ಇತ್ತೀಚೆಗೆ ಕಾಡುಗೋಡಿಯ ಅಪಾರ್ಚ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಪತ್ನಿ ಹಾಗೂ ಇಬ್ಬರು ಪುಟ್ಟಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸಾಫ್‌್ಟವೇರ್‌ ಎಂಜಿನಿಯರ್‌, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟಅನುಭವಿಸಿದ್ದ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರು (ಆ.6):  ಇತ್ತೀಚೆಗೆ ಕಾಡುಗೋಡಿಯ ಅಪಾರ್ಚ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಪತ್ನಿ ಹಾಗೂ ಇಬ್ಬರು ಪುಟ್ಟಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸಾಫ್‌್ಟವೇರ್‌ ಎಂಜಿನಿಯರ್‌, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟಅನುಭವಿಸಿದ್ದ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಆಂಧ್ರಪ್ರದೇಶ ಮೂಲದ ಸಾಫ್‌್ಟವೇರ್‌ ಎಂಜನಿಯರ್‌ ವೀರಾರ್ಜುನ ವಿಜಯ್‌ (31) ಮೊಬೈಲ್‌, ಲ್ಯಾಪ್‌ಟಾಪ್‌ಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಳಿಯ ಬಿಜಿನೆಸ್‌ನಲ್ಲಿ ನಷ್ಟಅನುಭವಿಸಿರುವ ಬಗ್ಗೆ ಮಗಳು ಹೇಮಾವತಿ ಕರೆ ಮಾಡಿದ್ದಾಗ ಹೇಳಿದ್ದಳು ಎಂದು ಹೇಮಾವತಿ ಪೋಷಕರು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ. ವೇತನದ ಜತೆಗೆ ಹಲವರಿಂದ ಸಾಲ ಮಾಡಿ ವೀರಾರ್ಜುನ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿದ್ದರು. ಈ ಹೂಡಿಕೆ ನಷ್ಟವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇ ವೀರಾರ್ಜುನ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಇನ್ನಷ್ಟುತನಿಖೆ ಮುಂದುವರೆದಿದೆ.

ಪತ್ನಿ, ಮಗನನ್ನು ಕೊಂದು ಸಾವಿಗೆ ಶರಣಾದ ಟೆಕ್ಕಿ

ಕಳೆದ ಗುರುವಾರ ಸೀಗೆಹಳ್ಳಿಯ ಸಾಯಿ ಗಾರ್ಡನ್‌ ಅಪಾರ್ಚ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ವೀರಾರ್ಜುನ ವಿಜಯ್‌, ಪತ್ನಿ ಹೇಮಾವತಿ(29), ಮಕ್ಕಳಾದ ಮೋಕ್ಷ ಮೇಘ ನಯನಾ(2) ಹಾಗೂ 8 ತಿಂಗಳ ಮಗು ಸೃಷ್ಟಿಸುನಯನಾ ಮೃತದೇಹಗಳು ಪತ್ತೆಯಾಗಿದ್ದವು. ವೀರಾರ್ಜುನ್‌ ಜು.31ರ ರಾತ್ರಿ ಪತ್ನಿ ಹಾಗೂ ಇಬ್ಬರು ಪುತ್ರಿಯರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಿ ಬಳಿಕ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಘಟನಾ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಮರಣಪತ್ರ ಪತ್ತೆಯಾಗಿರಲಿಲ್ಲ.

ಆಂಧ್ರಪ್ರದೇಶ ಮೂಲದ ವೀರಾರ್ಜುನ ಆರು ವರ್ಷದ ಹಿಂದೆ ಹೇಮಾವತಿಯನ್ನು ವಿವಾಹವಾಗಿದ್ದರು. ನಗರದ ಕುಂದಲಹಳ್ಳಿಯ ಖಾಸಗಿ ಸಾಫ್‌್ಟವೇರ್‌ ಕಂಪನಿಯಲ್ಲಿ ಟೀಂ ಲೀಡರ್‌ ಆಗಿ ಕೆಲಸ ಮಾಡುತ್ತಿದ್ದರು.

Bengaluru: ಮನೆಯಲ್ಲಿ ಯಾರೂ ಇಲ್ಲದಾಗ ಮಹಿಳಾ ಟೆಕ್ಕಿ ಆತ್ಮಹತ್ಯೆ: ಕಾರಣ ನಿಗೂಢ..?