ಸಾಲ ತೀರಿಸಲು ವಿಫಲವಾಗಿದ್ದಕ್ಕೆ 11ರ ಬಾಲಕಿಯ ಮದುವೆಯಾದ 40 ವರ್ಷದ ವ್ಯಕ್ತಿ!
ಸಾಲ ತೀರಿಸಲು ಕುಟುಂಬ ವಿಫಲವಾದ ಕಾರಣಕ್ಕೆ 40 ವರ್ಷದ ವ್ಯಕ್ತಿಯೊಬ್ಬ ಒತ್ತಾಯಪೂರ್ವಕವಾಗಿ 11 ವರ್ಷದ ಬಾಲಕಿಯೊಬ್ಬಳನ್ನು ವಿವಾಹವಾಗಿದ್ದ. ಈ ಘಟನೆ ತಿಳಿದ ಬೆನ್ನಲ್ಲಿಯೇ ಪೊಲೀಸರು ಹಮೇಂದ್ರ ಪಾಂಡೆ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ.
ನವದೆಹಲಿ (ಮೇ.1): ಬಿಹಾರ ರಾಜ್ಯದ ಸಿವಾನ್‌ನಲ್ಲಿ ಏಪ್ರಿಲ್ 30 ರಂದು 11 ವರ್ಷ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ವಿವಾಹವಾದ ಕಾರಣಕ್ಕೆ ಮಹೇಂದ್ರ ಪಾಂಡೆ ಹೆಸರಿನ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಮಹೇಂದ್ರ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ತಾಯಿಗೆ ಮಹೇಂದ್ರ ಪಾಂಡೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದ ಆದರೆ, ತಾಯಿ ಈ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದ ಕಾರಣಕ್ಕೆ ಬಾಲಕಿಯನ್ನು ಆತ ವಿವಾಹವಾಗಿದ್ದಾನೆ ಎಂದು ದೂರಲಾಗಿದೆ. ಮೈರ್ವಾ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪಾಂಡೆ ಅವರನ್ನು ಬಂಧಿಸಿದ್ದಾರೆ ಎಂದು ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಪಾಂಡೆ ಅವರು 11 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾಗುವ ಮೊದಲು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು ಎಂದು ವರದಿಗಳು ಹೇಳಿವೆ. ಈ ನಡುವೆ ಸ್ಥಳೀಯ ನ್ಯೂಸ್ ಚಾನೆಲ್ ಪ್ರಶಾಂತ್ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಹೇಂದ್ರ ಪಾಂಡೆ, ಬಾಲಕಿಯ ತಾಯಿ ಮಾಡಿರುವ ಆರೋಪಗಳು ಸುಳ್ಳು, ನನ್ನಿಂದ ಮತ್ತಷ್ಟು ಹಣ ಪೀಕುವ ಉದ್ದೇಶದಿಂದ ಈ ಕಥೆ ಕಟ್ಟಿದ್ದಾಳೆ ಎಂದಿದ್ದಾನೆ.
ಅದಲ್ಲದೆ, ಮಹೇಂದ್ರ ಪಾಂಡೆ ಮಾತನಾಡಿರುವ ಸಂದರ್ಶನದ ವಿಡಿಯೋಗಳು ವೈರಲ್ ಆಗಿದ್ದಯ, ತಾಯಿ ಹಾಗೂ ಬಾಲಕಿಯ ಒಪ್ಪಿಗೆಯ ಮೇರೆಗೆ 11 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾಗಿ ತಿಳಿಸಿದ್ದಾರೆ. 'ಆದರೆ, ಈಗ ಬಾಲಕಿಯ ತಾಯಿ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ನಡುವೆ ಯಾವುದೇ ರೀತಿಯ ಹಣ ವರ್ಗಾವಣೆ ಒಪ್ಪಂದವಿರಲಿಲ್ಲ. ನಾನು ಈಗ ಅವರ ಬಲೆಯಲ್ಲಿ ಸಿಕ್ಕಿಬಿದ್ದಿದ್ದೇನೆ. ಕೆಲವು ಮಾಧ್ಯಮ ಸಂಸ್ಥೆಗಳೂ ಕೂಡ ಸುಳ್ಳು ಸುದ್ದಿ ಬಿತ್ತರ ಮಾಡುತ್ತಿವೆ ಎಂದಿದ್ದಾರೆ.
ಏತನ್ಮಧ್ಯೆ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಟ್ವಿಟರ್‌ನಲ್ಲಿ ಅನೇಕರು ಈ ವ್ಯಕ್ತಿಯದ್ದು ಅಚ್ಚರಿಯ ನಡವಳಿಕೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರನು ಹೀಗೆ ಬರೆದಿದ್ದಾನೆ: "40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬಡ ಕುಟುಂಬವನ್ನು ತಮ್ಮ 11 ವರ್ಷದ ಮಗಳನ್ನು ವಿವಾಹವಾಗುವಂತೆ ಒತ್ತಾಯಿಸಿದರು ಏಕೆಂದರೆ ಕುಟುಂಬವು ಅವರಿಗೆ ಸಾಲ ನೀಡಿದ ಹಣವನ್ನು ಪಾವತಿಸಲು ಸಾಧ್ಯವಾಗಲಿಲ್ಲ; ಎಂದಿದ್ದಾರೆ.
Pocso case: ಅಪ್ರಾಪ್ತೆಗೆ ಮಗು ಜನನ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ: "ಇದು ಕೇವಲ ಅಪಹರಣ ಅಥವಾ ಬಾಲ್ಯವಿವಾಹ ಅಥವಾ ಪೋಕ್ಸೋ ಅಲ್ಲ. ಮಾನವನನ್ನು ಖರೀದಿಸುವುದು, ಮೂಲತಃ ಇದು ಮಾನವ ಕಳ್ಳಸಾಗಣೆ." ಎಂದಿದ್ದಾರೆ.ಹುಡುಗಿಯನ್ನು ಸಂದರ್ಶಿಸಿದ ವರದಿಗಾರ ಅವಳೊಂದಿಗೆ ಮಾತನಾಡುವಾಗ ಹೆಚ್ಚು ಸಂವೇದನಾಶೀಲರಾಗಿರಬೇಕಿತ್ತು ಎಂದು ಟ್ವಿಟರ್ ಬಳಕೆದಾರರು ಗಮನಸೆಳೆದಿದ್ದಾರೆ.
Sexual assault: 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಫಿರೋಜ್‌ಖಾನ್ ಅರೆಸ್ಟ್