*   ಬೆಂಗಳೂರಿನ ಮುರುಗೇಶ್‌ಪಾಳ್ಯದಲ್ಲಿ ನಡೆದ ಘಟನೆ*  ಅಕ್ಕ, ಅಪ್ಪನಿಗೆ ಕರೆ ಮಾಡಿ ಕಟ್ಟಡದಿಂದ ಜಿಗಿತ*  ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ  

ಬೆಂಗಳೂರು(ಮಾ.06): ಪರೀಕ್ಷೆಯಲ್ಲಿ(Exam) ನಕಲು ಮಾಡುವಾಗ ಸಿಕ್ಕಿ ಬಿದ್ದು ಕಾಲೇಜಿನಿಂದ ಡಿಬಾರ್‌ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು(Student) ಐದು ಅಂತಸ್ತಿನ ಪಿ.ಜಿ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ(Suicide)ಮಾಡಿಕೊಂಡಿರುವ ಘಟನೆ ಶುಕ್ರವಾರ ಜೀವನ ಭೀಮಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುರುಗೇಶ್‌ಪಾಳ್ಯದ ಭವ್ಯಾ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ ಶುಕ್ರವಾರ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರು. ಕಾಲೇಜಿನಿಂದ ವಾಪಸು ಬಂದ ಆಕೆ ಸಂಜೆ 4.30ರ ಸುಮಾರಿಗೆ ಅಮರಜ್ಯೋತಿ ಬಡಾವಣೆಯಲ್ಲಿ ಐದು ಅಂತಸ್ತಿನ ಪಿ.ಜಿ. ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್‌(Police) ಅಧಿಕಾರಿಗಳು ತಿಳಿಸಿದ್ದಾರೆ.

ಚರ್ಚ್‌ನಲ್ಲಿ ಹೆಂಡತಿ ಮಕ್ಕಳಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆ: ಐವರ ದಾರುಣ ಸಾವು

ಭವ್ಯಾ ಆತ್ಮಹತ್ಯೆಗೂ ಮುನ್ನ ಸಹೋದರಿ ದಿವ್ಯಾ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ, ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದಿದ್ದು ಕಾಲೇಜಿನಿಂದ ಡಿಬಾರ್‌(Dibar) ಆಗಿದ್ದಾನೆ. ಇದರಿಂದ ಮನಸಿಗೆ ನೋವಾಗಿದೆ. ನಾನು ಬದುಕುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ. ಬಳಿಕ ತಂದೆ ಹಾಗೂ ಸಹೋದರಿ ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಭವ್ಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯಕ್ಕೆ ಆತ್ಮಹತ್ಯೆಗೂ ಮುನ್ನ ಸಹೋದರಿ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ ಪರೀಕ್ಷೆ ನಕಲು ಮಾಡುವಾಗ ಸಿಕ್ಕಿಬಿದ್ದು ಡಿಬಾರ್‌ ಆಗಿರುವ ವಿಷಯ ತಿಳಿಸಿದ್ದಳು ಎಂಬುದು ತಿಳಿದು ಬಂದಿದೆ. ಜೀವನಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ: ರೈತ ಆತ್ಮಹತ್ಯೆ

ಮೂಡಿಗೆರೆ: ಸಾಲಬಾಧೆ(Loan) ತಾಳಲಾರದೇ ತಾಲೂಕಿನ ಗಬ್ಬಳ್ಳಿ ಗ್ರಾಮದ ರೈತ ಸಂಜಯ್‌ (30) ಕಳೆದ 4 ದಿನದ ಹಿಂದೆ ತನ್ನ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಶನಿವಾರ ಬೆಂಗಳೂರು(Bengaluru) ಆಸ್ಪತ್ರೆಯಲ್ಲಿ ನಿಧನರಾದರು.

ಸಂಜಯ್‌ ಅವರು ಬ್ಯಾಂಕ್‌ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಸಾಲಭಾದೆ ತಾಳಲಾರದೇ 4 ದಿನಗಳ ಹಿಂದೆ ಗಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿದ್ದ ಕೊಳೆನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದ ಕೂಡಲೇ ಮನೆಯವರು ಹಾಸನ ಆಸ್ಪತ್ರೆಯಲ್ಲಿ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಂಜಯ್‌ ನಿಧನರಾದರು. ಅವರಿಗೆ ಮುಂಬರುವ 2 ತಿಂಗಳ ನಂತರ ವಿವಾಹ ನಿಶ್ಚಯವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಫೇಸ್‌ಬುಕ್‌ ಸ್ನೇಹಿತನ ಮೇಲೆ ಪ್ರೀತಿ, ಮದುವೆಯಾದ ನಾಲ್ಕೇ ವರ್ಷಕ್ಕೆ ಶವವಾದ ಮಹಿಳೆ!

ಸಾಲ ತೀರಿಸಲಾಗದೆ ನೇಣು ಬಿಗಿದು ಆತ್ಮಹತ್ಯೆ

ಮಣಿಪಾಲ(Manipal): ಇಲ್ಲಿನ ಹೆರ್ಗ ಗ್ರಾಮದ ಕೊಡಂಗೆ ನಿವಾಸಿ ಯಶೋಧರ ಶೆಟ್ಟಿ, ಮಾಡಿದ ಸಾಲವನ್ನು ತೀರಿಸಲಾಗದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಈ ಹಿಂದೆ ಬ್ಯಾಂಕ್‌ ಸಾಲ ಮಾಡಿದ್ದು, ತೀರಿಸಲಾಗದಿದ್ದಾಗ ಭಾವಂದಿರು ಸಾಲವನ್ನು ತೀರಿಸಿದ್ದರು. ಆ ಬಳಿಕವೂ ಬ್ಯಾಂಕ್‌, ಫೈನಾಸ್ಸ್‌ ಮತ್ತು ಇತರರಲ್ಲಿ ಕೈಸಾಲ ಮಾಡಿದ್ದು ತೀರಿಸಲಾಗಿಲ್ಲ. ಇದೇ ಕಾರಣಕ್ಕೆ ಜಿಗುಪ್ಸೆಗೊಂಡು ಗುರುವಾರ ಮುಂಜಾನೆ ನೇಣು ಬಿಗಿದುಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲು ನೋವು: ಮರ್ಮಾಂಗ ಕೊಯ್ದುಕೊಂಡು ಆತ್ಮಹತ್ಯೆ

ಮಸ್ಕಿ (ರಾಯಚೂರು): ಕಾಲು ನೋವಿನ ಬಾಧೆ ತಾಳಲಾರದೇ ವ್ಯಕ್ತಿಯೊಬ್ಬ ಮರ್ಮಾಂಗ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆ ತಾಲೂಕಿನ ಇರಕಲ್‌ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ವಾನಪ್ಪ(62) ಆತ್ಮಹತ್ಯೆ ಮಾಡಿಕೊಂಡವ. ಹಲವು ದಿನಗಳ ಹಿಂದೆ ಮುಳ್ಳು ಚುಚ್ಚಿದ್ದರಿಂದ ಕಾಲು ನೋವಿನಿಂದ ಬಳಲುತ್ತಿದ್ದ ಗ್ವಾನಪ್ಪ ಸೂಕ್ತ ಚಿಕಿತ್ಸೆ ಇಲ್ಲದೇ ನರಳುತ್ತಿದ್ದ. ಕಾಲುನೋವಿನ ಬಾಧೆ ತಾಳದೆ ಬುಧವಾರ ಮರ್ಮಾಂಗ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕವಿತಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.