ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.
ಬೆಂಗಳೂರು (ಆ.8) : ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.
ಬಿಜ್ಜು ಸೇಲ್ಫ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ತ್ರಿಪುರ ಮೂಲದವನಾಗಿದ್ದು. ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್(Anoop Iyer Congress leaderr) ಮನೆಯಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಂಬಂಧಿಯೊಬ್ಬನನ್ನು ಡ್ರಾಪ್ ಮಾಡಿದ ಬಳಿಕ ಯಶವಂತಪುರದಿಂದ ಮಲ್ಲೇಶ್ವರಂನಲ್ಲಿರುವ ಅನೂಪ್ ಅಯ್ಯರ್ ಮನೆಗೆ ಬರುತಿದ್ದ ವೇಳೆ ನಡೆದಿರುವ ಅಪಘಾತ. ವೇಗವಾಗಿ ಬಂದ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ ಪೊಲೀಸರು. ಸದ್ಯ ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಯಶವಂತಪುರ ಸಾಂಚರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಲಾರಿಯ ರೂಪದಲ್ಲಿ ಬಂದ ಜವರಾಯ, ರಂಗಭೂಮಿ ಕಲಾವಿದ ಇರಕಸಂದ್ರ ಜಗನ್ನಾಥ್ ಸಾವು.
ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಯುವತಿ ಸಾವು
ರಾಮನಗರ: ಬೆಳ್ಳಬೆಳ್ಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲಾಧಿಕಾರಿ ಮುಂಭಾಗ ನಡೆದಿದೆ.
ಸಿದ್ದಿಕ್ ಅಂಜುಮ್ (22) ಮೃತಳು. ಬೆಂಗಳೂರಿನಿಂದ ಮೈಸೂರು ಕಡೆ ಹೋಗ್ತಿದ್ದ ಬೈಕ್ ಸವಾರರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ. ಡಿಕ್ಕಿ ಹೊಡೆದ ರಭಸಕ್ಕೆ ಯುವತಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವು. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಮನಗರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೆಚ್ಚಿದ ಅಪಘಾತ: ಬೆಂಗಳೂರು- ತುಮಕೂರು ಹೆದ್ದಾರಿ ಬ್ಲಾಕ್ ಸ್ಪಾಟ್‌ಗಳಿಗೆ ಅಲೋಕ್ ಕುಮಾರ್ ಭೇಟಿ
ಪಬ್ಜಿ ವ್ಯಾಮೋಹಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಕಲಬುರಗಿ: ಆನ್‌ಲೈನ್ ಪಬ್ಜಿ ಗೇಮ್‌ನಲ್ಲಿ ಅಪಾರ ಹಣ ಕಳೆದುಕೊಂಡು ನಿರಾಶೆಗೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ (20) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ದೇವಿ ನಗರದಲ್ಲಿ ನಡೆದಿದೆ. ಪ್ರವೀಣ ಪಾಟೀಲ್ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ. ಪಬ್ಜಿ ಗೇಮ್‌ನಲ್ಲಿ ಹಣ ಹಾಕಿದ್ದಾನೆಂದು ಹೇಳಲಾಗುತ್ತಿದೆ. ಚಿತ್ತಾಪುರದ ಸೂಲಹಳ್ಳಿ ನಿವಾಸಿ ಪ್ರವೀಣ ಆರ್ಟಿಫಿಸಿಯಲ್ ಇಂಯಲಿಜೆನ್ಸ್ ಕೋರ್ಸ್ ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಹೊತ್ತಲ್ಲಿ ಪ್ರವೀಣ ನೇಣಿಗೆ ಶರಣಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
