ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿ: 3 ನಾಗರಿಕರು ಬಲಿ, 9 ಮಂದಿಗೆ ತೀವ್ರ ಗಾಯ
ಈ ವೇಳೆ, ಮೂವರು ನಾಗರಿಕರು ಬಲಿಯಾಗಿದ್ದು, 9 ಮಂದಿ ಗಾಯಗೊಂಡಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದೂ ತಿಳಿದುಬಂದಿದೆ.
ಭಾರತದ ಮುಕುಟ, ಕಣಿವೆ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹೊಸ ವರ್ಷದ ಮೊದಲ ದಿನವೇ ಮತ್ತೆ ಗುಂಡಿನ (Firing) ದಾಳಿ ನಡೆದಿದೆ. ಹೊಸ ವರ್ಷದ ಸಂಭ್ರಮದಲ್ಲಿದ್ದ ನಾಗರಿಕರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ (Rajouri) ಜಿಲ್ಲೆಯ ಗ್ರಾಮವೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು (Armed Men) ಈ ಭಯೋತ್ಪಾದಕ ದಾಳಿ (Terrorist Attack) ನಡೆಸಿದ್ದಾರೆ. ಈ ವೇಳೆ, ಮೂವರು ನಾಗರಿಕರು ಬಲಿಯಾಗಿದ್ದು (Civilians Killed), 9 ಮಂದಿ ಗಾಯಗೊಂಡಿದ್ದು (Injured), ಗುಂಡೇಟಿನಿಂದ ಗಾಯಗೊಂಡಿರುವ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದೂ ತಿಳಿದುಬಂದಿದೆ.
ಜನವರಿ 1, ಭಾನುವಾರ ಸಂಜೆ ಡ್ಯಾಂಗ್ರಿ ಗ್ರಾಮದಲ್ಲಿ ಕನಿಷ್ಠ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "50 ಮೀಟರ್ ರೇಂಜ್‌ನೊಳಗೆ 3 ಮನೆಗಳಲ್ಲಿ ಗುಂಡಿನ ದಾಳಿ ನಡೆದಿದೆ. ಈ ವೇಳೆ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದರು.
ಇದನ್ನು ಓದಿ: ಶ್ರೀನಗರಕ್ಕೆ ಹೊರಟಿದ್ದ 4 ಪಾಕ್ ಉಗ್ರರ ಹತ್ಯೆ: ಅಪಾರ ಶಸ್ತ್ರಾಸ್ತ್ರ ವಶ; ಸೇಡಿಗಾಗಿ ಕಾದಿದ್ದ ಉಗ್ರರು..?
ಆದರೆ, ಮೃತರ ಸಂಖ್ಯೆ ಮೂರಕ್ಕೆ ಏರಿದೆ ಮತ್ತು ಗಂಭೀರವಾಗಿ ಗಾಯಗೊಂಡ ಎಂಟು ಜನರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯ ವರದಿಗಳು ಹೇಳುತ್ತಿವೆ. ಈ ಮಧ್ಯೆ, ಗಾಯಾಳುಗಳನ್ನು ಚಿಕಿತ್ಸೆಗಾಗಿ ರಜೌರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಿರುವುದರಿಂದ, ಆಸ್ಪತ್ರೆಯಲ್ಲಿ ಅಸ್ತವ್ಯಸ್ತವಾಗಿದೆ ಎಂದೂ ಹೇಳಲಾಗಿದೆ.
ಈ ಮಧ್ಯೆ, ರಜೌರಿ ನಗರದಿಂದ ಗುಂಡಿನ ದಾಳಿ ನಡೆದಿರುವ ಗ್ರಾಮಕ್ಕೆ ಕೇವಲ 7 - 8 ಕಿ.ಮೀ. ದೂರ ಇದ್ದು, ಈ ಹಿನ್ನೆಲೆ ಈ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಯುದ್ಧಕ್ಕೆ ಸಿದ್ಧವಾಗುವ ರೀತಿ ಉಗ್ರರು ಇಟ್ಟಿದ್ದ ಶಸ್ತ್ರಾಸ್ತ್ರ ವಶ: ಪಾಕ್, ಚೀನಾ ನಿರ್ಮಿತ ಮದ್ದು ಗುಂಡು ವಶಕ್ಕೆ
ಗ್ರಾಮದ ಹೈಯರ್ ಸೆಕೆಂಡರಿ ಶಾಲೆ ಮತ್ತು ರಾಮ ಮಂದಿರದ ಬಳಿ ಈ ಗುಂಡಿನ ದಾಳಿ ನಡೆದಿದೆ ಎಂದೂ ತಿಳಿದುಬಂದಿದೆ. ಬಂದೂಕು ಹಿಡಿದುಕೊಂಡು ಕಾರಿನಲ್ಲಿ ಬಂದ ಕೆಲವರು ಗುಂಡು ಹಾರಿಸಿದ ಬಳಿಕ ಅದೇ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನು, ಡಿಸೆಂಬರ್ 16 ರಂದು ರಜೌರಿಯ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರನ್ನು ಕೊಲ್ಲಲಾಗಿತ್ತು. ಈ ಹಿನ್ನೆಲೆ ಕಳೆದ 2 ವಾರಗಳಲ್ಲಿ ಕಣಿವೆ ಪ್ರದೇಶದ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯಾಗಿರುವ 2ನೇ ಘಟನೆ ಇದಾಗಿದೆ. ಆದರೆ, ಈ ಘಟನೆ ಗೊಂದಲಮಯವಾಗಿತ್ತು. ಗುಂಡಿನ ದಾಳಿ ಮತ್ತು ನಾಗರಿಕರ ಸಾವಿಗೆ ಸೇನೆಯು "ಅಪರಿಚಿತ" ಭಯೋತ್ಪಾದಕರನ್ನು ದೂಷಿಸಿತ್ತು. ಇನ್ನೊಂದಡೆ, ಆರ್ಮಿ ಸೆಂಟ್ರಿಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಮೊದಲು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಉಗ್ರ ಜಮಾತ್‌ಗೆ ಆರ್ಥಿಕ ಪೆಟ್ಟು; 90 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ: ಕಾಶ್ಮೀರದ 3 ಜಿಲ್ಲೆ ಸ್ಥಳೀಯ ಉಗ್ರ ಮುಕ್ತ..!