Gold Robbery: ಸಂಜೆ ವೇಳೆ ಮನೆಗೆ ನುಗ್ಗಿ ಚಾಕು ತೋರಿಸಿ ದರೋಡೆ: ಐವರ ಬಂಧನ

*   ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದ್ದ ದರೋಡೆ ಕೃತ್ಯ
*   ಮದ್ಯದಂಗಡಿ ಬಾಗಿಲು ಮುರಿದು ಕಳವಿಗೆ ಯತ್ನ
*   ನಕಲಿ ಇಮೇಲ್‌: ಉಪನ್ಯಾಸಕ ಸೆರೆ

Five Arrested for Robbery Case in Bengaluru grg

ಬೆಂಗಳೂರು(ಡಿ.01):  ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದ್ದ ದರೋಡೆ(Robbery) ಪ್ರಕರಣ ಭೇದಿಸಿರುವ ಪೊಲೀಸರು(Police)ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಣನಕುಂಟೆ ಕ್ರಾಸ್‌ನ ವೆಂಕಟೇಶ್‌(20), ಹಿರಿಯೂರಿನ ಸುನೀಲ್‌(21), ದೊಡ್ಡಕಲ್ಲಸಂದ್ರದ ಮಂಜ ಅಲಿಯಾಸ್‌ ಸೈಕೋ(26), ಶಿವರಾಜ(28) ಹಾಗೂ ಜಗದೀಶ್‌ ರೆಡ್ಡಿ(20) ಬಂಧಿತರು(Arrest). ಇವರಿಂದ ಏಳು ಗ್ರಾಂ ಚಿನ್ನಾಭರಣ, ಮೂರು ಮೊಬೈಲ್‌ ಹಾಗೂ 2,800 ನಗದು ಸೇರಿದಂತೆ ಒಟ್ಟು 77 ಸಾವಿರ ಮೌಲ್ಯದ ಮಾಲುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಬ್ಬಿಣದ ರಾಡು, ಆಟೋ ರಿಕ್ಷಾ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ.26ರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾರಕಾಸ್ತ್ರ ಹಿಡಿದು ಕುಮಾರಸ್ವಾಮಿ ಲೇಔಟ್‌ ಠಾಣೆಯ ಸರಹದ್ದಿನ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು(Miscreants) , ಮನೆಯ ಸದಸ್ಯರಿಗೆ ಚಾಕು ತೋರಿಸಿ ಹೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದರು. ದಾಖಲಾಗಿದ್ದ ದೂರಿನ ಮೇರೆಗೆ ಕುಮಾರಸ್ವಾಮಿ ಲೇಔಟ್‌ ಠಾಣೆ ಇನ್‌ಸ್ಪೆಕ್ಟರ್‌ ಪಿ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು(Accused) ಬಂಧಿಸಲಾಗಿದೆ.

Bengaluru| ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನ ಬರ್ಬರ ಹತ್ಯೆ

ಎಸ್ಸೆಸ್ಸೆಲ್ಸಿ, ಪಿಯುಸಿ ವ್ಯಾಸಂಗ ಮಾಡಿರುವ ಆರೋಪಿಗಳಿಗೆ ಸಮರ್ಪಕ ಉದ್ಯೋಗವಿಲ್ಲ. ಆಟೋ, ಕ್ಯಾಬ್‌ ಚಾಲನೆ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಮದ್ಯ ಸೇರಿದಂತೆ ಹಲವು ಚಟಗಳಿಗೆ ದಾಸರಾಗಿರುವ ಆರೋಪಿಗಳು ಮೋಜು-ಮಸ್ತಿಗೆ ಹಣ ಹೊಂದಿಸಲು ಅಪರಾಧ(Crime) ಕೃತ್ಯಗಳಲ್ಲಿ ತೊಡಗಿದ್ದರು. ಹಣಕ್ಕಾಗಿ ಎಂತಹ ಕೆಲಸ ಮಾಡಲು ಸಿದ್ಧರಾಗಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ದರೋಡೆ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಹೀಗಾಗಿ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಸುಮಾರು ಒಂದು ಸಾವಿರ ಸಿಸಿಟಿವಿ(CCTV) ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಿದ್ದಾರೆ. ಕಡೆಗೆ ಸಿಕ್ಕ ಸಣ್ಣ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಕಲಿ ಇಮೇಲ್‌: ಉಪನ್ಯಾಸಕ ಸೆರೆ

ಮಂಗಳೂರು(Mangaluru): ನಕಲಿ ಇ-ಮೇಲ್‌(Fake E-Mail) ಸೃಷ್ಟಿಸಿ ಅದರ ಮೂಲಕ ಮೆಡಿಕಲ್‌ ಕಾಲೇಜು ನಿರ್ದೇಶಕರಿಗೆ ಪ್ರಿನ್ಸಿಪಾಲ್‌ ಬಗ್ಗೆ ಆರೋಪ ಮಾಡುತ್ತಿದ್ದ ಹಿನ್ನಲೆಯಲ್ಲಿ ಕಾಲೇಜು ಉಪನ್ಯಾಸಕನೊಬ್ಬನನ್ನು ನಗರ ಸೆನ್‌ (Cyber) ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಳಿಯ ರಾಣಿಪುರ ನಿವಾಸಿ, ಉಪನ್ಯಾಸಕ ಡೇವಿಡ್‌ ರಾಕೇಶ್‌ ಡಿಸೋಜ (36) ಪ್ರಕರಣದ ಆರೋಪಿ.

ದೇರಳಕಟ್ಟೆ ಮೆಡಿಕಲ್‌ ಕಾಲೇಜಿನ ಉಪನ್ಯಾಸಕ ನಕಲಿ ಇ-ಮೇಲ್‌ ಐಡಿ ಸೃಷ್ಟಿಸಿ ಪ್ರಿನ್ಸಿಪಾಲ್‌ ಮೇಲೆ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನಾನಾ ವಿಚಾರದಲ್ಲಿ ಆರೋಪ ಹೊರಿಸಿ ಕಾಲೇಜು ನಿರ್ದೇಶಕರಿಗೆ ಇ-ಮೇಲ್‌ ಹಾಕಿದ್ದ. ನಕಲಿ ಇ-ಮೇಲ್‌ ನಕಲಿ ಐಡಿಯಾದ ಕಾರಣ ಆರೋಪಿಯ ಪತ್ತೆ ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಕಾಲೇಜು ಪ್ರಿನ್ಸಿಪಾಲ್‌ ಆರೋಪಿಯನ್ನು ಪತ್ತೆ ಹಚ್ಚುವಂತೆ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಸೆನ್‌ ಪೊಲೀಸರು ತಂತ್ರಾಂಶವನ್ನು ಬಳಸಿಕೊಂಡು ಆರೋಪಿಗೆ ಪತ್ತೆಗೆ ತನಿಖೆ ಆರಂಭಿಸಿದ್ದು, ಕೊನೆಗೂ ಇದರಲ್ಲಿ ಡೇವಿಡ್‌ ಕೈವಾಡವಿರುವುದು ಪತ್ತೆಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ(Court) ಹಾಜರುಪಡಿಸಲಾಗಿದ್ದು, ಒಂದು ದಿನ ನ್ಯಾಯಾಂಗ ಬಂಧನ ವಿಧಿಸಿದೆ.

3 ದಿನ ಹಿಂದೆಯಷ್ಟೇ ಬೇಲ್‌ ಪಡೆದು ರಿಲೀಸ್‌ ಆಗಿದ್ದ ರೌಡಿಶೀಟರ್‌ ಹತ್ಯೆ

ಮದ್ಯದಂಗಡಿ ಬಾಗಿಲು ಮುರಿದು ಕಳವಿಗೆ ಯತ್ನ

ಕೊಟ್ಟಿಗೆಹಾರ: ಬಾರ್‌ವೊಂದರ ರೋಲಿಂಗ್‌ ಶಟರ್‌ ಮುರಿದು ಕಳವಿಗೆ ಯತ್ನಿಸಿರುವ ಘಟನೆ ಬಣಕಲ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಮವಾರ ಬೆಳಗ್ಗಿನ ಜಾವ 3.30ರ ಸುಮಾರಿಗೆ ಬಣಕಲ್‌ ಪಟ್ಟಣದಲ್ಲಿರುವ ಸಂಭ್ರಮ್‌ ಬಾರ್‌ನ ಬೀಗ ಮುರಿದು ಕಳ್ಳರು ಕಳವಿಗೆ ಯತ್ನಿಸಿದ್ದಾರೆ. ಬಾರ್‌ನಲ್ಲಿ ಹಣ ಸಿಗದೇ ಇದ್ದಾಗ ಮದ್ಯವನ್ನು ಮುಟ್ಟದೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಾರ್‌ ಮುಂಬಾಗಿಲ ಬೀಗ ಮುರಿದು ಕಳ್ಳರು ಬಾರ್‌ನಲ್ಲಿ ಕಳವು ಮಾಡಲು ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಬಣಕಲ್‌ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
 

Latest Videos
Follow Us:
Download App:
  • android
  • ios