಿಯನ್ನು ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಇವರು ಬೆಂಗಳೂರಿನ ಬಿಳೇಕಹಳ್ಳಿಯಲ್ಲಿ ಎಸ್‌ಎಸ್‌ಆರ್‌ ಗ್ರೀನ್‌ ಅಪಾರ್ಟ್‌ಮೆಂಟ್‌ನಲ್ಲಿ ಸ್ವಂತ ಫ್ಲ್ಯಾಟ್‌ ಹೊಂದಿದ್ದು, ಇದರಲ್ಲಿ ಅತ್ತೆ-ಮಾವ,  ಗಂಡ-ಹೆಂಡತಿ ಹಾಗೂ ಮಗ ಸುಖವಾಗಿ ಸಂಸಾರ ಸಾಗುತ್ತಿತ್ತು.

Bengaluru: ಮದ್ವೆಗೆ ಮುಂಚೆ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಜೋಡಿ ದಾರುಣ ಸಾವು

ಅಪ್ಪ ಸತ್ತರೆಂದು ಅಮ್ಮನನ್ನು ಕರೆತಂದಿದ್ದೇ ತಪ್ಪಾಯ್ತು: ಕೋಲ್ಕತ್ತಾದಲ್ಲಿ ಕ್ಲರ್ಕ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಸೋನಾಲಿ ತಂದೆ 2018ರಲ್ಲಿ ವಯೋಸಹಜವಾಗಿ ತೀರಿಕೊಂಡ ಹಿನ್ನೆಲೆಯಲ್ಲಿ ವೃದ್ಧ ಒಬ್ಬಂಟಿ ತಾಯಿ ಹಾಗೂ ತಮ್ಮನನ್ನು ತನ್ನ ಬೆಂಗಳೂರಿನ ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದಳು. ಆದರೆ, ಇಲ್ಲಿಂದಲೇ ಸಂಸಾರದಲ್ಲಿ ದೊಡ್ಡ ಬಿರುಗಾಳಿಯೇ ಆರಂಭವಾಗಿತ್ತು. ಇಲ್ಲಿ ಅತ್ತೆ- ಸೊಸೆ ಚೆನ್ನಾಗಿದ್ದರೂ, ಅತ್ತೆ ಹಾಗೂ ಅಮ್ಮನ ನಡುವೆ ನಿರಂತರವಾಗಿ ಜಗಳ ನಡೆಯುತ್ತಲೇ ಬಂದಿತ್ತು. ಇದರಿಂದ ತೀವ್ರ ಮನೆಯ ಎಲ್ಲ ಸದಸ್ಯರೂ ಕೂಡ ತೀವ್ರವಾಗಿ ರೋಸಿ ಹೋಗಿದ್ದರು. ಮನೆಯಲ್ಲಿ ಅತ್ತೆ- ಅಮ್ಮನ ನಡುವೆ ನಡೆಯುತ್ತಿದ್ದ ಜಗಳದ ಕಾರಣದಿಂದ ಫಿಸಿಯೋಥೆರಪಿಸ್ಟ್‌ ಕೆಲಸ ಮಾಡುತ್ತಿದ್ದ ಸೋನಾಲಿ ಕಳೆದ ಎರಡು ವರ್ಷಗಳ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಇದ್ದಳು.

ಮೊಮ್ಮಗನಿಗೆ ಬಿದ್ಧಿ ಹೇಳಿದ್ದಕ್ಕೆ ನಡೆಯಿತು ಕೊಲೆ: ಕಳೆದ ಎರಡು ದಿನಗಳ ಹಿಂದೆ ಸೋನಾಲಿಯ ಪುತ್ರ ಯಾವುದೋ ಕಾರಣಕ್ಕೆ ಕೀಟಲೆ ಮಾಡಿದಾಗ ಸೋನಾಲಿ ತಾಯಿ ಬೀವಾಪಾಲ್‌ ಮೊಮ್ಮಗನಿಗೆ ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅವರ ಅತ್ತೆ ನಿಮ್ಮ ತಾಯಿಗೆ ಬುದ್ಧಿ ಹೇಳಿ ಮಕ್ಕಳಿಗೆ ಕೆಟ್ಟ ರೀತಿಯಲ್ಲಿ ಬೈಯುವುದನ್ನು ನಿಯಂತ್ರಣ ಮಾಡುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಮನನೊಂದು ತಾಯಿಗೆ ಬುದ್ಧಿ ಹೇಳಿದ್ದಾಳೆ. ಮೊಮ್ಮಗನಿಗೆ ಬುದ್ಧಿ ಹೇಳುವ ಅಧಿಕಾರವೂ ತನಗಿಲ್ಲವೇ ಎಂದು ತಾಯಿ ಗೋಳಾಡಿದ್ದಾಳೆ. ಇದರಿಂದ ನಾನು ಬದುಕುವುದಿಲ್ಲ ನನ್ನನ್ನು ಸಾಯಿಸಿಬಿಡು ಎಂದು ತಾಯಿ ಮಗಳ ಬಳಿಯೇ ಕೇಳಿಕೊಂಡಿದ್ದಾಳೆ.

ತಾಯಿ ಜಗಳದಿಂದ ಮನೆಯ ನೆಮ್ಮದಿಯೇ ಹಾಳಾಗಿತ್ತು:  ತಾಯಿಯೇ ಮಗಳ ಬಳಿ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದ್ದಳು. ಕೆಲವು ವರ್ಷಗಳ ಹಿಂದೆ ಅಪ್ಪ ತೀರಿಕೊಂಡಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು ನಾನು ಜೈಲಿಗೆ ಹೋಗ್ತೀನಿ ಎಂದು ಮಗಳು ತಾಯಿಗೆ ಹೇಳಿದ್ದಳು. ಕೊಲೆ ಮಾಡುವ ಮುಂಚೆಯೇ ಈ ಬಗ್ಗೆ ತಾಯಿ ಮಗಳು ಮಾತನಾಡಿಕೊಂಡಿದ್ದರು. ಸೋನಾಲಿ ತಾಯಿ ಮತ್ತು ಅತ್ತೆ ಜಗಳದಿಂದ ಬೇಸತ್ತು ಮಾನಸಿಕವಾಗಿ ಕುಗ್ಗಿ ಹೋಗಿ ಈ ಮಾತನ್ನು ಹೇಳಿದ್ದಳು. ಇನ್ನು ಸೋನಾಲಿ ಮಗನಿಗೂ ಕೂಡ ಮಾನಸಿಕ ತೊಂದರೆ ಕಾಡುತಿತ್ತು. ಇತ್ತ ಮಗನ ಚಿಂತೆ ಇನ್ನೋಂದು ಕಡೆ ಇವರಿಬ್ಬರ ಜಗಳದಿಂದ ಬೇಸತ್ತು ಕೊನೆಗೆ ಕೊಲೆ ಮಾಡಲು ತೀರ್ಮಾನಿಸಿದ್ದಾಳೆ. 

ತಾಯಿ ಕೊಂದು ಸೂಟ್ ಕೇಸ್‌ನಲ್ಲಿ ಶವ ತಂದಳು:  ಇನ್ನು ತಾಯಿಗೆ ಸೋಮವಾರ ಬೆಳಿಗ್ಗೆ 7 ಗಂಟೆಗೆ ತಾಯಿಗೆ 20ಕ್ಕೂ ಅಧಿಕ ನಿದ್ರೆ ಮಾತ್ರೆಯನ್ನು ಸೋನಾಲಿ ಕೊಟ್ಟಿದ್ದಾಳೆ. ಈ ಎಲ್ಲ ಮಾತ್ರೆಗಳನ್ನು ನುಂಗಿದ ವೃದ್ಧ ತಾಯಿ ಬೀವಾಪಾಲ್‌ ಬೆಳಗ್ಗೆ 11 ಗಂಟೆಗೆ ವೇಳೆಗೆ ಹೊಟ್ಟೆ ನೋವು ಎಂದು ಚೀರಾಡುತ್ತಿದ್ದಳು. ಇದರಿಂದ ಸುಮ್ಮನೆ ಮನೆಯವರಿಗೆ ತೊಂದರೆ ಆಗುತ್ತದೆಂದು ಆಕೆಯ ಚೀರಾಟ ಯಾರಿಗೂ ಕೇಳಬಾರದೆಂದು ತಾಯಿಯನ್ನು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾಯಿ ಮೃತದೇಹದ ಬಳಿ ಕುಳಿತುಕೊಂಡು ಆಲೋಚನೆ ಮಾಡಿ, ನಂತರ ಕ್ಯಾಬ್‌ ಮಾಡಿಕೊಂಡು ಶವವನ್ನು ಹೊರಗೆ ಸಾಗಿಸಲು ಯತ್ನಿಸಿದ್ದಾಳೆ. ಆದರೆ, ಇದಕ್ಕೆ ಮನಸ್ಸೊಪ್ಪದೇ ಸುಮಾರು 1 ಗಂಟೆ ಬಳಿಕ ಸೂಟ್‌ಕೇಸ್‌ನಲ್ಲಿ ತಾಯಿಯ ಮೃತದೇಹವನ್ನು ಇಟ್ಟುಕೊಂಡು ಮೈಕೋಲೇಔಟ್‌ ಪೊಲೀಸ್‌ ಠಾಣೆಗೆ ಶವವನ್ನು ತಂದಿದ್ದಾಳೆ. 

ಬೆಂಗಳೂರಿನಲ್ಲಿ ಭೀಕರ ಕೊಲೆ: ತಾಯಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ಠಾಣೆಗೆ ತಂದ ಮಗಳು !

ಮೇರೆ ಮಾಕೋ ಮೈನೆ ಮಾರ್ ದಿಯಾ ಅರೆಸ್ಟ್ ಕರೋ: ಬಿಳೇಕಹಳ್ಳಿಯ ಫ್ಲ್ಯಾಟ್‌ನಲ್ಲಿ ಸೊನಾಲಿ, ಆಕೆಯ ತಾಯಿ, ಪತಿ, ಸೊನಾಲಿ ಮಗ, ಅತ್ತೆ ಹಾಗೂ ಸೊನಾಲಿ ಸಹೋದರ ವಾಸವಾಗಿದ್ದರು. ಗಂಡ ಕೆಲಸಕ್ಕೆ ಹೋದಾಗ ಅಮ್ಮನನ್ನು ಕೊಲೆ ಮಾಡಿದರೂ ಮನೆಯಲ್ಲಿ ಯಾರಿಗೂ ವಿಚಾರವನ್ನು ತಿಳಿಸಿಲ್ಲ. ಜೊತೆಗೆ, ತುಂಬು ಕುಟುಂಬದಲ್ಲಿ ಯಾರಿಗೂ ಗೊತ್ತಾಗದಂತೆ ಮೃತದೇಹವನ್ನು ಹೊರತಂದ ಸೊನಾಲಿ ಸೀದಾ ಪೋಲೀಸ್‌ ಠಾಣೆಗೆ ತಾಯಿ ಮೃತದೇಹವನ್ನು ತಂದು "ಮೇರೆ ಮಾಕೋ ಮೈನೆ ಮಾರ್ ದಿಯಾ ಅರೆಸ್ಟ್ ಕರೋ" ಎಂದು ಪೊಲೀಸರಿಗೆ ಹೇಳಿದ್ದಾಳೆ. ಇದರಿಂದ ಶಾಕ್‌ ಆದ ಪೊಲೀಸರು ಸೂಟ್‌ಕೇಸ್‌ ಕೆಳಗಿಟ್ಟು ತೆಗೆದು ನೋಡಿದಾಗ ಅದರಲ್ಲಿ ವೃದ್ಧೆಯ ಶವವಿತ್ತು. ಇದನ್ನು ನೋಡಿ ದಂಗಾದ ಪೊಲೀಸರು ಸೋನಾಲಿಯ ಗಂಡನಿಗೆ ಕರೆ ಮಾಡಿ ಪೊಲೀಸ್‌ ಠಾಣೆಗೆ ಕರೆಸಿಕೊಂಡಿದ್ದಾರೆ. ಈಕೆಯ ಕೃತ್ಯದಿಂದ ಗಂಡನಿಗೂ ಶಾಕ್‌ ಆಗಿದೆ.

ಸೊನಾಲಿಯಲ್ಲಿ ವಶಕ್ಕೆ ಪಡೆದ ಪೊಲೀಸರು: ಈ ಘಟನೆಯಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಕೊಲೆ ಆರೋಪಿ ಸೋನಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದಿನ ಬೆಳಗಾದರೂ ಯಾವುದನ್ನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದ ಸೋನಾಲಿ ಇಂದು ಬೆಳಗ್ಗೆ ತನ್ನ ತಾಯಿಗೆ ಮುಕ್ತಿ ಕೊಡಿಸಿದ್ದೇನೆ. ನನ್ನನ್ನು ಬಂಧಿಸಿ ಎಂದು ಹೇಳಿದ್ದಾಳೆ. ಇಂದು ಬೆಳಗ್ಗೆ ಸೋನಾಲಿಯಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಒಟ್ಟಾರೆ, ತುಂಬು ಸಂಸಾರದಲ್ಲಿ ಅತ್ತೆ- ಅಮ್ಮನ ಜಗಳದಿಂದ ನೆಮ್ಮದಿ ಹೋಗಿದ್ದು, ಇದು ಕೊಲೆಯಾಗುವ ಮಟ್ಟಕ್ಕೆ ವಿಕೋಪಕ್ಕೆ ಹೋಗಿದ್ದು ದುರಂತವಾಗಿದೆ. 

Follow Us:
Download App:
  • android
  • ios