ಎದೆನೋವು ಎಂದರೂ ಗದರಿಸಿ ಕೂರಿಸಿದ ಶಿಕ್ಷಕ. ತರಗತಿಯಲ್ಲೇ ವಿದ್ಯಾರ್ಥಿ ಸಾವು!
ತರಗತಿಯಲ್ಲಿ ವಿದ್ಯಾರ್ಥಿಗೆ ಎದೆನೋವು ಕಾಣಿಸಿಕೊಂಡಿದ್ದು, ಈ ಬಗ್ಗೆ ಶಿಕ್ಷಕನಿಗೆ ತಿಳಿಸಿದರೂ ಗದರಿಸಿ ವಿದ್ಯಾರ್ಥಿಯನ್ನು ತರಗತಿಯಲ್ಲೇ ಕೂರಿಸಿದ ಪರಿಣಾಮ ಎದೆನೋವು ತೀವ್ರಗೊಂಡು ಕುಸಿದುಬಿದ್ದು ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಶಹಾಉರ ನಗರದ ಖಾಸಗಿ ವಸತಿ ಶಾಲೆಯಲ್ಲಿ ನಡೆದಿದೆ.
ಯಾದಗಿರಿ (ಸೆ.19): ತರಗತಿಯಲ್ಲಿ ವಿದ್ಯಾರ್ಥಿಗೆ ಎದೆನೋವು ಕಾಣಿಸಿಕೊಂಡಿದ್ದು, ಈ ಬಗ್ಗೆ ಶಿಕ್ಷಕನಿಗೆ ತಿಳಿಸಿದರೂ ಗದರಿಸಿ ವಿದ್ಯಾರ್ಥಿಯನ್ನು ತರಗತಿಯಲ್ಲೇ ಕೂರಿಸಿದ ಪರಿಣಾಮ ಎದೆನೋವು ತೀವ್ರಗೊಂಡು ಕುಸಿದುಬಿದ್ದು ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಶಹಾಉರ ನಗರದ ಖಾಸಗಿ ವಸತಿ ಶಾಲೆಯಲ್ಲಿ ನಡೆದಿದೆ.
ಚೇತನ್(17) ಮೃತ ವಿದ್ಯಾರ್ಥಿ. ಹತ್ತನೇ ತರಗತಿ ಓದುತ್ತಿದ್ದ ಬಾಲಕ. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ಮೃತ ವಿದ್ಯಾರ್ಥಿ. ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಿನ್ನೆ ತರಗತಿಯಲ್ಲಿ ಕಿರುಪರೀಕ್ಷೆ ಇದ್ದುದರಿಂದ ಅನಾರೋಗ್ಯ ನಡುವೆ ಶಾಲೆಗೆ ಬಂದಿದ್ದ ವಿದ್ಯಾರ್ಥಿ. ಕಿರುಪರೀಕ್ಷೆ ಬರೆಯುವಾಗಲೂ ವಿಪರೀತ ವಾಂತಿ ಮಾಡಿಕೊಂಡಿದ್ದ ಚೇತನ್. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ. ಬೇಗ ಮನೆಗೆ ತೆರಳಲು ತನಗೆ ಎದೆ ನೋವು ಆಗುತ್ತಿರುವ ಬಗ್ಗೆ ಶಿಕ್ಷಕನಿಗೆತಿಳಿಸಿದ್ದ. ಆದರೆ ಪರೀಕ್ಷೆ ವೇಳೆ ಎದೆನೋವು ಎಂದು ನಾಟಕ ಮಾಡುತ್ತಾನೆ ಗದರಿಸಿ ತರಗತಿಯಲ್ಲಿ ಕೂರಿಸಿದ ಶಿಕ್ಷಕ. ಇತ್ತ ಚೇತನ್ ಸಹೋದರಿ ಸಹ ಪೋಷಕರಿಗೆ ಕರೆ ಮಾಡಲು ಬಿಡಿ ಎಂದು ವಿನಂತಿಸಿಕೊಂಡಿದ್ದಾಳೆ. ಅವಳಿಗೆ ಗದರಿಸಿರುವ ಶಿಕ್ಷಕ.\
ಎದೆಯಲ್ಲಿ ನೋವು ಅನುಭವಿಸುತ್ತ ತರಗತಿಯಲ್ಲಿ ಕೂತ ವಿದ್ಯಾರ್ಥಿಗೆ ಇದ್ದಕ್ಕಿದ್ದಂತೆ ಎದೆನೋವು ತೀವ್ರಗೊಂಡು. ತರಗತಿಯಲ್ಲೇ ಮೃತಪಟ್ಟಿರುವ ವಿದ್ಯಾರ್ಥಿ. ವಿದ್ಯಾರ್ಥಿ ಕುಸಿದುಬಿಳುತ್ತಿದ್ದಂತೆ ತರಗತಿಯೇ ವಿದ್ಯಾರ್ಥಿಗಳೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ವಿದ್ಯಾರ್ಥಿಯ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ! ರೇಪ್ ಕೇಸ್ ಹಾಕಿದ್ದಕ್ಕೆ ದಲಿತರಿಗೆ ಬಹಿಷ್ಕಾರ! ಆಡಿಯೋ ವೈರಲ್
ಮಗ ಮೃತಪಟ್ಟ ಸುದ್ದಿ ತಿಳಿದು ಪೋಷಕರು ಅಕ್ರಂದನ ಮುಗಿಲು ಮುಟ್ಟಿತು. ನನ್ನ ಮಗನ ಸಾವಿಗೆ ಶಿಕ್ಷಕರೇ ಕಾರಣ, ಶಿಕ್ಷಕರ ನಿರ್ಲಕ್ಷ್ಯದಿಂದಲೇ ಮಗನ ಸಾವು ಆಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.