Asianet Suvarna News Asianet Suvarna News

ಹಗರಿಬೊಮ್ಮನಹಳ್ಳಿ: ವಿಷ ಸೇವಿಸಿ ಶಿಕ್ಷಕ ಆತ್ಮಹತ್ಯೆ, ಡೆತ್‌ನೋಟ್‌ನಲ್ಲಿ ಏನಿದೆ?

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕಿನಲ್ಲಿ ಬೆಣಕಲ್ ಗ್ರಾಮದಲ್ಲಿ ನಡೆದ ಘಟನೆ

Teacher Committs Suicide at Hagaribommanahalli in Vijayanagara grg
Author
First Published Nov 26, 2022, 10:42 AM IST

ವಿಜಯನಗರ(ನ.26):  ವಿಷ ಸೇವಿಸಿ ಶಿಕ್ಷಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕಿನಲ್ಲಿ ಬೆಣಕಲ್ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಆತ್ಮಹತ್ಯೆಗೆ ಶರಣಾದ ಶಿಕ್ಷಕನನ್ನ ಬಿ.ಆರ್.ಕೊಟ್ರಗೌಡ ಅಂತ ಗುರುತಿಸಲಾಗಿದೆ. 

ಸಾಲದ ಬಾಧೆ ತಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಕೊಟ್ರಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದ ಕೆಚ್ಚಿನಬಂಡಿ ರಸ್ತೆಯ ಬದಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಟ್ರಗೌಡ ಮರಿಯಮ್ಮನಹಳ್ಳಿ ತಾಂಡದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಶಿಕ್ಷಕ ಕೆಲಸ ನಿರ್ವಹಿಸುತ್ತಿದ್ದರು. 

ನೆಲಮಂಗಲ: ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಮೃತದೇಹ ಪತ್ತೆ

ಕಳೆದ ಆರು ತಿಂಗಳ ಹಿಂದೆಯೇ ಕೊಟ್ರಗೌಡ ಸ್ವಯಂ ನಿವೃತ್ತಿ(VRS)  ಪಡೆದಿದ್ದರು.  ಕೊಟ್ರಗೌಡ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ನನ್ನ ಸಂಸಾರವನ್ನ  ಭಗವಂತ ಕಾಪಾಡಲಿ ಅಂತ ಕೊಟ್ರಗೌಡ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.  ಈ ಸಂಬಂಧ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios