ಅಮಾಯಕರನ್ನ ಯಾಮಾರಿಸಿ ಕೋಟ್ಯಂತರ ರೂ. ದೋಚಿದ ಖತರ್ನಾಕ್ ದಂಪತಿ!

ದುಡಿಮೆಮಾಡಿ ಕೂಡಿಟ್ಟ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಖರೀದಿ, ಮನೆ ಕಟ್ಟುವ ಆಸೆಯಲ್ಲಿದ್ದ ಮುಗ್ಧ ಜನರನ್ನ ಚಾಣಾಕ್ಷತನದಿಂದ ನಂಬಿಸಿ ನಮ್ಮ ಬಳಿ ಹೂಡಿಕೆ ಮಾಡಿದ್ರೆ ಅಧಿಕ ಹಣ ಕೊಡುವೆ ಎಂದು  ಬರೊಬ್ಬರಿ ಎರಡು ಕೋಟಿಗೂ ಅಧಿಕ ಹಣದೊಂದಿಗೆ ದಂಪತಿ ರಾತ್ರೋರಾತ್ರಿ ನಾಪತ್ತೆ  ಆಗಿರುವ ಘಟನೆ ನೆಲಮಂಗಲದ ಬಳಿಯ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

Couple cheated of crores of rupees to villagers at nelamangala bengaluru rav

ನೆಲಮಂಗಲ (ನ.4): ದುಡಿಮೆಮಾಡಿ ಕೂಡಿಟ್ಟ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಖರೀದಿ, ಮನೆ ಕಟ್ಟುವ ಆಸೆಯಲ್ಲಿದ್ದ ಮುಗ್ಧ ಜನರನ್ನ ಚಾಣಾಕ್ಷತನದಿಂದ ನಂಬಿಸಿ ನಮ್ಮ ಬಳಿ ಹೂಡಿಕೆ ಮಾಡಿದ್ರೆ ಅಧಿಕ ಹಣ ಕೊಡುವೆ ಎಂದು  ಬರೊಬ್ಬರಿ ಎರಡು ಕೋಟಿಗೂ ಅಧಿಕ ಹಣದೊಂದಿಗೆ ದಂಪತಿ ರಾತ್ರೋರಾತ್ರಿ ನಾಪತ್ತೆ  ಆಗಿರುವ ಘಟನೆ ನೆಲಮಂಗಲದ ಬಳಿಯ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ಪತಿ ಮುರಳಿ ಹಾಗೂ ಪತ್ತಿ ಕಲ್ಪನಾ ಕೋಟಿ ಕೋಟಿ ವಂಚಿಸಿರುವ ದಂಪತಿ.  ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಮನೆಕಟ್ಟಲು ಕೂಡಿಟ್ಟ ಹಣ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಬಾಡಿಗೆ ಮನೆಯ ಬಳಿ ಜಮಾಯಿಸುತ್ತಿರುವ ಮೋಸಹೋದ ಜನರು. ವಂಚಕರಿದ್ದ ಬಾಡಿಗೆ ಮನೆಯ ಬಳಿ ಕಣ್ಣೀರಿಡುತ್ತ ಹಿಡಿ ಶಾಪ ಹಾಕುತ್ತಿರುವ ಮಹಿಳೆಯರು 

ಕಾಂಬೋಡಿಯಾದಲ್ಲಿ ಸಿಲುಕಿದ ಚಿಕ್ಕಮಗಳೂರಿನ ಯುವಕ: ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಚಿವೆ ಕರಂದ್ಲಾಜೆ ಯತ್ನ

ಕಳೆದ 15 ವರ್ಷದಿಂದ ಇದೇ ಗ್ರಾಮದಲ್ಲಿ ವಾಸವಿದ್ದ ಮುರಳಿ ಹಾಗೂ ಕಲ್ಪನಾ ಎಂಬ ದಂಪತಿಗಳೇ ಸ್ಥಳೀಯ ಜನರನ್ನ ಚಾಣಾಕ್ಷತನದಿಂದ ವಿಶ್ವಾಸಕ್ಕೆ ಪಡೆದು ನಾವು ನಿಮ್ಮ ಹಣಕ್ಕೆ ಭದ್ರತೆ ರೀತಿಯಲ್ಲಿ ಚೀಟಿ ವ್ಯವಹಾರ ಮಾಡಿ ಕೊಡುತ್ತೇವೆ ಎಂದು ವ್ಯವಹಾರ ಮಾಡುತಿದ್ದರು. ಜನರು ಕೂಡಿಟ್ಟ ಹಣವನ್ನ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಕೊಳ್ಳಲು ಹಾಗೂ ಮನೆ ಕಟ್ಟುವ ಹೀಗೆ ಹತ್ತಾರು ಕನಸುಗಳನ್ನ ಕಂಡು ಜನರಿಗೆ ಈ ಕಿಲಾಡಿ ದಂಪತಿಗಳು ನಾಮಹಾಕಿದ್ದಾರೆ.

ನಂತರದಲ್ಲಿ ಈ ಐನಾತಿ ದಂಪತಿಗಳು ಚೀಟಿ ವ್ಯವಹಾರಗಳ ಜೊತೆಗೆ ಹೂಡಿಕೆಯನ್ನ ಆರಂಭಿಸಿದ್ದು ನಿಮ್ಮ ಹಣಕ್ಕೆ ಡಬಲ್ ಹಣ ಮಾಡಿಕೊಡುವ ಸಾಕಷ್ಟು ಆಸೆಯನ್ನ ತುಂಬಿ ಸಾಕಷ್ಟು ಬಡ ಹಾಗೂ ಮಧ್ಯಮ ವರ್ಗದ ಜನರನ್ನ ಟಾರ್ಗೆಟ್ ಮಾಡಿ ತಮ್ಮ ಮೋಸದ ಖೆಡ್ಡಾಕ್ಕೆ ತಳ್ಳಿ ಇಬ್ಬರು ರಾತ್ರೋರಾತ್ರಿ ಮಾದನಾಯಕನಹಳ್ಳಿಯ ಬಾಡಿಗೆ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. 

ಇತ್ತ ಹಣ ಕೊಟ್ಟವರು ಪ್ರತಿನಿತ್ಯ ಈಗ ಬರುತ್ತಾರೆ ಆಗ ಬರುತ್ತಾರೆ ಅಂತ ಮನೆ ಬಳಿ ಬಂದು ಹೋಗುತಿದ್ದು ಸಾಕಷ್ಟು ಆಸೆಯಲ್ಲಿದ್ದ ನೂರಾರು ಜನರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆರೋಪಿ ದಂಪತಿಗಳ ಪತ್ತೆ ಹಚ್ಚಿ ಹಾಗೂ ನ್ಯಾಯ ಒದಗಿಸುವಂತೆ ಮಾದನಾಯಕನಹಳ್ಳಿ ಪೊಲೀಸರ ಮೊರೆಹೋಗಿರುವ ಗ್ರಾಮಸ್ಥರು.

ಎಚ್ಚರ, ವಂಚಕರು ಹಿಂಗೂ ಯಾಮಾರಿಸ್ತಾರೆ; AnyDesk app ಡೌನ್ಲೋಡ್ ಮಾಡಿ 5 ಲಕ್ಷ ಕಳೆದುಕೊಂಡ ಐಎಎಸ್ ಅಧಿಕಾರಿ!

ಒಟ್ಟಾರೆ ಕೂಲಿನಾಲಿ ಮಾಡಿ ಕೂಡಿಟ್ಟ ಹಣ, ಬ್ಯಾಂಕ್ ಗಳಲ್ಲಿ ಸಾಲ ಮಾಡಿದ ಹಣ, ಒಡವೆ ಮಾರಿದ ಹಣ ಡಬಲ್ ಆಸೆಗೆ ಬಿದ್ದ ಜನರು, ಐನಾತಿ ದಂಪತಿಗಳ ಕಪಟ ಮೋಸದ ಜಾಲೆಯಲ್ಲಿ ಸಿಲುಕಿ ಇಂದು ನರಳಾಡುವಂತಾಗಿದೆ. ಇನ್ನಾದರು ಹೀಗೆ ಆಸೆ ಹುಟ್ಟಿಸುವ ಜನರಿಂದ ದೂರ ಇದ್ದರೆ ಒಳಿತು. ಇನ್ನಾದರು ಪೊಲೀಸರು ಈ ಖತರ್ ನಾಕ್ ದಂಪತಿಗಳನ್ನ  ಬಂಧಿಸಿ ನೊಂದವರಿಗೆ ನ್ಯಾಯ ಒದಗಿಸುತ್ತಾರ ಕಾದು ನೋಡಬೇಕಿದೆ

Latest Videos
Follow Us:
Download App:
  • android
  • ios