ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ! ರೇಪ್ ಕೇಸ್ ಹಾಕಿದ್ದಕ್ಕೆ ದಲಿತರಿಗೆ ಬಹಿಷ್ಕಾರ! ಆಡಿಯೋ ವೈರಲ್
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಕ್ಕೆ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ (ಸೆ.13): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಕ್ಕೆ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿದೆ.
ದಲಿತ ಕುಟುಂಬವನ್ನು ಬಹಿಷ್ಕರಿಸಿ ಊರಿನ ಅಂಗಡಿಗಳಲ್ಲಿ ಸಾಮಗ್ರಿ ನೀಡದಂತೆ ಸವರ್ಣೀಯರಿಂದ ಕಟ್ಟಪ್ಪಣೆ ಮಾಡಲಾಗಿದೆ. ಮಕ್ಕಳಿಗೆ ಪೆನ್ನು, ನೋಟುಬುಕ್, ದಿನಸಿ ಕಿರಾಣಿ ದೈನಂದಿನ ಸಾಮಗ್ರಿ ಸಿಗದ ಪರಿಸ್ಥಿತಿಯಲ್ಲಿರುವ ಕುಟುಂಬ. ಗ್ರಾಮದಲ್ಲಿ ಬೆರಳೆಣಿಕೆಯಷ್ಟಿರುವ ದಲಿತರು. ಇದೀಗ ಸಾಮಾಜಿಕ ಬಹಿಷ್ಕಾರದಿಂದ ಬಪ್ಪರಗಾ ಗ್ರಾಮದ ದಲಿತರಲ್ಲಿ ಆತಂಕ ಎದುರಾಗಿದೆ.
ಬಾಲಕಿ ಮೇಲೆ ರೇಪ್: ಕೇಸ್ ಹಾಕಿದ್ದಕ್ಕೆ ದಲಿತರಿಗೆ ಯಾದಗಿರಿಯಲ್ಲಿ ಬಹಿಷ್ಕಾರ..!
ಘಟನೆ ಹಿನ್ನೆಲೆ:
15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿದ್ದ ಸವರ್ಣೀಯ ಯುವಕ. ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಯುವಕನಿಂದ ನಿರಂತರ ಅತ್ಯಾಚಾರ ಹಿನ್ನೆಲೆ ಯುವತಿ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದಳು. ಯುವತಿ ಪೋಷಕರು ಯುವಕನೊಂದಿಗೆ ಮದುವೆ ಬಗ್ಗೆ ಮಾತುಕತೆಗೆ ಕರೆದಿದ್ದಾರೆ. ಆದರೆ ಮದುವೆಗೆ ನಿರಾಕರಿಸಿದ್ದ ಯುವಕ. ಪ್ರಕರಣ ಸಂಬಂಧ ಸಂಧಾನಕ್ಕೆ ಬಾರದ್ದರಿಂದ ಯುವಕನ ವಿರುದ್ಧ ಆಗಷ್ಟ 12 ರಂದು ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ್ದ ಬಾಲಕಿಯ ಪೋಷಕರು. ರೇಪ್ ಕೇಸ್ ದಾಖಲಿಸಿದ್ದಕ್ಕೆ ಆಕ್ರೋಶಗೊಂಡಿರುವ ಸವರ್ಣೀಯ ಮುಖಂಡರು. ಇದೇ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ.