ಮಹಾರಾಷ್ಟ್ರದ ರಾಜ್ಯ ಮೀಸಲು ಪೊಲೀಸ್‌ ಪಡೆಯ ಯೋಧನೋರ್ವ  ಸಹೋದ್ಯೋಗಿಗೆ ಗುಂಡಿಕ್ಕಿ ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಮಹಾರಾಷ್ಟ್ರ: ಮಹಾರಾಷ್ಟ್ರದ ರಾಜ್ಯ ಮೀಸಲು ಪೊಲೀಸ್‌ ಪಡೆಯ ಯೋಧನೋರ್ವ ಸಹೋದ್ಯೋಗಿಗೆ ಗುಂಡಿಕ್ಕಿ ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ನಡೆದಿದೆ. ಎಸ್‌ಆರ್‌ಪಿಎಫ್‌ ಯೋಧನೊಬ್ಬ ಮೊದಲಿಗೆ ತನ್ನ ಸಹೋದ್ಯೋಗಿಯ ಮೇಲೆ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ. ಆತ ಸಾವನ್ನಪ್ಪುತ್ತಿದ್ದಂತೆ ತಾನು ಕೂಡ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. 

ಗಡ್ಚಿರೋಲಿಯ (Gadchiroli) ಅಹೇರಿ ತಹಸಿಲ್‌ನ (Aheri tehsil) ಮಾರ್ಪಲ್ಲಿ ಪೊಲೀಸ್ ಪೋಸ್ಟ್‌ನಲ್ಲಿ ಬುಧವಾರ ಸಂಜೆ 4.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ರಾಜ್ಯ ಮೀಸಲು ಪೊಲೀಸ್‌ ಪಡೆಯ ಗ್ರೂಪ್ 1 (ಪುಣೆ) ಯೋಧನೊಬ್ಬ ತನ್ನ ಸರ್ವೀಸ್ ರೈಫಲ್‌ನಿಂದ ಗುಂಡು ಹಾರಿಸಿಕೊಳ್ಳುವ ಮೊದಲು ತನ್ನ ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿದ. ಘಟನೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಶಿಕ್ಷಕಿಯ ಬಲಿ ಪಡೆದ ಭಯೋತ್ಪಾದಕರು!

ರಾಜ್ಯದ ಅಹ್ಮದ್‌ನಗರ ಜಿಲ್ಲೆಯ (Ahmednagar district ) ನಿವಾಸಿಗಳಾದ 35 ವರ್ಷ ಪ್ರಾಯದ ಶ್ರೀಕಾಂತ್ ಬೆರಾದ್ (Shrikant Berad) ತನ್ನ ಸಹೋದ್ಯೋಗಿ 33 ವರ್ಷದ ಬಂಡು ನೌತರ್ (Bandu Nauthar) ಎಂಬಾತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಘಟನೆಯ ಹಿಂದಿನ ಉದ್ದೇಶವನ್ನು ಪತ್ತೆ ಮಾಡಲಾಗುತ್ತಿದ್ದು, ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮೇ.31 ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಿಂದ ಕುಪಿತಗೊಂಡ ಭಯೋತ್ಪಾದಕರು ಮಹಿಳಾ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದಿದ್ದರು. ಕುಲ್ಗಾಮ್‌ನ ಗೋಪಾಲ್‌ಪೋರಾದಲ್ಲಿ ಸಾಂಬಾ ನಿವಾಸಿಯಾಗಿದ್ದ ರಜನಿ ರಾಜಕುಮಾರ್ ಎಂಬ ಶಿಕ್ಷಕಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದು, ಈಗಾಗಲೇ ಅನೇಕರು ಬಲಿಯಾಗಿದ್ದಾರೆ. 

ಹುಡುಗಿಯರಿಗೆ ಅಶ್ಲೀಲ ಮೇಸೆಜ್ ಆರೋಪ: ಸಹೋದ್ಯೋಗಿಗೆ ಚೂರಿ‌ ಇರಿದಿದ್ದ ನಾಲ್ವರ ಬಂಧನ!

ಮತ್ತೊಂದೆಡೆ, ಕಣಿವೆಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಕಳೆದ ಒಂದು ವಾರದಲ್ಲಿ 16 ಉಗ್ರರು ಹತರಾಗಿದ್ದಾರೆ.


ಮೇ 25- ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದವು. ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಕೂಡ ಹುತಾತ್ಮರಾಗಿದ್ದರು.

ಮೇ 26 - ಕುಪ್ವಾರದಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಕೊಂದರು.

ಮೇ 26- ಆವಂತಿಪೋರಾದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಕೊಂದರು. ನಟಿ ಅಮ್ರಿನ್ ಭಟ್ ಹತ್ಯೆಯಲ್ಲಿ ಈ ಭಯೋತ್ಪಾದಕರು ಭಾಗಿಯಾಗಿದ್ದರು.

ಮೇ 27- ಶ್ರೀನಗರದ ಸೌರಾದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಕೊಂದರು.

ಮೇ 28- ಆವಂತಿಪೋರಾದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಕೊಂದರು.

ಮೇ 29 - ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು.

ಮೇ 30 - ಅವಂತಿಪೋರಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ.