ಗೋವಾ ಟ್ರಿಪ್ ಮುಗಿಸಿ ಬರ್ತಿದ್ದ ಕಾರು ಅಪಘಾತ: ಬೆಂಗಳೂರಿನ 2 ತಿಂಗಳ ಮಗು ಸೇರಿ ಮೂವರ ಸಾವು
ಗೋವಾಕ್ಕೆ ಪ್ರವಾಸ ತೆರಳಿ ವಾಪಸ್ ಬರುತ್ತಿದ್ದ ಬೆಂಗಳೂರಿನ ಕುಟುಂಬದ ಕಾರು ಚಿತ್ರದುರ್ಗದ ಬಳಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, 2 ತಿಂಗಳ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.12): ಕುಟುಂಬದವರೆಲ್ಲ ಶನಿವಾರ ಮತ್ತು ಭಾನುವಾರ ರಜೆಯ ಹಿನ್ನೆಲೆಯಲ್ಲಿ ಫಾರ್ಚೂನರ್ ಕಾರಿನಲ್ಲಿ ಗೋವಾಕ್ಕೆ ಪ್ರವಾಸ ತೆರಳಿ ವಾಪಸ್ ಬರುತ್ತಿದ್ದ ಬೆಂಗಳೂರಿನ ಕುಟುಂಬದ ಕಾರು ಚಿತ್ರದುರ್ಗದ ಬಳಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, 2 ತಿಂಗಳ ಮಗು ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಎರಡು ದಿನ ಕಂಟಿನ್ಯೂ ರಜೆ ಇದಿದ್ರಿಂದ ಪ್ರವಾಸಕ್ಕೆ ತೆರಳಿದ್ದ ಕುಟುಂಬಕ್ಕೆ ಜವರಾಯ ಇನ್ನಿಲ್ಲದ ನೋವು ಕೊಟ್ಟಿದ್ದಾನೆ. ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನಲ್ಲಿ ನಡೆದಿದೆ. ಹೀಗೆ ಲಾರಿಗೆ ಡಿಕ್ಕಿ ಹೊಡೆದು ಅಪ್ಪಳಿಸಿರೋ ಬೆಂಗಳೂರು ಮೂಲದ ಕಾರು. ಅಪಘಾತದಲ್ಲಿ ರಸ್ತೆ ಮೇಲೆಯೇ ಮೃತರಾಗಿ ಬಿದ್ದಿರುವ ಜಾಕೀರ್ ಅಹ್ಮದ್, ತಬ್ಸೂಮ್ ಮತ್ತು ಗಂಭೀರ ಗಾಯಗೊಂಡಿರುವ ಸಂಬಂಧಿಕರು. ಈ ಭೀಕರ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗೊಲ್ಲರಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ಕಾರು ಅಪಘಾತ: ಚಾಲಕ ಸಾವು, ಮೂವರ ಸ್ಥಿತಿ ಗಂಭೀರ
ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತ: ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನ ಸುಮಾರು 8 ಮಂದಿ ಸಂಬಂಧಿಕರು ಹಾಗೂ ಒಂದು ಮುದ್ದಾದ ಮಗು ಸೇರಿ ಗೋವಾ ಟ್ರಿಪ್‌ಗೆಂದು ಶನಿವಾರ ತೆರಳಿರುತ್ತಾರೆ. ಸತತ ಎರಡು ದಿನಗಳ ರಜೆ ಇರುವ ಕಾರಣ ಪ್ರವಾಸ ಕೈಗೊಂಡಿದ್ದ ಕುಟುಂಬಕ್ಕೆ ಜವರಾಯ ಬಿಗ್ ಶಾಕ್ ಕೊಟ್ಟಿದ್ದಾನೆ. ಗೋವಾದಿಂದ ವಾಪಸ್ ಬರುವಾಗ ಚಿತ್ರದುರ್ಗ ಜಿಲ್ಲೆಯ ವಿಜಾಪುರ ಗೊಲ್ಲರಹಟ್ಟಿ ಬಳಿ ಚಲಿಸುತ್ತಿದ್ದ ಲಾರಿಗೆ ಬೆಳಗಿನ ಜಾವ ವೇಗವಾಗಿ ಬಂದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಸ್ಥಳದಲ್ಲೇ ಇಬ್ಬರು ಮೃತ ಪಟ್ಟಿದ್ದು, ಎರಡು ತಿಂಗಳು ಪುಟಾಣಿ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತ ಪಟ್ಟಿದೆ.
ನಜ್ಜುಗುಜ್ಜಾದ ಫಾರ್ಚೂನರ್ ಕಾರು: ಈ ಅಪಘಾತಕ್ಕೆ ಸಂಬಂಧಿಸಿದಂತೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ದೇಹಗಳನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿಸಿದ್ದಾರೆ. ಜೊತೆಗೆ, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಬಾಕಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಫಾರ್ಚೂನರ್ ಕಾರಿನ ಮೇಲ್ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತರ ದೇಹಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಧಾರವಾಡ ಬೈಪಾಸ್‌ನಲ್ಲಿ ಭೀಕರ ಅಪಘಾತ, ಬಿಂದುಗೌಡ ಸೇರಿ ಮೂವರ ಸಾವು
ಚಾಲಕನ ನಿದ್ದೆ ಮಂಪರು, ಅತಿವೇಗ ಅಪಘಾತಕ್ಕೆ ಕಾರಣ: ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಮಾತನಾಡಿ, ಕಾರಿನಲ್ಲಿದ್ದ ಎಲ್ಲರೂ ಒಂದೇ ಕುಟುಂಬದವರು. ಗೋವಾದಿಂದ ಟ್ರಿಪ್ ಮುಗಿಸಿ ಬೆಂಗಳೂರಿಗೆ ತೆರಳುವಾಗ ಹೀಗೆ ಘಟನೆ ನಡೆದಿದೆ. ಘಟನೆಗೆ ಕಾರು ಚಾಲಕನ ಅಜಾಗರೂಕತೆಯೇ ಕಾರಣ ಎಂದು ತಿಳಿದು ಬಂದಿದೆ. ರಾತ್ರಿ ಗೋವಾದಿಂದ ಹೊರಟಿರುವ ಕಾರಣ ನಿದ್ದೆ ಸರಿಯಾಗಿ ಆಗಿರಲಿಲ್ಲ. ನಿದ್ದೆಯ ಮಂಪರು ಹಾಗೂ ವೇಗವಾಗಿ ಕಾರು ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಒಟ್ಟಾರೆ ಇತ್ತೀಚೆಗಂತೂ ಕೋಟೆನಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತದೆ. ಸ್ಪೀಡ್ ಲಿಮಿಟ್, ಲೇನ್ ಡಿಸಿಪ್ಲೀನ್ ಕ್ಯಾಮರಾ ಅಳವಡಿಕೆ ಆಗಿದ್ರೂ ಪೊಲೀಸರು ಕೇಸ್ ದಾಖಲಿಸುವಲ್ಲಿ ವಿಫಲವಾಗ್ತಿದ್ದಾರ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ. ಆದ್ದರಿಂದ ಇನ್ನಾದ್ರು ಅಪಘಾತ ತಡೆಗೆ ಪೊಲೀಸರು ಸೂಕ್ರ ಕ್ರಮ ಕೈಗೊಳ್ಳಬೇಕಿದೆ.