Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಬೇಗೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಮೃತ ಯುವತಿ ಶಿಲ್ಪಾ ಪೋಷಕರು ಈ ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು (ಜೂನ್ 3, 2023): ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಪತ್ನಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ವರದಿಯಾಗಿದೆ. ಬೇಗೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಅವರ ಪತ್ನಿ ಶಿಲ್ಪಾ ಅವರು ಮೃತಪಟ್ಟಿದ್ದು, ನೇಣು ಬಿಗಿದ ಸ್ಥೀತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬೇಗೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಮೃತ ಯುವತಿ ಶಿಲ್ಪಾ (33) ಪೋಷಕರು ಈ ಆರೋಪ ಮಾಡುತ್ತಿದ್ದಾರೆ. ಹತ್ತು ವರ್ಷಗಳಿಂದ ರಮೇಶ್ ಶಿಲ್ಪಾ ಪ್ರೀತಿ ಮಾಡುತ್ತಿದ್ದರು ಹಾಗೂ ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು. ಆದ್ರೆ ಮದುವೆಯಾಗಲು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಒತ್ತಾಯಪೂರ್ವಕವಾಗಿ ಮದುವೆಯಾಗಿರುವ ಅವರೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇದನ್ನು ಓದಿ: ಅರೇಬಿಕ್ ಶಾಲೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್: 6 ತಿಂಗಳ ಮೊದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿ!
ಪತಿ ಮದುವೆಗೆ ಒಪ್ಪದಿದ್ರೂ,, ಶಿಲ್ಪಾ ಹಠ ಬಿಡದೆ ಪೊಲೀಸರ ಸಮ್ಮುಖದಲ್ಲಿ ಮದುವೆಗೆ ಒಪ್ಪಿಸಿದ್ರು. ಪೊಲೀಸರ ಒತ್ತಾಯಕ್ಕೆ ಮಣಿದು ರಮೇಶ್ ಅವರು ಶಿಲ್ಪಾ ಜತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ರು. ಆದರೂ, ಮದುವೆ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂದು ಶಿಲ್ಪಾಗೆ ಪ್ರತ್ಯೇಕ ಮನೆ ವ್ಯವಸ್ಥೆ ಮಾಡಲಾಗಿತ್ತು ಎಂದೂ ವರದಿಯಾಗಿದೆ.
ಆದರೆ, ಜೀವನಕ್ಕೆ ಯಾವುದೇ ಅರ್ಥಿಕ ನೆರವು ನೀಡುತ್ತಿರಲಿಲ್ಲ. ಅಲ್ಲದೆ, ಮದುವೆ ಬಳಿಕ ಪದೇ ಪದೇ ಜಾತಿ ನಿಂದನೆ ಮಾಡುತ್ತಿದ್ದರು. ಹಾಗೆ, ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ಯಾ, ಸೆಟಲ್ಮೆಂಟ್ ಮಾಡಿಕೊಂಡು ಮನೆ ಬಿಟ್ಟು ಹೋಗುವಂತೆ ಪದೇ ಪದೇ ಪತಿ ಕಿರುಕುಳ ಕೊಡುತ್ತಿದ್ದ ಎಂದೂ ಕೇಳಿಬಂದಿದೆ.
ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ
ಆದರೂ, ಗಂಡ ಬೇಕು ಎಂದು ಶಿಲ್ಪಾ ಕಿರುಕುಳ ಸಹಿಸಿಕೊಂಡಿದ್ದರು. ಈ ಮಧ್ಯೆ, ನಿನ್ನೆ ರಾತ್ರಿ ಕುಟುಂಬದವರ ಜೊತೆ ಪೋನಿನಲ್ಲಿ ಮಾತಾಡಿದ್ದ ಶಿಲ್ಪಾ ಸ್ವಂತ ಖರ್ಚಿಗೆ ಹಣ ಹಾಕಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಆದ್ರೆ ಇಂದು ಬೆಳಗ್ಗೆ ಮನೆಯ ಮಾಲೀಕರು ತಮ್ಮ ಮಗಳು ಬಾಗಿಲು ತೆರೆಯುತ್ತಿಲ್ಲ ಎಂದು ಹೇಳಿದ್ದರು. ಅಲ್ಲದೆ, ನಾವು ಬರುವಷ್ಟರಲ್ಲಿ ಮಗಳು ಆಸ್ಪತ್ರೆ ಶವಾಗಾರದಲ್ಲಿ ಶವವಾಗಿದ್ದಾಳೆ. ನಮ್ಮ ಮಗಳು ಸಾಯುವ ಮನಸ್ಥಿತಿಯವಳಲ್ಲ. ಪತಿ ರಮೇಶ್ ಕೊಲೆ ಮಾಡಿರುವ ಅನುಮಾನವಿದೆ. ಕಾನೂನು ರೀತಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಮೃತ ಯುವತಿ ಶಿಲ್ಪಾ ಕುಟುಂಬದವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್: 15 ದಿನದ ಹಿಂದೆಯೇ ಸ್ಕೆಚ್; ಕೊಲೆಗೆ ಕಾರಣ ಹೀಗಿದೆ..