ಯುವಕರು ಹಾಗೂ ವಯಸ್ಕರಿಗೆ ಹೃದಯಾಘಾತ ಆಗುವ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವ ಗಂಭೀರ ಆರೋಪಕ್ಕೆ ಸಾಕ್ಷಿಯಾಗುವಂತೆ ಹಾಸನದಲ್ಲಿ ಕುಳಿತಲ್ಲಿಯೇ ವ್ಯಕ್ತಿಯೊಬ್ಬ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಹಾಸನ (ಮಾ.14): ಕೋವಿಡ್‌ ನಂತರದ ಅವಧಿಯಲ್ಲಿ ಯುವಕರು ಹಾಗೂ ವಯಸ್ಕರಿಗೆ ಹೃದಯಾಘಾತ ಆಗುವ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವ ಗಂಭೀರ ಆರೋಪಕ್ಕೆ ಸಾಕ್ಷಿಯಾಗುವಂತೆ ಹಾಸನದಲ್ಲಿ ಕುಳಿತಲ್ಲಿಯೇ ವ್ಯಕ್ತಿಯೊಬ್ಬ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ನಿನ್ನೆ ಸಂಜೆ ವೇಳೆ ಟೀ ಅಂಗಡಿಯ ಬಳಿ ಕುಳಿತಿದ್ದ ವ್ಯಕ್ತಿ ಫೋನ್‌ನಲ್ಲಿ ಮಾತನಾಡುತ್ತಿದ್ದನು. ಇದ್ದಕ್ಕಿದ್ದಂತೆ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಗೋಡೆಗೆ ಒರಗಿಕೊಂಡು ಕುಳಿತಲ್ಲಿಂದ ಕುಸಿದು ಬಿದ್ದಿದ್ದಾನೆ. ಇನ್ನು ಅಂಗಡಿಯ ಮುಂದೆ ಟೀ ಕುರಿಯಲು ಬಂದವರು ಹಾಗೂ ಟೀ ಅಂಗಡಿಯ ಮಾಲೀಕ ಗಾಬರಿಕಗೊಂಡು ಕುಸಿದುಬಿದ್ದ ವ್ಯಕ್ತಿಯನ್ನು ಮೇಲೆತ್ತಿ ನೀರು ಕುಡಿಸಿ ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ, ಹೃದಯಾಘಾತದಿಂದ ಎದೆಯನ್ನು ಹಿಡಿದುಕೊಂಡು ಕೆಲವು ಸೆಕೆಂಡುಗಳ ಕಾಲ ಒದ್ದಾಡುತ್ತಲೇ ಪ್ರಾಣವನ್ನು ಬಿಟ್ಟದ್ದಾನೆ.

ಕೋವಿಡ್ ಬಳಿಕ ಹೆಚ್ಚಾಯ್ತಾ ಹಾರ್ಟ್ಅಟ್ಯಾಕ್‌, ತಜ್ಞರು ಈ ಬಗ್ಗೆ ಏನ್‌ ಹೇಳ್ತಾರೆ?

ಒದ್ದಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ: ಹೊಳೆನರಸೀಪುರ ಪಟ್ಟಣದ ಅರಣ್ಯ ಕಛೇರಿ ಬಳಿ ಘಟನೆ ನಡೆದಿದೆ. ಇನ್ನು ಟೀ ಅಂಗಡಿಯ ಮುಂದೆ ಕುಳಿತ ಯುವಕನಿಗೆ ಹಠಾತ್‌ ಹೃದಯಾಘಾತವಾಗಿ ಒದ್ದಾಡುವ ದೃಶ್ಯ ಪಕ್ಕದಲ್ಲಿದ್ದ ಮೊಬೈಲ್‌ ಅಂಗಡಿಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಅಂಗಡಿ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ ಆಗಿದೆ. ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯನ್ನು ವಿರೂಪಾಕ್ಷ (40)  ಎಂದು ಗುರುತಿಸಲಾಗಿದೆ. ಮೊಬೈಲ್ ನಲ್ಲಿ ಮಾತಾಡುತ್ತಿರುವಾಗಲೇ ಈತನ ಪ್ರಾಣ ಪಕ್ಷಿ ಹಾರಿಹೋಗಿದೆ.

ಅಂತಿಮ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ: ವ್ಯಕ್ತಿ ವಿರುಪಾಕ್ಷ ಜೀವನದ ಅಂತಿಮ ಕ್ಷಣಗಳು ಅಂಗಡಿಯ ಮುಂದೆ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡ ನೋಡುತಿದ್ದಂತೆ ಯುವಕ ಕುಸಿದು ಬೀಳುವ ದೃಶ್ಯಗಳು ಕಂಡುಬಂದಿವೆ. ಇಲ್ಲಿ ಸಾವನ್ನಪ್ಪಿದ ವ್ಯಕ್ತಿ ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ಆಗಿದ್ದಾನೆ. ಸ್ಥಳದಲ್ಲಿದ್ದ ಇತೆ ಸಾರ್ವಜನಿಕರು ಕೂಡಲೇ ಆತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ, ಹೃದಯಾಘಾತದಿಂದ ಈತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. 

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಜಿ ಉದ್ಯೋಗಿ ಮನೋಹರ್‌ ಹೃದಯಾಘಾತಕ್ಕೆ ಬಲಿ

ಮೆಡಿಕಲ್‌ ಶಾಪ್‌ನಲ್ಲಿ ಕೆಲಸ: ಹಾಸನದಲ್ಲಿ ಹಠಾತ್‌ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯು ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಗಳ ಪರಿಚಯವೇನೂ ಇಲ್ಲವೆಂದಿಲ್ಲ. ಮೃತ ವಿರುಪಾಕ್ಷ ಹೊಳೆನರಸೀಪುರದ ಬಡಾವಣೆಯೊಂದರಲ್ಲಿ ಮೆಡಿಕಲ್‌ ಶಾಪ್‌ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದನು. ಆದರೆ, ಈಗ ಈತನಿಗೇ ಹಠಾತ್‌ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಬಡಾವಣೆಯ ನಿವಾಸಿಗಳಿಗೆ ತೀವ್ರ ಆತಂಕ ಎದುರಾಗಿದೆ. ಮನೆಯ ಜವಾಬ್ದಾರಿಯನ್ನು ಹೊತ್ತು ಜೀವನಕ್ಕೆ ಆಸರೆಯಾಗಿದ್ದ ವಿರುಪಾಕ್ಷ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.