Asianet Suvarna News Asianet Suvarna News

ನಡೆದುಕೊಂಡು ಹೋಗುವಾಗ ಕ್ರೇನ್‌ ಹರಿದು ವಿದ್ಯಾರ್ಥಿನಿ ದಾರುಣ ಸಾವು, ಸ್ಥಳೀಯರ ಪ್ರತಿಭಟನೆ

ಕ್ರೇನ್ ವಾಹನ ಚಾಲಕನ ಬೇಜವಾಬ್ದಾರಿಯಿಂದ  ವಿದ್ಯಾರ್ಥಿನಿ ಮೇಲೆ ಕ್ರೇನ್ ಹರಿದು  ಸಾವನ್ನಪ್ಪಿರುವ ದಾರುಣ  ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲ ಗೇಟ್ ಬಳಿಯ ನಡೆದಿದೆ.

Student killed in crane  accident at bengaluru gow
Author
First Published Nov 4, 2022, 6:46 PM IST

ಕೆ.ಆರ್.ಪುರಂ (ನ.4): ಕ್ರೇನ್ ವಾಹನ ಚಾಲಕನ ಬೇಜವಾಬ್ದಾರಿಯಿಂದ  ವಿದ್ಯಾರ್ಥಿನಿ ಮೇಲೆ ಕ್ರೇನ್ ಹರಿದು  ಸಾವನ್ನಪ್ಪಿರುವ ದಾರುಣ  ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲ ಗೇಟ್ ಬಳಿಯ ನಡೆದಿದೆ. ಘಟನೆ ಖಂಡಿಸಿ ಸುರಕ್ಷಿತ ರಸ್ತೆಗಳಿಗಾಗೀ ಮತ್ತು ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ರಸ್ತೆ ಗುಂಡಿಗಳಿಂದ. ಜನ ಮೃತಪಡುತ್ತಿರುವುದು ಬೆಂಗಳೂರು ಕುಖ್ಯಾತಿಗೆ ಒಳಗಾಗುತ್ತಿದ್ದರೆ, ಹೊರವಲಯದ ಮಹದೇವಪುರ ಗ್ರಾಮಾಂತರ ಭಾಗದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಮಂಗಲ ಬಳಿಯಿರುವ  ಜೈನ್ ಸ್ಕೂಲ್ ಬಳಿ ಅವೈಜ್ಞಾನಿಕ ರಸ್ತೆಗಳಿಂದಾಗಿ ಪುಟ್ ಪಾತ್ ಗಳು ಒತ್ತುವರಿ ಮತ್ತು ರಸ್ತೆಗಳಲ್ಲಿ ವೇಗ ನಿಯಂತ್ರಣವಿಲ್ಲದಿರುವುದರಿಂದ  ವಿದ್ಯಾರ್ಥಿನಿ ಕುಮಾರಿ ನೂರ್ ಫಿಜ (19) ಮೃತಪಟ್ಟಿದ್ದಾರೆ.  ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್- ಹೊಸಕೋಟೆ ಮಾರ್ಗದ ಕನ್ನಮಂಗಲ ಗೇಟ್ ನಿಂದ ಕನ್ನಮಂಗಲ ಗ್ರಾಮದ ಕಡೆಗೆ ಚಲಿಸುತ್ತಿದ್ದ ಕ್ರೇನ್ ಚಾಲಕನ ಅಜಾಗರೂಕತೆಯಿಂದ ಯುವತಿಯ ಮೇಲೆ ಹರಿದು ದಾರುಣ ಘಟನೆ ನಡೆದಿದ್ದು, ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇನ್ನೂ ತೀವ್ರ ರಕ್ತಗಾಯದಿಂದ ಬಳಲುತ್ತಿದ್ದ ಯುವತಿಯನ್ನು ಸಮೀಪದ ವೈದೇಹಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿ ನಂತರ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. 

ಇನ್ನೂ ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ವೈಟ್ ಫೀಲ್ಡ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ನೂರ್ ಕುಟುಂಬಕ್ಕೆ ಪರಿಹಾರ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

 ವೃದ್ಧ ಸಾವಿನ ಬಗ್ಗೆ ಮಗಳಿಗೆ ಸಂಶಯ: ಉಡುಪಿಯ ಬ್ರಹ್ಮಾವರದ ಇಲ್ಲಿನ ಹಾವಂಜೆಯಲ್ಲಿ ವೃದ್ಧೆಯೋರ್ವರು ಬೆಂಕಿ ಅನಾಹುತದಿಂದ ಮೃತಪಟ್ಟಿದ್ದು, ಇದೀಗ ಆಕೆಯ ಮಗಳು ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬ್ರಹ್ಮಾವರ ಠಾಣೆಗೆ ದೂರು ದಾಖಲಿಸಿದ್ದಾರೆ. ಜಲಜಾ ನಾಯ್‌್ಕ (69) ಮೃತರು. ಅವರು ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬುಧವಾರ ಬೆಳಗ್ಗೆ 5.30 ರ ಸುಮಾರಿಗೆ ಬೆಂಕಿ ತಗಲಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗ ಮನೆಯಲ್ಲಿದ್ದ. ಮೃತರ ಶವ ಮಂಚದ ಕೆಳಗೆ ಕಂಡುಬಂದಿದ್ದು, ಮಂಚ ಸುಟ್ಟು ಕರಕಲಾಗಿದೆ.

ಆಧಾರ್‌ ಕಾರ್ಡ್‌ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಇಬ್ಬರು ಮಕ್ಕಳು ಸಾವು

ಮೊದಲಿಗೆ ಪೊಲೀಸರು ಅಗ್ನಿ ಆಕಸ್ಮಿಕ ಎಂದು ಭಾವಿಸಿದ್ದರು. ಆದರೆ ಮೃತರ ಮಗಳು ಇದು ಆಕಸ್ಮಿಕ ಅಲ್ಲ, ಅಹಸಜ ಸಾವು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ವೃತ್ತನಿರೀಕ್ಷಕರ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಮಂಗಳೂರಿನಿಂದ ಆರ್‌ಎಫ್‌ಎಸ್‌ಎಲ್‌ ತಂಡ ಹಾಗು ಮಣಿಪಾಲದ ಕೆ.ಎಂ.ಸಿ.ಯ ಫಾರೆನ್ಸಿಕ್‌ ತಜ್ಞರು ಸ್ಥಳಕ್ಕೆ ಬಂದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

Udupi: ಹಾವಿನ ವಿಷ ಚುಚ್ಚಿ ಮಡದಿಯನ್ನು ಕೊಂದ ಪ್ರಕರಣ, ಆರೋಪಿ ವೈದ್ಯ ಖುಲಾಸೆ

ನಿವೃತ್ತ ಶಿಕ್ಷಕಿ ಅನುಮಾನಾಸ್ಪದ ಸಾವು: ಒಂಟಿಯಾಗಿ ವಾಸವಿದ್ದ ನಿವೃತ್ತ ಶಿಕ್ಷಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಇಲ್ಲಿನ ಶಾಂತಿನಗರದಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಕಿ ಸುಶೀಲಮ್ಮ(64) ಎಂಬುವರೇ ಮೃತ ಮಹಿಳೆ. ಮನೆಯ ಅಡುಗೆ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಯಾರಾದ್ರು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಮೃತರ ತಲೆ ಹಾಗೂ ಮೂಗಿನಲ್ಲಿ ರಕ್ತಸ್ರಾವವಾಗಿದೆ. ವೈದ್ಯರ ಪ್ರಕಾರ ರಕ್ತದೊತ್ತಡ ಹೆಚ್ಚಾಗಿ ತಲೆಸುತ್ತು ಬಂದು ಬಿದ್ದಾಗ ತಲೆಗೆ ಗಾಯಗಳಾಗಿ ಮೂಗಿನಲ್ಲಿ ರಕ್ತ ಬಂದಿದೆ ಅನ್ನೋ ಮಾಹಿತಿ ನೀಡಿದ್ದಾರೆ.

ಗಂಡ ಹಾಗೂ ಮಕ್ಕಳು ಯಾರೂ ಇಲ್ಲದ ಸುಶೀಲಮ್ಮ ದೂರದ ಸಂಬಂಧಿಕರು ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios