ಅನೈತಿಕ ಸಂಬಂಧದ ಕಾರಣಕ್ಕೆ ಇಬ್ಬರು ವ್ಯಕ್ತಿಗಳನ್ನು ದಾರುಣವಾಗಿ ಕೊಲೆ ಮಾಡಿದ ಘಟನೆ ತೆಲಂಗಾಣದ ಆದಿಲಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 19ರಹರೆಯದ ರೆಹಮಾನ್‌ ಹಾಗೂ ಮೃತ ಮಹಿಳೆಯನ್ನು 28ರ ವಯಸ್ಸಿನ ಅಶ್ವಿನಿ ಎಂದು ಗುರುತಿಸಲಾಗಿದೆ.

ಹೈದರಾಬಾದ್‌ (ಮೇ.1): ಅದ್ಯಾವ ರೀತಿಯ ಸಂಬಂಧವೇ ಆಗಿರಲಿ, ಅದಕ್ಕೊಂದು ಗಟ್ಟಿಯಾದ ತಳಹದಿ ಇಲ್ಲದೇ ಇದ್ದಲ್ಲಿ ಅದರ ಅಂತ್ಯ ದಾರುಣವಾಗಿಯೇ ಆಗುತ್ತದೆ ಅನ್ನೋದಕ್ಕೆ ಈ ಉದಾಹರಣೆಯೇ ಸಾಕ್ಷಿ. ಪುಟ್ಟ ಸಂಸಾರ, ಇಬ್ಬರು ಮಕ್ಕಳು. ಹಾಗಿದ್ದರೂ ಭಾವನಾತ್ಮಕ ಕಾರಣದಿಂದಾಗಿ ಗಂಡನಿಂದ ಬೇರ್ಪಟ್ಟ ಮಹಿಳೆ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು. ಸಂಸಾರದಲ್ಲಿ ಇಂಥಾ ಕೋಲಾಹಲವಾದಾಗಲಾದರೂ ಸುಮ್ಮನಿರದ ಮಹಿಳೆ, ಇನ್ನೇನು ಮೀಸೆ ಮೂಡುತ್ತಿದ್ದ ಹುಡುಗನ ಜೊತೆ ಅಫೇರ್‌ ಇರಿಸಿಕೊಂಡಿದ್ದಳು. ಇದರ ಬೆನ್ನಲ್ಲಿಯೇ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಅನೈತಿಕ ಸಂಬಂಧದಿಂದ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುಡಿಹತ್ನೂರು ಮಂಡಲದ ಗರಕಂಪೇಟೆ ಪಂಚಾಯಿತಿಯ ಸೀತಗೊಂಡಿ ಗ್ರಾಮದಲ್ಲಿ ಭಾನುವಾರ 28 ವರ್ಷದ ವಿವಾಹಿತ ಮಹಿಳೆ ಮತ್ತು ಆಕೆಯ 19 ವರ್ಷದ ಪ್ರೇಮಿಯ ಶವ ಪತ್ತೆಯಾಗಿದೆ. ಅವರನ್ನು ಆದಿಲಾಬಾದ್ ನಗರದ ನಿವಾಸಿಗಳಾದ ಅಶ್ವಿನಿ ಮತ್ತು ಮೊಹಮ್ಮದ್ ರೆಹಮಾನ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ರೆಹಮಾನ್‌ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಂದಿದ್ದಾರೆ.

ದಂಪತಿ ಶುಕ್ರವಾರದಿಂದ ನಾಪತ್ತೆಯಾಗಿದ್ದು, ಪೊಲೀಸರಿಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಎಂಟು ವರ್ಷದೊಳಗಿನ ಎರಡು ಮಕ್ಕಳ ತಾಯಿ ಅಶ್ವಿನಿ, ರೆಹಮಾನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಂಪತಿ ನಾಪತ್ತೆಯಾದ ದಿನವೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದ ಸಮೀಪ ಅವರ ಸ್ಕೂಟಿ ಕೂಡ ಪತ್ತೆಯಾಗಿದೆ. ಪೊಲೀಸರು ಮೃತದೇಹಗಳನ್ನು ಅದಿಲಾಬಾದ್‌ನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗ್ಳೂರ್‌ ಮುಸ್ಲಿಂ ಹುಡುಗಿ- ಬಳ್ಳಾರಿ ಹಿಂದೂ ಹುಡ್ಗ: ಬೆಂಗ್ಳೂರಲ್ಲಿ ಲವ್‌ ಮಾಡ್ತಾ ಸತ್ತೇ ಹೋದ ಯುವತಿ!

ರಮೇಶ್ ಎಂಬುವವರನ್ನು ಮದುವೆಯಾಗಿ ಇಬ್ಬರು ಮಕ್ಕಳಿರುವ ಮಹಿಳೆ ಕೆಲ ತಿಂಗಳ ಹಿಂದೆ ಪತಿಯಿಂದ ಬೇರ್ಪಟ್ಟು ಆದಿಲಾಬಾದ್ ನಗರದ ಕೆಆರ್‌ಕೆ ನಗರದಲ್ಲಿನ ಪೋಷಕರ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಪಟ್ಟಣದ ಭುಕ್ತರಪುರ ಪ್ರದೇಶದ ನಿವಾಸಿ ರೆಹಮಾನ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ರಮೇಶ್ ಕುಟುಂಬದವರೇ ದಂಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಕೆಲವು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಸಾಲ ತೀರಿಸಲು ವಿಫಲವಾಗಿದ್ದಕ್ಕೆ 11ರ ಬಾಲಕಿಯ ಮದುವೆಯಾದ 40 ವರ್ಷದ ವ್ಯಕ್ತಿ!