ಬೆಂಗಳೂರಿನಲ್ಲಿ ಪತ್ನಿ ಅನೈತಿಕ ಸಂಬಂಧ ಅನುಮಾನ: ಡಂಬಲ್ಸ್‌ನಿಂದ ಹೊಡೆದು ಕೊಲೆ
ಕಳೆದ 18 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದು, ಅವರು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಆದರೂ ದಂಪತಿಯ ನಡುವೆ ಅಕ್ರಮ ಸಂಬಂಧದ ಅನುಮಾನ ಹುಟ್ಟಿಕೊಂಡಿದ್ದು, ಈ ಅನುಮಾನ ಇಂದು ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರು (ಫೆ.02): ಕಳೆದ 18 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದು, ಅವರು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಆದರೂ ದಂಪತಿಯ ನಡುವೆ ಅಕ್ರಮ ಸಂಬಂಧದ ಅನುಮಾನ ಹುಟ್ಟಿಕೊಂಡಿದ್ದು, ಈ ಅನುಮಾನ ಇಂದು ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಜಗತ್ತಿನಲ್ಲಿ ಧರ್ಮ ಯಾವುದೇ ಇರಲಿ, ಜಾತಿಯಿರಲಿ. ಇಂತಹ ಯುವಕ- ಯುವತಿಯರ ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ನಂಬಿಕೆ ಇದೆ. ಆದರೆ, ಇಲ್ಲಿ ಸ್ವರ್ಗದಲ್ಲಿ ನಿಶ್ಚಯ ಆಗಿರುವಂತೆ ಮದುವೆಯೂ ಆಗಿದೆ. ಮದುವೆಯ ನಂತರ 18 ವರ್ಷಗಳ ಸಂಸಾರ ಮಾಡಿದ್ದ ದಂಪತಿಗೆ ಮೂವರು ಮಕ್ಕಳೂ ಇದ್ದಾರೆ. ಆದರೆ, ಮಕ್ಕಳು ಕೂಡ ಪ್ರೌಢಶಾಲೆಗೆ ಹೋಗುವ ಹಂತಕ್ಕೆ ತಲುಪಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಮಕ್ಕಳು ಮದುವೆ ವಯಸ್ಸಿಗೆ ಬರುತ್ತಾರೆ. ಆದರೆ, ದಂಪತಿಯ ನಡುವೆ ಈಗ ಅನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂಡಿದೆ. ಹೀಗೆ ಹುಟ್ಟಿಕೊಂಡ ಅನೈತಿಕ ಸಂಬಂಧದ ಅನುಮಾನ ಮತ್ತು ಆರಂಭವಾದ ಜಗಳ ಇಂದು ಬೆಳಗ್ಗೆ ಕೊಲೆಯಲ್ಲಿ ಅಂತ್ಯವಾಗಿದ್ದು, ಮಕ್ಕಳು ಅನಾಥವಾಗಿದ್ದಾರೆ.
ಗೆಳೆಯನೊಂದಿಗೆ ಸೇರಿ ಅಪ್ಪನ ಕೊಂದ ಅಮ್ಮನ ವಿರುದ್ಧ ಸಾಕ್ಷಿ ಹೇಳಿದ 6 ವರ್ಷದ ಕಂದ
ಅನೈತಿಕ ಸಂಬಂಧ ಕಾರಣ ಆಗಿಂದಾಗ್ಗೆ ಜಗಳ: ಲಿದಿಯಾ (44) , ಕೊಲೆಯಾದ ಮಹಿಳೆ ಆಗಿದ್ದಾಳೆ. ಈಕೆಯ ಪತಿ ಮೋರಿಸ್ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಇನ್ನು ಈ ಘಟನೆ ಬೆಂಗಳೂರು ನಗರದ ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್ ನಲ್ಲಿ ಇಂದು ಬೆಳಗ್ಗೆ 9.30ಕ್ಕೆ ನಡೆದಿದೆ. ಮನೆಯಲ್ಲಿ ದೇಹದಂಡನೆಗೆ ಎಂದು ಇಟ್ಟುಕೊಂಡಿರುವ ಜಿಮ್ ಉಪಕರಣ ಡಂಬಲ್ಸ್ ನಿಂದ ಹೊಡೆದು ಪತಿಯಿಂದ ಪತ್ನಿಯ ಕೊಲೆ ಮಾಡಿದ್ದಾನೆ. ಇನ್ನು ಘಟನೆಗೆ ಅನೈತಿಕ ಸಂಬಂಧ ಮತ್ತು ಕೌಟುಂಬಿಕ ಕಲಹ ಹಿನ್ನೆಲೆಯಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ರಾಮಮೂರ್ತಿ ನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಕಳ್ಳಭಟ್ಟಿ ದಂಧೆಗಾಗಿ ಅಬಕಾರಿ ಅಧಿಕಾರಿ ಕೊಲೆ ಮಾಡಿದ್ದ ರಮೇಶ್ ಜಾರಕಿಹೊಳಿ: ಎಂ.ಲಕ್ಷ್ಮಣ್ ಆರೋಪ
ಡಂಬಲ್ಸ್ ತೆಗೆದುಕೊಂಡು ತಲೆಗೆ ಹಲ್ಲೆ: ಇನ್ನು ಅಕ್ರಮ ಸಂಬಂಧ ಶಂಕೆಯ ಹಿನ್ನೆಯಲ್ಲಿ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಆಗಾಗ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗುತ್ತಿತ್ತು. ಮಕ್ಕಳು ಬೆಳಗ್ಗೆ ಶಾಲೆಗೆ ಹೋದಾಗ ಇಬ್ಬರ ಮಧ್ಯೆ ಶುರುವಾದ ಜಗಳ ಆರಂಭವಾಗಿದೆ. ಜಗಳದ ವೇಳೆ ಮನೆಯಲ್ಲಿದ್ದ ಡಂಬಲ್ಸ್ ತೆಗೆದುಕೊಂಡ ಪತ್ನಿ ಲಿದಿಯಾಗೆ ಪತಿ ಮೋರಿಸ್ ಹೊಡೆದಿದ್ದಾನೆ. ಇನ್ನು ಪತ್ನಿ ಯುವವರೆಗೂ ತಲೆಗೆ ನಿರಂತರವಾಗಿ ಡಂಬಲ್ಸ್ ನಿಂದ ಚಚ್ಚಿದ್ದಾನೆ. ಸದ್ಯ ಆರೋಪಿಯನ್ನ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆ ಸಂಬಂಧ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.