ತುಮಕೂರು ಗಡಿಯಲ್ಲಿ ಕನ್ನಡಿಗರ ಮೇಲೆ ಆಂಧ್ರ ಪೊಲೀಸರ ದಬ್ಬಾಳಿಕೆ!
ಸೀಮಾಂಧ್ರ ಪೊಲೀಸರು ರಾಜ್ಯ ಗಡಿಭಾಗದ ಗ್ರಾಮಗಳ ಅಂಗಡಿಗಳಿಗೆ ನುಗ್ಗಿ ಸುಳ್ಳು ಕೇಸ್ ದಾಖಲಿಸುತ್ತೇವೆಂದು ಬೆದರಿಸಿ , ಅಂಗಡಿ ಸಾಮಗ್ರಿಗಳ ಜತೆಗೆ ಹಣ ದೋಚಿಕೊಂಡು ಹೋಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು (ಜೂ.15) : ಸೀಮಾಂಧ್ರ ಪೊಲೀಸರು ರಾಜ್ಯ ಗಡಿಭಾಗದ ಗ್ರಾಮಗಳ ಅಂಗಡಿಗಳಿಗೆ ನುಗ್ಗಿ ಸುಳ್ಳು ಕೇಸ್ ದಾಖಲಿಸುತ್ತೇವೆಂದು ಬೆದರಿಸಿ , ಅಂಗಡಿ ಸಾಮಗ್ರಿಗಳ ಜತೆಗೆ ಹಣ ದೋಚಿಕೊಂಡು ಹೋಗುತ್ತಿದ್ದಾರೆ ಎಂದು ಮಿಡಿಗೇಶಿ , ಐ.ಡಿ.ಹಳ್ಳಿ ಹೋಬಳಿಯ ಜನ ಮಿಡಿಗೇಶಿ ಠಾಣೆಗೆ ದೂರು ನೀಡಿದ್ದಾರೆ .
ಜೂನ್12 ರಂದು ಮಿಡಿಗೇಶಿ ಹೋಬಳಿಯ ಅಯ್ಯನಹಳ್ಳಿಗೆ ಮಡಕಶಿರಾ ವೃತ್ತ ನಿರೀಕ್ಷಕ ಶ್ರೀರಾಮುಲು ಮತ್ತು ಮೂವರು ಪೇದೆಗಳು ಆಗಮಿಸಿ ದೌರ್ಜನ್ಯದಿಂದ ವರ್ತಿಸಿದ್ದಲ್ಲದೆ , ಪಾಪೇಗೌಡ ಮತ್ತು ಆತನ ಸಹೋದರ ರಾಜಕುಮಾರ ಅವರ ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ , ಖಾರಾ ಬೂಂದಿ ಮತ್ತು ಚಾಕೋಲೇಟ್ ಡಬ್ಬಿಗಳನ್ನು ವಶಪಡಿಸಿಕೊಂಡು ಇದು ಆಂಧ್ರದ ಗಡಿ ಪ್ರದೇಶವಾಗಿರುವುದರಿಂದ ನೀವು ಕರ್ನಾಟಕ ರಾಜ್ಯದಲ್ಲಿದ್ದರೂ ಇಲ್ಲಿ ಯಾವುದೇ ಉತ್ಪನ್ನ ಮಾರುವಂತಿಲ್ಲ. ಮಾರಾಟ ಮಾಡಿದಲ್ಲಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ ಅಂಗಡಿಯಲ್ಲಿದ್ದ 20 ಸಾವಿರ ರೂಪಾಯಿ ದೋಚಿಕೊಂಡು ಹೋಗಿದ್ದಾರೆ . 4 ವರ್ಷಗಳಿಂದ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.
Davanagere; ಪತಿಯ ಕಿರುಕುಳಕ್ಕೆ ಬೇಸತ್ತು 11 ತಿಂಗಳ ಮಗು ಸಹಿತ ಅಮ್ಮ ಆತ್ಮಹತ್ಯೆ!
ಕರೊನಾ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಹಳಷ್ಟು ಯುವಕರು ಗ್ರಾಮಗಳಿಗೆ ಬಂದು ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ . ಆದರೆ ಮಡಕಶಿರಾ ಪೊಲೀಸರು ಕಿರುಕುಳ ನೀಡಿ ವಹಿವಾಟು ಮಾಡದಂತೆ ತಡೆಯುತ್ತಿದ್ದಾರೆ .
ಗನ್ ತೋರಿಸಿ ಹಣ ವಸೂಲು ಮಾಡಿ ಇಲ್ಲ ಸಲ್ಲದ ಆರೋಪ ಹೊರಿಸಿ ಜೈಲಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದು , ಗಾಂಜಾ , ಬಟ್ಟಿ ಸಾರಾಯಿ , ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿನ ನ್ಯಾಯಾಧೀಶರಿಗೆ ಹೇಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ . ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ರಾಜ್ಯದ ಗಡಿಭಾಗದ ಮಲ್ಲನಾಯಕನಹಳ್ಳಿ , ಲಕ್ಷ್ಮೀಪುರ , ಅಯ್ಯನಹಳ್ಳಿ , ಎಂ.ಗೊಲ್ಲರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಮಿಡಿಗೇಶಿ ಠಾಣಿಗೆ ದೂರು ನೀಡಿದ್ದಾರೆ.
Yadgir; ಕಾರ ಹುಣ್ಣಿಮೆ ಸಡಗರವೋ ಸಡಗರ!
ಭೂಗಳ್ಳರ ಹಾವಳಿಗೆ ರಾತ್ರೋರಾತ್ರಿ ಕರಗುತ್ತಿದೆ ಬೆಟ್ಟಗುಡ್ಡ!: ಕೊರಟಗೆರೆ ತಾಲೂಕಿನಾದ್ಯಾಂತ ಭೂ ಮಾಫಿಯಾಗೆ ರಾತ್ರೋರಾತ್ರಿ ಕರಗುತ್ತೀವೆ ಬೆಟ್ಟಗಳು. ತಾಲೂಕಿನ ಸರಕಾರಿ ಖರಾಬು-ಗೋಮಾಳದ ಜಮೀನಿಗೆ ಭದ್ರತೆಯೇ ಮರೀಚಿಕೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿವರ್ಗ ಮತ್ತು ಸ್ಥಳೀಯ ಗ್ರಾಪಂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷದಿಂದ ಸುಂದರವಾದ ಬೆಟ್ಟಗುಡ್ಡಗಳು ನೆಲಸಮವಾಗುತ್ತಿವೆ.
ಕೊರಟಗೆರೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಣ್ಣಿನ ರಕ್ಷಣೆ ಬೇಕಾದ ಕಾಳಜಿನೇ ಇಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೊರಟಗೆರೆಗೆ ಆಗಮಿಸಿರುವ ಗೋಜಿಗೆ ಹೋಗಲ್ಲ. ಅಧಿಕಾರಿವರ್ಗ ಮತ್ತು ರಾಜಕೀಯ ಧುರೀಣರ ಪರೋಕ್ಷ ಬೆಂಬಲದಿಂದ ತಾಲೂಕಿನ ಬೆಟ್ಟ, ಕೆರೆಕಟ್ಟೆಗಳಿಂದ ಪ್ರತಿನಿತ್ಯ ಸಾವಿರಾರು ಲೋಡುಗಳು ಪರವಾನಗಿ ಇಲ್ಲದೇ ಮಣ್ಣು ಸರಬರಾಜು ಆಗುತ್ತಿದ್ದರೂ ಅಧಿಕಾರಗಳು ಕೈಕಟ್ಟಿಕೊಂಡಿರುವುದು ವಿಪರ್ಯಾಸವೇ ಸರಿ.
ಜೆಸಿಬಿ ಮಾಲೀಕರು ಮಣ್ಣಿನ ಬೆಲೆಯನ್ನು ನಿಗಧಿ ಮಾಡ್ತಾರೇ.. ಟ್ರಾಕ್ಟರ್ ಡ್ರೆತ್ರೖವರ್ ಮಣ್ಣು ಸಾಗಾಣಿಕೆಯ ಜವಾಬ್ದಾರಿ ವಹಿಸ್ತಾರೇ.. ಕೊರಟಗೆರೆ ಪಟ್ಟಣದ ನಾಲ್ಕು ದಿಕ್ಕಿನಲ್ಲಿಯೂ ಸಹ ಶನಿವಾರ, ಭಾನುವಾರ ಬಂದರೆ ಸಾಕು ಬೆಟ್ಟಗುಡ್ಡ, ಕೆರೆಕಟ್ಟೆ, ಗೋಮಾಳದ ಜಮೀನು, ಸರಕಾರಿ ಭೂಮಿ, ಅರಣ್ಯ ಪ್ರದೇಶದ ಸಮೃದ್ದ ಮಣ್ಣಿಗೆ ಇವರೇ ಮಾಲೀಕರಾಗಿ ಪ್ರತಿ ಟ್ರಾಕ್ಟರ್ ಲೋಡು ಮಣ್ಣಿಗೆ 750ರೂ ಮತ್ತು ಲಾರಿ ಲೋಡಿಗೆ 1500ರೂ ನಿಗಧಿ ಮಾಡಿದ್ದಾರೆ.
ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಪಂಯೊಡನೆ ಒಳಒಪ್ಪಂದ ಮಾಡಿಕೊಂಡಿರುವ ಭೂಗಳ್ಳರು ರಾತ್ರೋರಾತ್ರಿ ಕೆರೆ ಮತ್ತು ಬೆಟ್ಟದ ಒಡಲನ್ನು ಬಗೆಯುವ ಘಟನೆ ಯಾರ ಭಯವು ಇಲ್ಲದೇ ಅವ್ಯಾಹತವಾಗಿ ನಡೆಯುತ್ತೀದ್ದಾರೆ. ಪ್ರತಿನಿತ್ಯ ಹತ್ತಾರು ಜೆಸಿಬಿ 30ಕ್ಕೂ ಟ್ರಾಕ್ಟರ್ ಮತ್ತು 10ಕ್ಕೂ ಅಧಿಕ ಟ್ರಾಕ್ಟರ್‌ಗಳಲ್ಲಿ ಮಣ್ಣು ಸಾಗಾಣಿಕೆ ನಡೆಯುತ್ತೀದೆ. ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿ ಕೋಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.