ಬೋಗಿಗಳನ್ನು ಬಿಟ್ಟು ರೈಲಿನ ಎಂಜಿನ್‌ 3 ಕಿ.ಮೀನಷ್ಟು ದೂರ ಹಾಗೆಯೇ ಚಲಿಸಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ.  

ಲೂಧಿಯಾನ (ಮೇ.6): ಬೋಗಿಗಳನ್ನು ಬಿಟ್ಟು ರೈಲಿನ ಎಂಜಿನ್‌ 3 ಕಿ.ಮೀನಷ್ಟು ದೂರ ಹಾಗೆಯೇ ಚಲಿಸಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪಂಜಾಬ್‌ನಿಂದ ಜಮ್ಮುವಿಗೆ ತೆರಳುತ್ತಿದ್ದ ರೈಲು ಸರ್‌ಹಿಂದ್‌ ನಿಲ್ದಾಣದಲ್ಲಿ ನಿಂತಿತ್ತು. ಆದರೆ ಅದು ಹೇಗೋ ಅಲ್ಲಿ ಬೋಗಿಗಳು ಎಂಜಿನ್‌ನಿಂದ ಕಳಚಿಕೊಂಡಿವೆ. ಇದರ ಅರಿವಿಲ್ಲದೇ ಚಾಲಕ ಹಾಗೆಯೇ 3 ಕಿ.ಮೀ ಮುಂದೆ ಸಾಗಿದ್ದಾನೆ.

ಎರಡನೇ ಹಂತದ ಮತದಾನ, ಉತ್ತರ ಕರ್ನಾಟಕದ ವಿವಿಧ ಮಾರ್ಗದಲ್ಲಿ ಮೇ 6, 7ರಂದು ವಿಶೇಷ ಎಕ್ಸ್‌ಪ್ರೆಸ್‌ ರೈಲು

ಬಳಿಕ ದೆಹಲಿ-ಕಟ್ರಾ ರೈಲು ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಗಮನಿಸಿ ಚಾಲಕನಿಗೆ ಎಚ್ಚರಿಸಿದ್ದಾರೆ. ಕೂಡಲೇ ಎಂಜಿನ್‌ನನ್ನು ಮರಳಿ ನಿಲ್ದಾಣಕ್ಕೆ ತಂದು ಬೋಗಿ ಜೋಡಿಸಿಕೊಂಡು ರೈಲು ಮುಂದೆ ಹೋಗಿದೆ. ಘಟನೆಗೆ ಸರಿಯಾಗಿ ಬೋಗಿ ಜೋಡಣೆ ಮಾಡದೇ ಇದ್ದದ್ದು ಕಾರಣ ಎಂದು ವಿಭಾಗೀಯ ಅಧಿಕಾರಿ ನವೀನ್‌ ಕುಮಾರ್‌ ಹೇಳಿದ್ದಾರೆ.

ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್‌ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?

ಸ್ಟೇಷನ್‌ ಮಾಸ್ಟರ್‌ ನಿದ್ದೆ: ಗ್ರೀನ್‌ ಸಿಗ್ನಲ್‌ಗೆ ಅರ್ಧಗಂಟೆ ಕಾದ ರೈಲು!
ಸ್ಟೇಷನ್‌ ಮಾಸ್ಟರ್‌ ಗ್ರೀನ್‌ ಸಿಗ್ನಲ್‌ ತೋರಿಸಿದರೇ ರೈಲು ಸ್ಷೇಷನ್‌ನಿಂದ ಹೊರಡುತ್ತದೆ. ಇಲ್ಲ ಅಂದ್ರೆ ಹೊರಡುವುದಿಲ್ಲ. ಅಂತದ್ರಲ್ಲಿ ಸ್ಟೇಷನ್‌ ಮಾಸ್ಟರ್‌ ಕೆಲಸದ ಸಮಯದಲ್ಲಿ ನಿದ್ರೆಗೆ ಮಾಡಿದರೆ ಮುಗಿಯಿತು ಕತೆ. ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸ್ಟೇಷನ್‌ ಮಾಸ್ಟರ್ ನಿದ್ದೆ ಹೋದ ಕಾರಣ ಪಟನಾ-ಕೋಟಾ ಎಕ್ಸ್‌ಪ್ರೆಸ್‌ ರೈಲು ಗ್ರೀನ್‌ ಸಿಗ್ನಲ್‌ಗಾಗಿ ಅರ್ಧ ಗಂಟೆ ಕಾದಿದೆ. ಇದರಿಂದ ಸರಿಯಾದ ಸಮಯಕ್ಕೆ ಹೊರಡಬೇಕಿರುವ ರೈಲು ತಡವಾಗಿದ್ದಕ್ಕೆ ಪ್ರಯಾಣಿಕರು ಬೈಕೊಂಡಿದ್ದಾರೆ. ಈ ಬಗ್ಗೆ ರೈಲ್ವೇ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಸ್ಟೇಷನ್‌ ಮಾಸ್ಟರ್‌ ವಿರುದ್ಧ ತನಿಖೆಗೆ ನಿರ್ಧರಿಸಿದೆ.