ಮಲತಾಯಿಯೊಬ್ಬಳು ಆರು ವರ್ಷದ ದತ್ತು ಪುತ್ರಿಯ ಮೇಲೆ ಬಿಸಿ ಎಣ್ಣೆ ಸುರಿದ ಭಯಾನಕ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆರು ವರ್ಷದ ಹಿಂದೆ ದಂಪತಿ ಮದುವೆಯಾಗಿದ್ದು ಮಕ್ಕಳಿರಲಿಲ್ಲ.

ಉತ್ತರಪ್ರದೇಶ: ಮಲತಾಯಿಯೊಬ್ಬಳು ಆರು ವರ್ಷದ ದತ್ತು ಪುತ್ರಿಯ ಮೇಲೆ ಬಿಸಿ ಎಣ್ಣೆ ಸುರಿದ ಭಯಾನಕ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆರು ವರ್ಷದ ಹಿಂದೆ ದಂಪತಿ ಮದುವೆಯಾಗಿದ್ದು ಮಕ್ಕಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಅಜಯ್‌ಕುಮಾರ್‌ ಆರು ತಿಂಗಳ ಹಿಂದಷ್ಟೇ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ಆದರೆ ಇದಕ್ಕೆ ಅಜಯ್‌ ಕುಮಾರ್ ಪತ್ನಿಯ ಸಮ್ಮತಿ ಇರಲಿಲ್ಲ. ಹೀಗಾಗಿ ಆಕೆ ದಿನವೂ ಪುಟ್ಟ ಬಾಲಕಿಯೊಂದಿಗೆ ಹಗೆ ಸಾಧಿಸುತ್ತಿದ್ದಳು. ಈ ನಡುವೆ ಜುಲೈ 13ರಂದು ಕೂಡ ಪುಟ್ಟ ಬಾಲಕಿಯೊಂದಿಗೆ ಜಗಳ ತೆಗೆದ ಆಕೆ ಮಗುವಿನ ಖಾಸಗಿ ಭಾಗಕ್ಕೆ ಬಿಸಿಎಣ್ಣೆ ಎರಚಿದ್ದಾಳೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 35 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಹಾಗೂ ಮಗುವಿನ ದತ್ತು ತಂದೆ ಅಜಯ್‌ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದರು. ಬಂಧಿತ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ತಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಜಯ್‌ಕುಮಾರ್ ಆಹಾರದ ಗಾಡಿಯೊಂದನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Bengaluru Crime: ಆಸ್ತಿಗಾಗಿ ತಂದೆಯನ್ನೇ ಮುಗಿಸಲು ಮಲತಾಯಿ ಪ್ಲಾನ್‌?: ಮಗನಿಂದಲೇ ದೂರು

ಈ ಬಗ್ಗೆ ಠಾಕೂರ್‌ ಗಂಜ್‌ನ ಸ್ಟೇಷನ್‌ ಹೌಸ್ ಆಫೀಸರ್, ಹರಿ ಶಂಕರ್ ಚಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪೂನಂ ಹಾಗೂ ಅಜಯ್‌ಕುಮಾರ್ ದಂಪತಿ ಮದುವೆಯಾಗಿ ಹಲವು ವರ್ಷಗಳಾಗಿದ್ದು, ಅವರಿಗೆ ಅವರದೇ ಆದ ಮಕ್ಕಳಿರಲಿಲ್ಲ. ಹೀಗಾಗಿ ಆರು ತಿಂಗಳ ಹಿಂದೆ ಇವರು ಮಗುವೊಂದನ್ನು ದತ್ತು ಪಡೆದಿದ್ದರು. ಆದರೆ ಪತ್ನಿ ಪೂನಂಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಮಗುವಿನ ಮೇಲೆ ಆಗಾಗ ತನ್ನ ದರ್ಪ ತೋರುತ್ತಿದ್ದ ಆಕೆ ಈ ಬಾರಿ ಮಗುವಿನ ಖಾಸಗಿ ಭಾಗದ ಮೇಲೆ ಬಿಸಿ ಎಣ್ಣೆ ಎರಚಿದ್ದಾಳೆ ಎಂದು ತಿಳಿಸಿದರು. 

ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಕಲಬುರಗಿಯಲ್ಲಿ ಇಂತಹದೇ ಘಟನೆಯೊಂದು ವರದಿಯಾಗಿದೆ. ಮಾತು ಕೇಳದ ಮಲಮಗನಿಗೆ ತಾಯಿ ಕಾದ ಕಬ್ಬಿಣದಿಂದ ಸುಟ್ಟು ಅಮಾನವೀಯತೆ ಮೆರೆದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ನಾಲವಾರ ಸ್ಟೇಷನ್ ಏರಿಯಾದಲ್ಲಿ ನಡೆದಿತ್ತು. ನಾಲವಾರ ತಾಂಡಾ ನಿವಾಸಿ ಮರೆಮ್ಮ ಎಂಬಾಕೆ ನಾಲ್ಕು ವರ್ಷದ ಮಗನ ಮೇಲೆ ವಿಕೃತಿ ಮೆರೆದ ಮಲತಾಯಿ. ಮಗು ಆಟವಾಡಲು ಪಕ್ಕದ ಮನೆಗಳಿಗೆ ಹೋಗುತ್ತಿದೆ ಎನ್ನುವ ಕಾರಣಕ್ಕೆ ಮಲತಾಯಿ ಈ ವಿಕೃತಿ ಮೆರೆದಿದ್ದಾಳೆ.

Step Mother Harassment : ಬೆಂಗಳೂರು, ಇವಳೆಂತಾ ತಾಯಿ... ಮಗನ ಮುಖಕ್ಕೆ ಖಾರದ ಮಸಾಲೆ!

ಕಾದ ಕೊಳವೆಯಿಂದ ಕೈಗೆ ಸುಟ್ಟು, ಮಂಚಕ್ಕೆ ಕಟ್ಟಿ ಹಾಕಿ ಈ ಮಹಾತಾಯಿ ವಿಕೃತಿ ಮೆರೆದಿದ್ದಳು. ಮಗುವಿನ ಕಿರುಚಾಟ ಕೇಳಿದ ಸ್ಥಳೀಯರು ಮನೆಗೆ ನುಗ್ಗಿ ಮಗುವನ್ನು ರಕ್ಷಿಸಿದ್ದಾರೆ. ನಂತರ ಮಲತಾಯಿಗೆ ಸ್ಥಳೀಯರು ಕ್ಲಾಸ್ ತಗೊಂಡಿದ್ದಾರೆ. ಬಳಿಕ ವಾಡಿ ಪೊಲೀಸ್‌ ಠಾಣೆಗೆ ಮಗುವನ್ನು ಸ್ಥಳೀಯರು ಒಪ್ಪಿಸಿದ್ದಾರೆ. ಸದ್ಯ ಮಗು ಚೈಲ್ಡ್ ಲೈನನವರ ಸುಪರ್ದಿಯಲ್ಲಿದೆ ಅಂತ ತಿಳಿದು ಬಂದಿದೆ. ಮರೆವ್ವನ ಗಂಡ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿದ್ದು, ಮರೆವ್ವಗೆ ತಿಂಗಳ ಹಿಂದಷ್ಟೆ ಹೆರಿಗೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ತನಗೆ ಮಗುವಾದ ಮೇಲೆ ಮಲ ಮಕ್ಕಳಿಗೆ ಈ ರೀತಿ ಕಿರುಕುಳ ನೀಡಲು ಶುರು ಮಾಡಿದ್ದಳು.