Asianet Suvarna News Asianet Suvarna News

ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪರ್ಫ್ಯೂಮ್‌ ಬಾಂಬ್‌ ಪತ್ತೆ: ಉಗ್ರನ ಬಳಿ ಇತ್ತು ಸುಗಂಧ ಬಾಟಲ್‌ ಬಾಂಬ್‌..!

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಆರಿಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದ್ದಾನೆ. ಆತನಿಂದ ಸುಧಾರಿತ ಸ್ಫೋಟಕ ಸಾಧನವಾಗಿ (ಐಇಡಿ) ಪರಿವರ್ತನೆಯಾಗಿದ್ದ ಸುಗಂಧ ದ್ರವ್ಯದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಿದರು.

teacher turned terrorist held with perfume ied in jammu and kashmir scent of terror ash
Author
First Published Feb 2, 2023, 8:08 PM IST

ಶ್ರೀನಗರ (ಫೆಬ್ರವರಿ 2, 2023): ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ ಹಾಗೂ ಈಗ ಭಯೋತ್ಪಾದಕನಾಗಿರುವವನನ್ನು ಬಂಧಿಸಿದ್ದಾರೆ ಮತ್ತು ಆತನಿಂದ ಸುಗಂಧ ಬಾಟಲ್ ಬಾಂಬ್ ಅನ್ನು ವಶಪಡಿಸಿಕೊಂಡಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಉಗ್ರನ ಬಳಿ ಪರ್ಫ್ಯೂಮ್‌ ಬಾಂಬ್‌ ಪತ್ತೆಯಾಗಿದೆ. ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಜನವರಿ 21 ರಂದು 9 ಜನರು ಗಾಯಗೊಂಡಿದ್ದ ಅವಳಿ ಸ್ಫೋಟದ ತನಿಖೆ ನಡೆಸುತ್ತಿರುವಾಗ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ನಿವಾಸಿ ಆರಿಫ್‌ನನ್ನು ಬಂಧಿಸಿದ್ದಾರೆ. ಇನ್ನು, ಕಳೆದ ವರ್ಷ ಮೇ ತಿಂಗಳಲ್ಲಿ ವೈಷ್ಣೋ ದೇವಿ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್‌ನ ಮೇಲಿನ ದಾಳಿಯಲ್ಲಿ ಆರಿಫ್ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಯಾತ್ರಾರ್ಥಿಗಳು ಮೃತಪಟ್ಟಿದ್ದರು..  

ಇನ್ನು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ (Director General of Jammu and Kashmir) ಅವರು ಆರಿಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ (Lashkar E Taiba) ಸಂಪರ್ಕ ಹೊಂದಿದ್ದಾನೆ. ಆತನಿಂದ ಸುಧಾರಿತ ಸ್ಫೋಟಕ ಸಾಧನವಾಗಿ (Improvised Explosive Device) (ಐಇಡಿ) ಪರಿವರ್ತನೆಯಾಗಿದ್ದ ಸುಗಂಧ ದ್ರವ್ಯದ ಬಾಟಲಿಯನ್ನು (Perfume Bottle) ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಜಮ್ಮುವಿನಲ್ಲಿ 2 ಕಡೆ ಬಾಂಬ್‌ ಸ್ಫೋಟ: ಕನಿಷ್ಠ 6 ಜನರಿಗೆ ಗಾಯ

ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶದಲ್ಲಿ (Union Territory) ಇಂತಹ ಬಾಂಬ್ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ನಾವು ಸುಗಂಧ ದ್ರವ್ಯ IED ಅನ್ನು ವಶಕ್ಕೆ ಪಡೆದಿರುವುದು ಇದೇ ಮೊದಲ ಬಾರಿಗೆ. ನಾವು ಈ ಮೊದಲು ಯಾವುದೇ ಸುಗಂಧ ದ್ರವ್ಯ IED ಅನ್ನು ವಶಕ್ಕೆ ಪಡೆದಿರಲಿಲ್ಲ. ಯಾರಾದರೂ ಇದನ್ನು ಒತ್ತಿ ಅಥವಾ ತೆರೆಯಲು ಪ್ರಯತ್ನಿಸಿದರೆ IED ಸ್ಫೋಟಗೊಳ್ಳುತ್ತದೆ. ನಮ್ಮ ವಿಶೇಷ ತಂಡವು ಈ IED ಅನ್ನು ನಿರ್ವಹಿಸುತ್ತದೆ ಎಂದೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.

ಆರಿಫ್ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ ವರ್ಷ ಮೇನಲ್ಲಿ ವೈಷ್ಣೋದೇವಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನಲ್ಲಿ ನಾಲ್ಕು ಜನರನ್ನು ಕೊಂದು 24 ಜನರನ್ನು ಗಾಯಗೊಳಿಸಿದ ಬಾಂಬ್ ಸ್ಫೋಟದಲ್ಲಿ ತಾನು ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದೂ ದಿಲ್ಬಾಗ್‌ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಚುರಪಡಿಸುವುದರಲ್ಲಿ ಕುಖ್ಯಾತವಾಗಿದೆ. ಮತ್ತು ಅದು ಜಮ್ಮು ಹಾಗು ಕಾಶ್ಮೀರದಲ್ಲಿ ಜನರ ನಡುವೆ ಕೋಮು ವಿಭಜನೆ ಸೃಷ್ಟಿಸಲು ಬಯಸುತ್ತದೆ ಎಂದೂ ಹೇಳಿದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿ: 3 ನಾಗರಿಕರು ಬಲಿ, 9 ಮಂದಿಗೆ ತೀವ್ರ ಗಾಯ

ಜಮ್ಮು ಮತ್ತು ಕಾಶ್ಮೀರವು ಕೆಲವು ಸಮಯದಿಂದ ಟಾರ್ಗೆಟ್‌ ಆಗಿದೆ ಎಂದೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಶ್ರೀನಗರಕ್ಕೆ ಹೊರಟಿದ್ದ 4 ಪಾಕ್‌ ಉಗ್ರರ ಹತ್ಯೆ: ಅಪಾರ ಶಸ್ತ್ರಾಸ್ತ್ರ ವಶ; ಸೇಡಿಗಾಗಿ ಕಾದಿದ್ದ ಉಗ್ರರು..?

Follow Us:
Download App:
  • android
  • ios