ಸಿಖ್ಖರ ಧರ್ಮಗ್ರಂಥ ಹರಿದ ಮಾನಸಿಕ ಅಸ್ವಸ್ಥ ಅಪ್ರಾಪ್ತನ ಮೇಲೆ ಗ್ರಾಮಸ್ಥರ ದಾಳಿ, ಥಳಿಸಿ ಹತ್ಯೆ

ಸಿಖ್ಖರ ಧರ್ಮಗ್ರಂಥ ‘ಗುರು ಗ್ರಂಥ ಸಾಹಿಬ್‌’ ಪುಸ್ತಕದ ಕೆಲವು ಹಾಳೆಗಳನ್ನು ಹರಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ ಹತ್ಯೆ ಮಾಡಿದ ಘಟನೆ  ಗುರುದ್ವಾರದಲ್ಲಿ ನಡೆದಿದೆ.

Teenager beaten to death over tearing pages Sikh holy book Guru Granth Sahib in Punjab gow

ಫಿರೋಜ್‌ಪುರ (ಮೇ.6): ಸಿಖ್ಖರ ಧರ್ಮಗ್ರಂಥ ‘ಗುರು ಗ್ರಂಥ ಸಾಹಿಬ್‌’ ಪುಸ್ತಕದ ಕೆಲವು ಹಾಳೆಗಳನ್ನು ಹರಿದ ಹಿನ್ನೆಲೆಯಲ್ಲಿ 19 ವರ್ಷದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿದ ಘಟನೆ ಫಿರೋಜ್‌ಪುರದ ಗುರುದ್ವಾರದಲ್ಲಿ ನಡೆದಿದೆ. ಹಲ್ಲೆಯಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಬಳಿಕ ಸಾವನ್ನಪ್ಪಿದ್ದಾನೆ.

ರಾಮಮಂದಿರಕ್ಕೆ ಹೋಗಲು ಅನುಮತಿ ನೀಡದ್ದಕ್ಕೆ ಆಕ್ರೋಶ, ಕಾಂಗ್ರೆಸ್‌ಗೆ ವಕ್ತಾರೆ ರಾಧಿಕಾ ಖೇರಾ ರಾಜೀನಾಮೆ 

ಧರ್ಮಗ್ರಂಥ ಹರಿದ ವ್ಯಕ್ತಿಯನ್ನು ಬಕ್ಷೀಶ್‌ ಸಿಂಗ್‌ ಎಂದು ಗುರುತಿಸಲಾಗಿದೆ. ನನ್ನ ಪುತ್ರ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ತನ್ನ ಬುದ್ಧಿ ಸ್ಥಿಮಿತವಿಲ್ಲದೇ ಈ ಕೃತ್ಯ ಎಸಗಿದ್ದಾನೆ ಎಂದು ಆತನ ತಂದೆ ಲಖ್ವೀಂದರ್‌ ಸಿಂಗ್‌ ಹೇಳಿದ್ಧಾರೆ. ಜೊತೆಗೆ ಹಲ್ಲೆಕೋರರ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಂಜಾಬ್‌ನಲ್ಲಿ ವಿಚಿತ್ರ ಘಟನೆ, ಬೋಗಿ ಬಿಟ್ಟು 3 ಕಿ.ಮೀ. ಚಲಿಸಿದ ರೈಲು ಎಂಜಿನ್‌! 

ಇನ್ನೊಂದೆಡೆ ಗುರುದ್ವಾರ ಸಮಿತಿ ಕೂಡಾ ಬಕ್ಷೀಶ್‌ ಮೇಲೆ ಧರ್ಮಕ್ಕೆ ಅಪಚಾರ ಮಾಡಿದ ಕುರಿತು ಪ್ರಕರಣ ದಾಖಲಿಸಿದ್ದಾರೆ. ಶ್ರೀ ಗುರು ಗ್ರಂಥ ಸಾಹಿಬ್ ಸತ್ಕರ್ ಸಮಿತಿಯ ಅಧ್ಯಕ್ಷ ಲಖ್ವೀರ್ ಸಿಂಗ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಬಕ್ಷೀಶ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳು ಅಥವಾ ನಂಬಿಕೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.ಶ್ರೀ ಗುರು ಗ್ರಂಥ ಸಾಹಿಬ್ ಸತ್ಕರ್ ಸಮಿತಿಯ ಅಧ್ಯಕ್ಷ ಲಖ್ವೀರ್ ಸಿಂಗ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಬಕ್ಷೀಶ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳು ಅಥವಾ ನಂಬಿಕೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲಿನ ಧರ್ಮಗುರು ಅಂತ್ಯಕ್ರಿಯೆಗೆ ಅವಕಾಶ ನೀಡದಂತೆ ಬಹಿಷ್ಕಾರ ಹಾಕಿದ್ದಾರೆ.

ಪೂಂಛ್‌ ದಾಳಿ ಬಿಜೆಪಿ ಸ್ಟಂಟ್‌: ಪಂಜಾಬ್‌ ಮಾಜಿ ಸಿಎಂ ಚನ್ನಿ ವಿವಾದ
ನವದೆಹಲಿ: ಕಾಶ್ಮೀರದ ಪೂಂಛ್‌ ಪ್ರದೇಶದಲ್ಲಿ ಭಾರತೀಯ ವಾಯುಸೇನಾ ಯೋಧರ ಮೇಲೆ ನಡೆದ ಉಗ್ರರ ದಾಳಿ ಬಗ್ಗೆ ಪಂಜಾಬ್‌ ಮಾಜಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದು ಚುನಾವಣಾ ನಿಮಿತ್ತ ಬಿಜೆಪಿಯಿಂದ ಮಾಡಿಸಲಾದ ಪೂರ್ವ ನಿಯೋಜಿತ ಸ್ಟಂಟ್‌ ಆಗಿದೆ ಎಂದು ಆರೋಪಿಸಿದ್ದಾರೆ.

ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಪ್ರತಿಬಾರಿ ಚುನಾವಣೆ ಬಂದಾಗಲೂ ಈ ರೀತಿ ಪೂರ್ವ ನಿಯೋಜಿತ ದಾಳಿ ನಡೆಸಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತದೆ. ಅದರಂತೆ ಶನಿವಾರ ನಡೆದ ಪೂಂಛ್‌ ದಾಳಿಯೂ ಬಿಜೆಪಿ ಮಾಡಿಸಿರುವ ಸ್ಟಂಟ್‌ ಆಗಿದ್ದು, ಅದನ್ನು ಉಗ್ರಕೃತ್ಯವೆಂದು ಬಿಂಬಿಸಲಾಗುತ್ತಿರುವುದು ಶುದ್ಧ ಸುಳ್ಳು’ ಎಂದು ವಾಗ್ದಾಳಿ ನಡೆಸಿದರು.

ಶನಿವಾರ ಪೂಂಛ್‌ ಪ್ರದೇಶದಲ್ಲಿ ಭಾರತೀಯ ವಾಯುಸೇನಯ ಯೋಧರೊಬ್ಬರನ್ನು ಉಗ್ರರು ಅಮಾನುಷವಾಗಿ ದಾಳಿ ಮಾಡಿ ಹತ್ಯೆ ಮಾಡಿ ನಾಲ್ಬರು ಯೋಧರನ್ನು ಗಾಯಗೊಳಿಸಿದ್ದರು. ದುಷ್ಕರ್ಮಿಗಳಿಗಾಗಿ ಶೋಧ ಮುಂದುವರೆದಿದೆ.

Latest Videos
Follow Us:
Download App:
  • android
  • ios