ಬೆಂಗಳೂರು(ಡಿ.16): ಸಹ​ಪಾಠಿ ಯುವ​ತಿ​ಯನ್ನು ಔತ​ಣ​ಕ್ಕೆಂದು ಕರೆದು ಲೈಂಗಿಕ ದೌರ್ಜನ್ಯ ಎಸ​ಗಿದ ಆರೋ​ಪದ ಮೇಲೆ ಎಂಜಿ​ನಿ​ಯ​ರಿಂಗ್‌ ವಿದ್ಯಾ​ರ್ಥಿ​ಯನ್ನು ರಾಜ​ರಾ​ಜೇ​ಶ್ವ​ರಿ​ನ​ಗರ ಠಾಣೆ ಪೊಲೀ​ಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರ​ತ ಮೂಲದ ತುಷಾರ್‌ (23) ಎಂಬ ಎಂಜಿ​ನಿ​ಯ​ರಿಂಗ್‌ ವಿದ್ಯಾ​ರ್ಥಿ​ಯನ್ನು ವಶಕ್ಕೆ ಪಡೆ​ಯ​ಲಾ​ಗಿದ್ದು, ಈ ಸಂಬಂಧ ಸಂತ್ರಸ್ತ ಯುವತಿ ದೂರು ನೀಡಿ​ದ್ದಾರೆ ಎಂದು ಪೊಲೀ​ಸರು ಹೇಳಿ​ದ​ರು.

ಸಂತ್ರಸ್ತೆ ಹಾಗೂ ಆರೋಪಿ ನಗರದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜರಾಜೇಶ್ವರಿನಗರದ ಅಪಾ​ರ್ಟ್‌​ಮೆಂಟ್‌ನ ಫ್ಲ್ಯಾಟ್‌​ನಲ್ಲಿ ಆರೋಪಿ ವಾಸ​ವಾ​ಗಿ​ದ್ದಾನೆ. ಅದೇ ಫ್ಲ್ಯಾಟ್‌​ನಲ್ಲಿ ಡಿ.9ರಂದು ಔತಣಕೂಟ ಇಟ್ಟುಕೊಂಡಿದ್ದರು. ಯುವತಿ ಸೇರಿ ಎಲ್ಲ ಸಹಪಾಠಿಗಳನ್ನು ಆರೋಪಿ, ಔತಣಕೂಟಕ್ಕೆ ಆಹ್ವಾನಿಸಿದ್ದ. ತನ್ನ ಮನೆಗೆ ಬಂದಿದ್ದ ಸ್ನೇಹಿ​ತರ ಜತೆ ಆರೋ​ಪಿ ತಡರಾತ್ರಿ ಒಂದು ಗಂಟೆಯವರೆಗೂ ಮದ್ಯ ಕುಡಿದು ಊಟ ಮಾಡಿದ್ದಾನೆ ಎಂದು ಪೊಲೀ​ಸರು ತಿಳಿ​ಸಿ​ದ್ದಾ​ರೆ.

ಬ್ರೇಕಪ್‌ ಬಳಿಕ ಸ್ತ್ರೀಯರು ರೇಪ್‌ ದೂರು ನೀಡ್ತಾರೆ: ಮಹಿಳಾ ಆಯೋಗ ಅಧ್ಯಕ್ಷೆ!

ಬಳಿಕ ತಡರಾತ್ರಿಯಾಗಿದ್ದರಿಂದ ಎಲ್ಲ ವಿದ್ಯಾ​ರ್ಥಿ​ಗಳು ಆರೋ​ಪಿಯ ಮನೆ​ಯಲ್ಲೇ ಮಲ​ಗಿ​ದ್ದರು. ಯುವತಿ ಪ್ರತ್ಯೇಕ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದರು. ಆಗ ಕೊಠಡಿಗೆ ಹೋಗಿದ್ದ ಆರೋಪಿ, ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ​ದ್ದಾ​ನೆ. ಎಚ್ಚರಗೊಂ​ಡ ಯುವತಿ ಜೋರಾ​ಗಿ ಕೂಗಿ​ಕೊಂಡಿ​ದ್ದಾರೆ. ಅಲ್ಲ​ದೆ, ಈ ಸಂಬಂಧ ಪೊಲೀಸ್‌ ಠಾಣೆ​ಯ​ಲ್ಲಿ ದೂರು ನೀಡಿದ್ದರು. ಹೀಗಾಗಿ ಆರೋ​ಪಿ​ಯ​ನ್ನು ವಶಕ್ಕೆ ಪಡೆದು ವಿಚಾ​ರಣೆ ನಡೆ​ಸ​ಲಾ​ಗು​ತ್ತಿದೆ ಎಂದು ಪೊಲೀ​ಸರು ಹೇಳಿ​ದ​ರು.