ನೆಲಮಂಗಲ: ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಮೃತದೇಹ ಪತ್ತೆ
ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವಿನ ಹುಸ್ಕೂರು ರೈಲ್ವೆ ನಿಲ್ದಾಣ ಹಳಿಯಲ್ಲಿ ಅನುಮಾಸ್ಪದವಾಗಿ ಪ್ರೇಮಿಗಳ ಮೃತದೇಹ ಪತ್ತೆಯಾಗಿದೆ. ಪರಸ್ಪರ ಪ್ರೀತಿಸ್ತಿದ್ದ ಯುವಕ- ಯುವತಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು ಎನ್ನಲಾಗಿದೆ.
ನೆಲಮಂಗಲ (ನ.24): ಹುಸ್ಕೂರು ಗ್ರಾಮದ ರೈಲ್ವೆ ಹಳಿ ಬಳಿ ಅನುಮಾಸ್ಪದವಾಗಿ ಪ್ರೇಮಿಗಳ ಮೃತದೇಹ ಪತ್ತೆಯಾಗಿದೆ. ಮೃತ ಯುವಕನ ಹೆಸರು ನಾಗೇಂದ್ರ (21) ಎನ್ನಲಾಗಿದ್ದು ಯುವತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವಿನ ಹುಸ್ಕೂರು ರೈಲ್ವೆ ನಿಲ್ದಾಣ ಹಳಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಪರಸ್ಪರ ಪ್ರೀತಿಸ್ತಿದ್ದ ಯುವಕ- ಯುವತಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು ಎನ್ನಲಾಗಿದೆ. ಸದ್ಯ ಇವರ ಸಾವಿನ ಬಗ್ಗೆ ಅನುಮಾನ ಮೂಡಿದೆ. ಚಲಿಸುವ ರೈಲಿಗೆ ಸಿಲುಕಿ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ 2 ದಿನದಲ್ಲಿ 6 ಮಂದಿ ಆತ್ಮಹತ್ಯೆ
ಉಡುಪಿ: ಕಳೆದೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಸುಮಾರು 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಒಬ್ಬರು 85 ವರ್ಷ ವಯಸ್ಸಿನ ಮಹಿಳೆಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಗರಡಿ ಮನೆ ಎಂಬಲ್ಲಿನ ರಾಮ ಪೂಜಾರಿ (54) ಎಂಬವರು ಮಂಗಳವಾರ ರಾತ್ರಿ ಮನೆಯ ಮಾಡಿಗೆ ಪಂಚೆಯಿಂದ ನೇಣು ಹಾಕಿಕೊಂಡಿದ್ದಾರೆ.
ಇದೇ ತಾಲೂಕಿನ ನೀಲಾವರ ಗ್ರಾಮದ ಕೆಳಕುಂಜಾಲುವಿನ ಗೋಪಾಲ ನಾಯ್ಕ(75) ಎಂಬವರು ಗಂಟಲು ಕ್ಯಾನ್ಸರ್ ಖಾಯಿಲೆಯಿಂದ ನೊಂದು ಮಂಗಳವಾರ ಕೆರೆಗೆ ಹಾರಿ ಮೃತಪಟ್ಟಿದ್ದಾರೆ. ಮಾರಣಕಟ್ಟೆಯ ದೇವಸ್ಥಾನದ ಕ್ಲರ್ಕ್ ಆಗಿದ್ದ ಗುರುರಾಜ ಶೆಟ್ಟಿ(42) ಅವರು ಮಾನಸಿಕ ಅಸ್ವಾಸ್ಥ್ಯದಿಂದ ನೊಂದು ಡೆತ್‌ನೋಟ್ ಬರೆದಿಟ್ಟು ಮಂಗಳವಾರ ಸಂಜೆ ಮಲ್ಪೆ ಬೀಚಿನಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಮಲ್ಪೆಯ ನಿವಾಸಿ ಪದ್ಮ ಶೇರಿಗಾರ್ತಿ (85) ಎಂಬವರು ಕ್ಷಯ ರೋಗದಿಂದ ನೊಂದುಮಂಗಳವಾರ ರಾತ್ರಿ ಮನೆಯ ಎದುರಿನ ಬಾವಿಗೆ ಹಾರಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನ ವಂಡಾರು ಗ್ರಾಮದ ಹಳ್ಳಿಬೈಲು ನಿವಾಸಿ ಪ್ರಶಾಂತ ದೇವಾಡಿಗ (31) ಯಾವುದೋ ಕಾರಣದಿಂದ ಮನನೊಂದು ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ದಡ್ಡುಮನೆ ಎಂಬಲ್ಲಿನ ಪ್ರಕಾಶ್ ಪೂಜಾರಿ (44) ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಇದೇ ಕಾರಣಕ್ಕೆ ಬುಧವಾರ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಂಜಾಬ್‌ನಲ್ಲಿ ನಾಲ್ವರು ಕಾಮುಕಿಯರಿಂದ ಪುರುಷನ ಮೇಲೆ ಅತ್ಯಾಚಾರ..!
ವರದಕ್ಷಿಣೆಗಾಗಿ ಪತ್ನಿ ಆತ್ಮಹತ್ಯೆಗೆ ಪ್ರಚೋದನೆ: ಪತಿ, ಅತ್ತೆ, ನಾದಿಯರಿಗೆ ಸಜೆ
ಮೈಸೂರು: ವರದಕ್ಷಿಣೆಗಾಗಿ ಪತ್ನಿ ಆತ್ಮಹತ್ಯೆಗೆ ಪ್ತಚೋದನೆ ನೀಡಿದ ಪತಿ, ಅತ್ತೆ ಹಾಗೂ ಇಬ್ಬರು ನಾದಿನಿಯರಿಗೆ ಇಲ್ಲಿನ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀರಾದ ಮಲ್ಲಿಕಾರ್ಜುನ ಅವರು 9 ವರ್ಷಗಳ ಕಠಿಣ ಸಜೆ ವಿಧಿಸಿದ್ದಾರೆ.
ತುಂಬುನೇರಳೆ ಗ್ರಾಮದ ಗುರುಸಿದ್ದನಾಯಕ ಎಂಬವರ ಪುತ್ರ ಸಿದ್ದರಾಜು, ಆತನ ತಾಯಿ ಜಯಮ್ಮ, ಸಹೋದರಿಯರಾದ ಸುಮಾ ಹಾಗೂ ಐಶ್ವರ್ಯ ಶಿಕ್ಷೆಗೆ ಒಳಗಾದವರು.
ಬೆಂಗಳೂರಿನಲ್ಲಿ 'ಪಿಎಫ್‌ಐ ಮುಖಂಡ'ನನ್ನು ಬಂಧಿಸಿದ ಅಸ್ಸಾಂ ಪೊಲೀಸರು
ನಂಜನಗೂಡು ತಾಲೂಕು ಬಿಳಿಗೆರೆ ಹೋಬಳಿ ತಾಯೂರು ಗ್ರಾಮದ ಬಸವನಾಯಕರ ಪುತ್ರಿ ಪುಷ್ಪಮಾಲ ಉ. ಮಾಲಾ ಅವರನ್ನು ಸಿದ್ದರಾಜುಗೆ ವಿವಾಹ ಮಾಡಿಕೊಡಲಾಗಿತ್ತು. ವರದಕ್ಷಿಣೆಯಾಗಿ 1 ಲಕ್ಷ ಹಾಗೂ ಮದುವೆ ವೆಚ್ಚ 1 ಲಕ್ಷ ರು. ನೀಡಲಾಗಿತ್ತು. ಆದರೂ ಪತಿ ಮತ್ತು ಆತನ ಮನೆಯವರು ಸೇರಿಕೊಂಡು ಮತ್ತೆ 1 ಲಕ್ಷ ರು. ತರುವಂತೆ ಪೀಡಿಸುತ್ತಿದ್ದರು. ಈ ಬಗ್ಗೆ ನ್ಯಾಯ ಪಂಚಾಯ್ತಿ ಕೂಡ ಆಗಿತ್ತು.
ಇದಾದ ನಂತರ ಗೌರಿ ಹಬ್ಬಕ್ಕೆಂದು ತಂದೆ ಬಸವ ನಾಯಕರ ಜೊತೆ ತೌರಿಗೆ ಬಂದಿದ್ದ ಪುಷ್ಪಮಾಲ 2014ರ ನ.4 ರಂದು ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂಜನಗೂಡಿನ ಅಂದಿನ ಎಎಸ್ಪಿ ನಿಕಮ್ ಪ್ರಕಾಸ್ ಅಮೃತ್ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್ ವಾದಿಸಿದ್ದರು.