ಹಾವೇರಿ: ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿ ಸ್ಫೋಟ; ಚೆಲ್ಲಾಪಿಲ್ಲಿಯಾದ ಮೇಲ್ಛಾವಣಿ!
ಇಂದು ಬೆಳ್ಳಂಬೆಳಗ್ಗೆ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ನಡೆದಿದೆ.
ಹಾವೇರಿ (ಆ.17) : ಇಂದು ಬೆಳ್ಳಂಬೆಳಗ್ಗೆ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ನಡೆದಿದೆ.
ಶ್ರೀಕಾಂತ ಎನ್ನುವವರಿಗೆ ಸೇರಿದ ಸ್ಪಾರ್ಕ್ ಕ್ಯಾಂಡಲ್ ಕಂಪನಿ. ಸ್ಫೋಟದ ತೀವ್ರತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ತಗಡಿನ ಮೇಲ್ಛಾವಣಿ. ಕಳೆದ ವಾರವಷ್ಟೇ ಇದೇ ಜಾಗದಲ್ಲಿ ಸ್ಫೋಟ ಸಂಭವಿಸಿತ್ತು.ಈ ದುರ್ಘಟನೆಯಲ್ಲಿ ಓರ್ವ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿ, ಲಕ್ಷಾಂತರ ರೂ. ನಷ್ಟವಾಗಿತ್ತು.
ಪ್ರಕರಣ ಮಾಸುವ ಮುನ್ನವೇ ಮತ್ತೆ ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ಸದ್ದಿಗೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಣಿಬೇನ್ನೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ
ಸ್ಪಾರ್ಕ್ ಕ್ಯಾಂಡಲ್ ಅಗ್ನಿ ಅವಘಡ: ಪರವಾನಗಿ ಇಲ್ಲದೆ ಚಟುವಟಿಕೆ, ಅಧಿಕಾರಿಗಳ ನಿರ್ಲಕ್ಷ್ಯ
ಬೆಂಕಿ ಅವಘಡದಲ್ಲಿ ವೃದ್ಧರಿಗೆ ಗಾಯ
ಹೊಳೆನರಸೀಪುರ: ತಾಲೂಕಿನ ಕಲ್ಲುಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಚಂದ್ರಶೇಖರಯ್ಯ(70) ಎಂಬ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಕಲ್ಲುಬ್ಯಾಡರಹಳ್ಳಿ ಗ್ರಾಮದ ವೀರಪ್ಪ ಎಂಬುವರ ಪುತ್ರ ಚಂದ್ರಶೇಖರಯ್ಯನವರು ಹೊಗೆಸೊಪ್ಪು ಬ್ಯಾರಲ್ ಮನೆಯಲ್ಲಿ ಹೊಗೆಸೊಪ್ಪಿಗೆ ತಗುಲಿದ ಬೆಂಕಿ ನಂದಿಸಲು ಹೋದ ಸಂದರ್ಭದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಶೇ.60 ರಷ್ಟುಸುಟ್ಟಗಾಯಗಳಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಬಿಎಂಪಿ: ‘ಬೆಂಕಿ’ಗೆ ಅವಸರದ ಪರೀಕ್ಷೆಯೇ ಕಾರಣ; ಆಂತರಿಕ ತನಿಖೆ ಬಹಿರಂಗ